ನವದೆಹಲಿ : 200 ಕೋಟಿಗೂ ಅಧಿಕ ಹಣ ವರ್ಗಾವಣೆ ಪ್ರಕರಣದ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್  (Sukesh Chandrashekhar)  ವಿರುದ್ಧ ತನಿಖೆಗೆ ಸಂಬಂಧಿಸಿದಂತೆ,  ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರಿಗೆ ಜಾರಿ ನಿರ್ದೇಶನಾಲಯ (ED)ನೋಟೀಸ್ ಜಾರಿ ಮಾಡಿತ್ತು. ಆದರೆ ನಟಿ ವಿಚಾರಣೆಗೆ ಹಾಜರಾಗಿರಲಿಲ್ಲ. ತಾನು ಯಾವ ಕಾರಣಕ್ಕೆ ವಿಚಾರಣೆಗೆ ಹಾಜರಾಗುತ್ತಿಲ್ಲ ಎನುವುದನ್ನು ಜಾಕ್ವೆಲಿನ್ ಫರ್ನಾಂಡೀಸ್ ಇಡಿಗೆ  ತಿಳಿಸಿದ್ದರು. ಅಕ್ಟೋಬರ್ 14 ರಂದು ಇದೇ ಪ್ರಕರಣದಲ್ಲಿ ನಟಿ ನೋರಾ ಫತೇಹಿ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ಪ್ರಮುಖ ಮಾಹಿತಿಗಳು ಮುಂಚೂಣಿಗೆ ಬಂದಿವೆ.  


COMMERCIAL BREAK
SCROLL TO CONTINUE READING

ಜಾಕ್ವೆಲಿನ್-ನೋರಾಗೆ ದುಬಾರಿ ಕಾರು ಉಡುಗೊರೆ: 
ತಿಹಾರ್ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲ, ಮೂಲಗಳ ಪ್ರಕಾರ ಸುಕೇಶ್ ನೋರಾ ಫತೇಹಿಗೆ (Nora Fatehi) ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎಂಬ ಅಂಶ ಕೂಡಾ ಬೆಳೆಕಿಗೆ ಬಂದಿದೆ. ಅಲ್ಲದೆ ಈ ಇಬ್ಬರೂ ನಟಿಯರಿಗೆ ಬಂಗಲೆಗಳನ್ನು ಉಡುಗೊರೆಯಾಗಿ ನೀಡಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಈ ಕಾರಣದಿಂದಾಗಿ, ED ಇಬ್ಬರು ನಟಿಯರನ್ನು ವಿಚಾರಣೆಗೆ ಕರೆಯುತ್ತಿದೆ.


ಇದನ್ನೂ  ಓದಿ : Aryan Khan Drugs Case: ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ


ಸುಲಿಗೆ ಹಣದಿಂದ ನೀಡಲಾಗಿತ್ತು ಉಡುಗೊರೆ : 
ಇದಲ್ಲದೇ, ಸುಕೇಶ್,  ಸಾಜಿದ್ ನಾಡಿಯಾಡ್ವಾಲಾ (sajid nadiadwala) ಅವರಿಗೆ ಭಾರೀ ಮೊತ್ತದ ಹಣವನ್ನು ನೀಡುವ ಭರವಸೆಯನ್ನೂ ನೀಡಿದ್ದ ಎನ್ನಲಾಗಿದೆ. ಇಡಿ ಮೂಲಗಳ ಪ್ರಕಾರ, ಈ ವಾಹನಗಳನ್ನು ಸುಲಿಗೆ ಹಣದಿಂದ ಉಡುಗೊರೆಯಾಗಿ ನೀಡಲಾಗಿದೆ. ಸುಕೇಶ್ ಚಂದ್ರಶೇಖರ್ ಅವರು ತಮ್ಮ ಪತ್ನಿ ಮತ್ತು ಮಲಯಾಳಂ ನಟಿ ಲೀನಾ ಪೌಲ್ ಅವರನ್ನು ಬಾಲಿವುಡ್ ಸಿನಿಮಾದಲ್ಲಿ ಲಾಂಚ್ ಮಾಡಲು ಬಯಸಿದ್ದರು.  ಭಾರೀ ಮೊತ್ತವನ್ನು ಪಾವತಿಸುವ ಮೂಲಕ ಮದ್ರಾಸ್ ಕೆಫೆ ಚಿತ್ರದಲ್ಲಿ, ಲೀನಾ ಅವರಿಗೆ ಸುಕೇಶ್ ಒಂದು ಪಾತ್ರವನ್ನು ಕೊಡಿಸಿದ್ದರು. 


