MediaOne Telecast Banned - ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (Ministry Of Information And Broadcasting) "ಭದ್ರತಾ ಕಾರಣಗಳನ್ನು" ಉಲ್ಲೇಖಿಸಿ ಮಲಯಾಳಂ ಸುದ್ದಿ ವಾಹಿನಿ 'ಮೀಡಿಯಾ ಒನ್' ಪ್ರಸಾರವನ್ನು ಸೋಮವಾರ ಸ್ಥಗಿತಗೊಳಿಸಿದೆ. ಜಮಾತ್-ಎ-ಇಸ್ಲಾಮಿ ನಿಯಂತ್ರಣದಲ್ಲಿರುವ ಚಾನೆಲ್ ಅನ್ನು ಸೋಮವಾರ ಮಧ್ಯಾಹ್ನ ಸ್ಥಗಿತಗೊಳಿಸಲಾಗಿದೆ. ಮಧ್ಯಾಹ್ನ ಸಚಿವಾಲಯದ ನಿರ್ಧಾರವನ್ನು ಪ್ರಕಟಿಸಿದ ಚಾನೆಲ್ ಸಂಪಾದಕ ಪ್ರಮೋದ್ ರಾಮನ್ (Pramod Raman), ತಮ್ಮ ಕಾನೂನು ತಂಡವು ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದೆ ಎಂದು ಇತರೆ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಸರ್ಕಾರವನ್ನು ಗುರಿಯಾಗಿಸಿದ ಪ್ರತಿಪಕ್ಷ
ಭದ್ರತಾ ಕಾರಣಗಳಿಗಾಗಿ ನಿಷೇಧ ಹೇರಲಾಗಿದೆ ಎಂದು ಸಚಿವಾಲಯ ಹೇಳಿದೆ ಎಂದು ಅವರು ಹೇಳಿದ್ದಾರೆ. ಆದರೆ ಇನ್ನೂ ನಮಗೆ ಅದರ ಕುರಿತು ವಿವರಗಳು ಸಿಕ್ಕಿಲ್ಲ. ನ್ಯಾಯ ಸಿಗುತ್ತದೆ ಎಂಬ ಭರವಸೆ ನಮಗಿದೆ ಮತ್ತು ಶೀಘ್ರದಲ್ಲೇ ನಮ್ಮ ಪ್ರಸಾರ ಪುನಃ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.  ಹಲವಾರು ಪತ್ರಕರ್ತ ಸಂಘಟನೆಗಳು ಮತ್ತು ಪ್ರತಿಪಕ್ಷ ಕಾಂಗ್ರೆಸ್ ಈ ಕ್ರಮವನ್ನು ಖಂಡಿಸಿವೆ. ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್, ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ವಾಹಿನಿಯ ಪ್ರಸಾರವನ್ನು ಸ್ಥಗಿತಗೊಳಿಸಿದ ಕಾರಣವನ್ನೂ ನೀಡಲಾಗಿಲ್ಲ. ಇದು ನ್ಯಾಚುರಲ್ ಜಸ್ಟಿಸ್ ನ ಉಲ್ಲಂಘನೆಯಾಗಿದೆ. ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ಇದನ್ನು ಖಂಡಿಸಬೇಕು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ಈ ಆರು ಸಂಕೇತಗಳನ್ನು ತುಂಬಾ ಅಶುಭ ಎನ್ನಲಾಗುತ್ತದೆ, ದೊರೆತರೆ ಕೆಟ್ಟ ಕಾಲ ಆರಂಭ


ಎರಡನೇ ಬಾರಿಗೆ ಪ್ರಸಾರ ತಡೆಹಿಡಿಯಲಾಗಿದೆ
ಮೀಡಿಯಾ ಒನ್ ನಿಷೇಧಕ್ಕೆ ಒಳಗಾಗಿರುವುದು ಇದೆ ಮೊದಲಲ್ಲ. ಈ ಹಿಂದೆ ಮಾರ್ಚ್ 2020 ರಲ್ಲಿ, ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳನ್ನು ವರದಿ ಮಾಡುವಾಗ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಆಕ್ಟ್ 1998 (Cable Television Netwok Act 1998) ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಂದ್ರ ಸರ್ಕಾರ  ಚಾನೆಲ್ ಅನ್ನು 48 ಗಂಟೆಗಳ ಕಾಲ ನಿಷೇಧಿಸಿತ್ತು. ಆದರೆ, 10 ವರ್ಷಗಳ ಹಿಂದೆ ಚಾನೆಲ್ ಪಡೆದ ಪರವಾನಗಿಯನ್ನು ನವೀಕರಿಸಲು ವಿಫಲವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಇತ್ತೀಚಿನ ನಿಷೇಧದ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ. ಮಾಹಿತಿ ಮತ್ತು ಪ್ರಸಾರ ನಿಯಮಗಳ ಪ್ರಕಾರ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಮಾಡಲು ಗೃಹ ಸಚಿವಾಲಯದ ಭದ್ರತಾ ಅನುಮತಿ ಅಗತ್ಯವಿದೆ ಎಂದು ಅಧಿಕಾರಿ ಹೇಳಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇನ್ನೂ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.


ಇದನ್ನೂ ಓದಿ-Anand Singh : ಡಿಕೆಶಿ ಅವರ ಮನೆಗೆ ನಾನು ಹೋಗಬಾರದಾ? : ಸಚಿವ ಆನಂದ್ ಸಿಂಗ್


ಏನಿದು ಜಮಾತ್-ಎ-ಇಸ್ಲಾಮಿ ?
ಜಮಾತ್-ಎ-ಇಸ್ಲಾಮಿ ಬ್ರಿಟಿಷರ ಆಳ್ವಿಕೆಯ ಕಾಲದಿಂದ ನಡೆದು ಬಂದ  ಒಂದು ಸಂಘಟನೆಯಾಗಿದೆ. ಇದನ್ನು 1941 ರಲ್ಲಿ ಬ್ರಿಟಿಷ್ ಭಾರತದಲ್ಲಿ ಇಸ್ಲಾಮಿಕ್-ರಾಜಕೀಯ ಸಂಸ್ಥೆ ಮತ್ತು ಸಾಮಾಜಿಕ ಸಂಪ್ರದಾಯವಾದಿ ಚಳುವಳಿಯಾಗಿ ಸ್ಥಾಪಿಸಲಾಯಿತು. ಆದಾಗ್ಯೂ, 1947 ರಲ್ಲಿ ಭಾರತದ ವಿಭಜನೆಯ ನಂತರ, ಜಮಾತ್ ಭಾರತ ಮತ್ತು ಪಾಕಿಸ್ತಾನದಲ್ಲಿ ಎರಡು ಪ್ರತ್ಯೇಕ ಸಂಘಟನೆಗಳಾಗಿ ವಿಭಜನೆಯಾಯಿತು. ಅವರ ಹೆಸರುಗಳು ಕ್ರಮವಾಗಿ ಜಮಾತ್-ಎ-ಇಸ್ಲಾಮಿ ಹಿಂದ್ ಮತ್ತು ಜಮಾತ್-ಎ-ಇಸ್ಲಾಮಿ ಪಾಕಿಸ್ತಾನ ಆಗಿದೆ.


ಇದನ್ನೂ ಓದಿ-WhatsApp ಬಳಕೆದಾರರ ಟೆನ್ಶನ್ ಹೆಚ್ಚಿಸಲಿದೆಯೇ Google, ಭಾರಿ ಬದಲಾವಣೆಗೆ ಸಿದ್ಧತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.