Mid Week Elimination in Bigg Boss Kannada: ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ಶಾಕಿಂಗ್ ಎಲಿಮಿನೇಷನ್ ನಡೆದಿದೆ, ಪ್ರಬಲ ಸ್ಪರ್ಧಿಯೊಬ್ಬರನ್ನು ಬಿಗ್ ಬಾಸ್ ಎಲಿಮಿನೇಟ್ ಮಾಡಿದ್ದಾರೆ. ಅಂದಹಾಗೆ ಆ ಸ್ಪರ್ಧಿ ಬೇರಾರು ಅಲ್ಲ, ತನಿಷಾ ಕುಪ್ಪಂಡ.


COMMERCIAL BREAK
SCROLL TO CONTINUE READING

ಬಿಗ್ ಬಾಸ್ ಮನೆಯ ಸ್ಟ್ರಾಂಗೆಸ್ಟ್ ಸ್ಪರ್ಧಿ ಆಗಿರುವ ತನಿಷಾ, ಇಂದಿಗೆ ತಮ್ಮ ಬಿಗ್ ಬಾಸ್ ಮನೆಯ ಪಯಣವನ್ನು ಮುಗಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿಯು ಪ್ರೋಮೋ ಬಿಡುಗಡೆ ಮಾಡಿದ್ದು, ತನಿಷಾ ಕಣ್ಣೀರು ಹಾಕುತ್ತಾ ಇತರ ಸ್ಪರ್ಧಿಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವುದನ್ನು ಕಾಣಬಹುದಾಗಿದೆ.


ಇದನ್ನೂ ಓದಿ: BBK 10: ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಓಟ್ ಪಡೆಯುತ್ತಿರೋದು ಈ ಸ್ಪರ್ಧಿಯೇ: ಟಾಪ್ 5ರಲ್ಲಿ ಸ್ಥಾನ ಪಕ್ಕಾ! ವಿನ್ನರ್ ಕೂಡ ಇವರೇ..!


ವಾರದ ಮಧ್ಯೆಯೇ ಬಿಗ್ ಬಾಸ್ ಎಲಿಮಿನೇಷನ್ ಪ್ರಕ್ರಿಯೆ ನಡೆಸಿದ್ದು, ಎಲ್ಲರನ್ನು ಗಾರ್ಡನ್ ಏರಿಯಾಗೆ ಕರೆಸಿದ್ದಾರೆ, ಈ ಸಂದರ್ಭದಲ್ಲಿ ಬಿಗ್ ಬಾಸ್ ಸೂಚಿಸುವ ಸ್ಪರ್ಧಿ ಮನೆಯ ಮುಖ್ಯದ್ವಾರದ ಮೂಲಕ ಹೊರಬರಬೇಕು ಎಂದು ಆದೇಶ ನೀಡಿದ್ದಾರೆ. ಅದೇ ವೇಳೆಗೆ ತನಿಷಾ ಅವರ ಪಯಣ ಬಿಗ್ ಬಾಸ್ ಮನೆಯಲ್ಲಿ ಇಲ್ಲಿಗೆ ಮುಕ್ತಾಯವಾಗಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.


ಇದರಿಂದ ನೊಂದ ತನಿಷಾ, “ನೀವೆಲ್ಲಾ ತುಂಬಾ ಆಸೆ ಪಟ್ಟಿದ್ರಲ್ಲಾ ನಾನು ಆಚೆ ಹೋಗ್ಬೇಕು ಅಂತಾ… ಯಾಕೆ ಬಿಗ್ ಬಾಸ್… ನನ್ನ ವಾಯ್ಸ್ ನಿಮಗೆಲ್ಲಾ ಕಿರಿಕಿರಿ ಮಾಡ್ತಿತ್ತಲ್ಲಾ…ಇನ್ಮೇಲ್ ನನ್ನ ವಾಯ್ಸ್ ನಿಮಗೆ ಯಾರಿಗೂ ಇರಿಟೇಟ್ ಮಾಡಲ್ಲ” ಎನ್ನುತ್ತಾ ಕಣ್ಣೀರು ಸುರಿಸಿದ್ದಾರೆ.


ಇದನ್ನೂ ಓದಿ: 2024ರಲ್ಲಿ 3 ಬಾರಿ ಬದಲಾಗಲಿದೆ ಶನಿದೇವನ ಸ್ಥಾನ: ಇನ್ಮುಂದೆ ಈ 3 ರಾಶಿಗಳಿಗೆ ಸುಖದ ಸುಪ್ಪತ್ತಿಗೆ- ಕಷ್ಟಗಳ ಬಗ್ಗೆ ಚಿಂತೆಯೇ ಬೇಡ


ಈ ಪ್ರೋಮೋ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಪೇಜ್’ನಲ್ಲಿ ಹಂಚಿಕೊಳ್ಳಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.