ಮುಂಬೈ:  ರೈಲ್ವೆ ಪ್ಲಾಟ್ ಫಾರ್ಮ್ವೊಂದರಲ್ಲಿ ಹಾಡಿದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಖ್ಯಾತಿಗಳಿಸಿದ ರಾನು ಮೊಂಡಲ್ ಬಗ್ಗೆ ಲತಾ ಮಂಗೇಶ್ಕರ್ ನೀಡಿರುವ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಒಳಗಾಗಿದೆ.


COMMERCIAL BREAK
SCROLL TO CONTINUE READING

ಲತಾ ಮಂಗೇಶ್ಕರ್ ಅವರು ತಮ್ಮ ಗಾಯನದಲ್ಲಿ ಅನುಕರಣೆ ವಿಧಾನಕ್ಕಿಂತ ಹೆಚ್ಚಾಗಿ ಸ್ವಂತಿಕೆ ಇರಬೇಕು ಎಂದು ಹೇಳಿರುವುದಕ್ಕೆ ಟ್ವಿಟ್ಟರ್ ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಂತಹ ಸೂಪರ್ ಸ್ಟಾರ್ ರೊಬ್ಬರು ತುಂಬಾ ಅಪ್ರಜ್ಞಾಪೂರ್ವಕವಾಗಿ ಮಾತನಾಡಿದ್ದಾರೆ ಎಂದು ಟ್ವಿಟ್ಟರ್ ಬಳಕೆದಾರರು ಬರೆದುಕೊಂಡಿದ್ದಾರೆ.ಇನ್ನೊಬ್ಬರು 'ರಾನು ಮೊಂಡಲ್ ಒಬ್ಬ ಬಡ ಮಹಿಳೆ ತಮ್ಮ ಜೀವನಕ್ಕಾಗಿ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಹಾಡಿದ್ದಾರೆ.ಈಗ ಅವರ ಧ್ವನಿಯನ್ನು ಸಾಮಾಜಿಕ ವಲಯದಲ್ಲಿ ಗುರುತಿಸಿದೆ. ಆದ್ದರಿಂದ ಅವರು ಈಗ ತಾರೆಯಾಗಿದ್ದಾರೆ.ಆದರೆ ಲತಾಜಿ ಅವರಿಗೆ ಹೆಚ್ಚು ಕೃತಜ್ಞತೆ, ಅಭಿನಂದನೆ ಮತ್ತು ಸಹಾಯ ಮಾಡುವ ಮೂಲಕ ಈ ಅನುಕರಣೆ ಕುರಿತ ಉಪನ್ಯಾಸವನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.


ರಾಣಘಾಟ್ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಾಗ್ಮಾ ಹೈ" ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ವೈರಲ್ ಆದ ನಂತರ ರಾನು ಮೊಂಡಲ್ ಅವರಿಗೆ ಗಾಯಕ ಹಿಮೇಶ್ ರೇಶಮ್ಮಿಯಾ ಹಿನ್ನಲೆ ಗಾಯನದ ಅವಕಾಶ ನೀಡಿದ್ದಾರೆ. ಆ ಮೂಲಕ ಬೀದಿ ಗಾಯಕಿಯಿಂದ ಬಾಲಿವುಡ್‌ನ ಚೊಚ್ಚಲ ಹಿನ್ನೆಲೆ ಗಾಯಕಿಯಾಗಿ ಖ್ಯಾತಿ ಪಡೆಯಲಿದ್ದಾರೆ.