ಲೀನಾ ಪೌಲ್ ಅವರನ್ನು ಬಾಲಿವುಡ್‌ಗೆ ಕರೆತರಲು ಬಯಸಿದ್ದ ಸುಕೇಶ್ :
ಸುಕೇಶ್ ಚಂದ್ರಶೇಖರ್ ತಮ್ಮ ಪತ್ನಿಯನ್ನು ಬಾಲಿವುಡ್‌ಗೆ (Bollywood) ಕರೆತರಲು ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದ. ಈ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಹಣದ ಬಗ್ಗೆ ಯಾವುದೇ ಚಿಂತೆ ಮಾಡದಂತೆ ಕೂಡ ಹೇಳಿದ್ದ ಎನ್ನಲಾಗಿದೆ. ಇನ್ನು ತಿಹಾರ್ ಜೈಲಿನಲ್ಲಿ ಆರಾಮವಾಗಿರುವ ಉದ್ದೇಶದಿಂದಲೂ ಸುಕೇಶ್ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ್ದ ಎಂದು ಹೇಳಲಾಗಿದೆ. ಸದ್ಯಕ್ಕೆ  ಸುಕೇಶ್ ಮತ್ತು ಆತನ ಪತ್ನಿ ಲೀನಾ ಇಡಿ ರಿಮಾಂಡ್ ನಲ್ಲಿದ್ದಾರೆ. 


ಇದನ್ನೂ ಓದಿ : Aryan Khan Drugs Case: ನಟಿಯ ಜೊತೆಗೆ ಡ್ರಗ್ಸ್ ಗೆ ಸಂಬಂಧಿಸಿದಂತೆ ಚಾಟ್ ನಡೆಸಿದ್ದಾರೆ Aryan Khan


ಜೈಲುವಾಸ ಅನುಭವಿಸುತ್ತಿರುವ ಸುಕೇಶ್ ಚಂದ್ರಶೇಖರ್ ಮತ್ತು ಲೀನಾ ಪಾಲ್ :  
ಸುಕೇಶ್ ಚಂದ್ರಶೇಖರ್ ಅವರನ್ನು ಈ ವರ್ಷ ಅಂದರೆ 2021 ರಲ್ಲಿ ಪೊಲೀಸರು (Police) ಬಂಧಿಸಿದ್ದಾರೆ. ಜೈಲಿನಲ್ಲಿದ್ದುಕೊಂಡೆ, ಸುಕೇಶ್ 200 ಕೋಟಿಗಳಷ್ಟು ದೊಡ್ಡ ಮೊತ್ತದ ವಸೂಲಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸುಕೇಶ್ ಜೈಲಿನಿಂದ ಪ್ರಸಿದ್ಧ ಉದ್ಯಮಿಯ ಪತ್ನಿಯಿಂದ 50 ಕೋಟಿಗೆ  ಬೇಡಿಕೆ ಇಟ್ಟಿದ್ದ. ಈ ಪ್ರಕರಣಕ್ಕೆ ಸಂಬಧಿಸಿದಂತೆ ಪೊಲೀಸರು ಜೈಲಿನ ಮೇಲೆ ದಾಳಿ ಮಾಡಿದಾಗ, ಸುಕೇಶ್ ಸೆಲ್‌ನಿಂದ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