ಬೆಂಗಳೂರು: ಕಾಮಿಡಿ ಕಿಲಾಡಿ ಖ್ಯಾತಿಯ ಸ್ಯಾಂಡಲ್‌ವುಡ್‌ ನಟ ಶಿವರಾಜ್ ಕೆಆರ್ ಪೇಟೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ತಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಮಹಿಳೆಯೊಬ್ಬರು ನಟನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನ ಸುಬ್ರಮಣ್ಯನಗರ ಠಾಣೆಯಲ್ಲಿ ಶಿವರಾಜ್‌ ಕೆಆರ್‌ ಪೇಟೆ ವಿರುದ್ಧ ಶಾರದಾ ಬಾಯಿ ಎಂಬುವರು ದೂರು ನೀಡಿದ್ದಾರೆ. ಕಾರು ಟಚ್ ಮಾಡಿದ್ದಲ್ಲದೇ, ತಮೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಬೆಂಗಳೂರಿನ ರಾಜಕುಮಾರ್ ರಸ್ತೆಯ 10ನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ: Medicine price hike: ಪ್ಯಾರಸಿಟಮಾಲ್ ಸೇರಿದಂತೆ 800ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯಲ್ಲಿ ಏರಿಕೆ!


ಕಾರು ಟಚ್ ಮಾಡಿದ್ದಲ್ಲದೇ ʼಯಾವಳೇ ನೀನುʼ ಅಂತಾ ನಟ ಶಿವರಾಜ್‌ ಕೆಆರ್‌ ಪೇಟೆ ಅವಾಚ್ಯ ಶಬ್ದ ಬಳಸಿದ್ದಾರೆಂದು ಮಹಿಳೆ ಆರೋಪ ಮಾಡಿದ್ದಾಳೆ. ಮಾರ್ಚ್‌ 30ರ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ತಡವಾಗಿ ವರದಿಯಾಗಿದೆ.


ಪ್ರಕರಣ ಸಂಬಂಧ ಪೊಲೀಸರು ಶಿವರಾಜ್ ಕೆಆರ್ ಪೇಟೆ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರಂತೆ. ಈ ಬಗ್ಗೆ NCR ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.


ಇದನ್ನೂ ಓದಿ: ರಾಮ್ ಲೀಲಾ ಮೈದಾನದಲ್ಲಿ ಪ್ರತಿಪಕ್ಷಗಳ ಸಮಾವೇಶ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.