ಬೆಂಗಳೂರು: ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ #MeToo ಆರೋಪದ ವಿಚಾರವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದನ್ನು ಸಮರ್ಥಿಸಿಕೊಂಡಿರುವ ನಟ ಪ್ರಕಾಶ್ ರೈ, ಆಚಾರ..ವಿಚಾರಗಳಿಲ್ಲದ ನಾಲಿಗೆಗಳು..ತಮ್ಮ ನೀಚ ಬುದ್ದಿಯಿಂದ ತಮ್ಮ ತಮ್ಮ ಹಿತಾಸಕ್ತಿಗಳ ಬೇಳೆ ಬೇಯಿಸಿಕೊಳ್ಳುತ್ತಾ #ಮೀಟೂ ಅಭಿಯಾನವನ್ನು ದಾರಿ ತಪ್ಪಿಸುವ ಮುನ್ನ ... #justasking ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅದರಲ್ಲಿ, ಅರ್ಜುನ್ ನನ್ನ ಬಹುಕಾಲದ ಗೆಳೆಯ... ಸಹ ಪ್ರಯಾಣಿಕ... ಆತನನ್ನು ನಾನು ತುಂಬಾ ಚೆನ್ನಾಗಿ, ನಿಮ್ಮೆಲ್ಲರಿಗಿಂತಲೂ ಆಂತರಿಕವಾಗಿ ಬಲ್ಲೆ... ನಾನು ಎಲ್ಲೂ ಆತನನ್ನು ಸಾರಾಸಗಟಾಗಿ ಅಪರಾಧಿ ಎನ್ನಲಿಲ್ಲ... ಯಾರ ಬಗ್ಗೆಯೂ ಅರ್ಥವಿಲ್ಲದ ದೂಷಣೆ ಮಾಡುವವನೂ ನಾನಲ್ಲ... ಎಂದು ಬರೆದಿದ್ದಾರೆ.


ಶ್ರುತಿ.. ಎಲ್ಲರೂ ದೂಷಿಸುತ್ತಿರುವಂತೆ ಅವಕಾಶಿವಾಡಿ ಹೆಣ್ಣು  ಮಗಳಲ್ಲ.. ಅಪ್ಪಟ ಪ್ರತಿಭಾವಂತೆ.. ದಿಟ್ಟ ಹೆಣ್ಣು.. ನಮ್ಮೆಲ್ಲರಂತೆ ಇವರನ್ನೂ ಬೆಳೆಸಿರುವುದು ನಮ್ಮ ಸಮಾಜವೇ....


ಈ ಇಬ್ಬರೂ ಚಿತ್ರರಂಗದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕಾದವರೂ.. ಮಾಡಲು ಸಾಧ್ಯವಿರುವವರು.. 


ಈ ಸತ್ಯದ ಹಿನ್ನೆಲೆಯಲ್ಲಿ ನಾನು ತುಂಬಾ ಮಾರ್ಮಿಕವಾಗಿ ಕೆಳುತ್ತಿರುವ್ ಸೂಕ್ಷ್ಮತೆಯ ಪ್ರತಿಕ್ರಿಯೆ ಎಲ್ಲಿರಿಗೂ ಅರ್ಥವಾದರೆ ಒಳಿತು... 


ಪಕ್ಷಪಾತವಿಲ್ಲದೆ.. ಪೂರ್ವಾಗ್ರಹಪೀಡಿತರಲ್ಲದ ಕೆಲವು ಹಿರಿಯರು ಇಬ್ಬರನ್ನೂ ಕರೆಸಿ ಕೂರಿಸಿ ತಕ್ಷಣವೇ ಇತ್ಯರ್ಥಿಸಿ... ಎಂದು ಬರೆದಿದ್ದಾರೆ.