ತೆರೆಗೆ ಬರಲು ಸಿದ್ದವಾಗಿದೆ `ಮೂಗಜ್ಜನ ಕೋಳಿ`
ಸುಳ್ಯದ ಗೌಡ ಸಮುದಾಯದವರು ಮಾತಾನಾಡುವ ಅರೆಭಾಷೆಯಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಹಂಬಲದಿಂದ ನಾನು `ಮೂಗಜ್ಜನ ಕೋಳಿ` ಚಿತ್ರವನ್ನು ನಿರ್ದೇಶಿಸಿದ್ದೇನೆ. ಇದೊಂದು ಮಕ್ಕಳ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣವಾಗಿ, ಬಿಡುಗಡೆಗೆ ಸಿದ್ದವಾಗಿದೆ. ಸುಳ್ಯದ ಸುತ್ತಮುತ್ತಲ್ಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ.
ಬೆಂಗಳೂರು: ಸುಳ್ಯದ ಒಕ್ಕಲಿಗರು(ಗೌಡರು) ಆಡುವ ಭಾಷೆ ಅರೆಭಾಷೆ. ಈ ಭಾಷೆಯಲ್ಲಿ "ಮೂಗಜ್ಜನ ಕೋಳಿ" ಎಂಬ ಪ್ರಥಮ ಚಿತ್ರ ನಿರ್ಮಾಣವಾಗಿದೆ. ಈ ಹಿಂದೆ ರಾಷ್ಟ್ರಪ್ರಶಸ್ತಿ ವಿಜೇತ "ಜೀಟಿಗೆ" ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಮಾಡ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು.
ಸುಳ್ಯದ ಗೌಡ ಸಮುದಾಯದವರು ಮಾತಾನಾಡುವ ಅರೆಭಾಷೆಯಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಹಂಬಲದಿಂದ ನಾನು "ಮೂಗಜ್ಜನ ಕೋಳಿ" ಚಿತ್ರವನ್ನು ನಿರ್ದೇಶಿಸಿದ್ದೇನೆ. ಇದೊಂದು ಮಕ್ಕಳ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣವಾಗಿ, ಬಿಡುಗಡೆಗೆ ಸಿದ್ದವಾಗಿದೆ. ಸುಳ್ಯದ ಸುತ್ತಮುತ್ತಲ್ಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಇದು ಅರೆಭಾಷೆಯಲ್ಲಿ ನಿರ್ಮಾಣವಾಗಿರುವ ಪ್ರಥಮ ಚಿತ್ರ. ಕೆ.ಸುರೇಶ್ ಈ ಚಿತ್ರದ ನಿರ್ಮಾಪಕರು.
ಬಯಲುಸೀಮೆಯಲ್ಲಿ ಬೆಳೆದ ಹುಡುಗಿಯೊಬ್ಬಳು ಸುಳ್ಯಕ್ಕೆ ಬರುತ್ತಾಳೆ. ಅಲ್ಲಿನ ಸುಂದರ ಪರಿಸರ ಕಂಡು ಮುಗ್ಧ ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಹುಡುಗಿಯ ಪಕ್ಕದ ಮನೆಯಲ್ಲಿ ಮಾತುಬಾರದ "ಮೂಗಜ್ಜ", ಕೋಳಿ ಸಾಕಿಕೊಂಡು ಇರುತ್ತಾನೆ. ಈ ಹುಡುಗಿ ಹಾಗೂ ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಹಾಗೂ ಸಂಬಂಧಗಳ ಕಥೆಯೇ "ಮೂಗಜ್ಜನ ಕೋಳಿ".
ಇದನ್ನೂ ಓದಿ- WATCH : ಕೆಜಿಎಫ್ 2 ಬಗ್ಗೆ ವೆಂಕಟೇಶ್ ಪ್ರಶ್ನೆಗಳಿಗೆ ಪ್ರಶಾಂತ್ ನೀಲ್ ಉತ್ತರ, ವಿಡಿಯೋ ನೋಡಿ
" ಮೂಗಜ್ಜ" ನ ಪಾತ್ರದಲ್ಲಿ ನವೀನ್ ಕೆ ಪಡೀಲ್ ಹಾಗೂ ಕನಸು ಎಂಬ ಮಗುವಿನ ಪಾತ್ರದಲ್ಲಿ ಕುಮಾರಿ ಗೌರಿಕ ದೀಪುಲಾಲ್ ಅಭಿನಯಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯ, ರಾಘವೇಂದ್ರ ಭಟ್, ಡಾ||ಜೀವನ್ ರಾಮ್ ಸುಳ್ಯ, ಕುಮಾರಿ ಸಾನಿಧ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಡಾ||ಜೀವನ್ ರಾಮ್ ಸುಳ್ಯ ನಿರ್ದೇಶಿಸಿದ್ದ "ಅಮರಸುಳ್ಯ ಸ್ವಾತಂತ್ರ್ಯ ಹೋರಾಟ 1837" ನಾಟಕದ ತುಣುಕುಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಸೂಕ್ತ ಸಮಯ ನೋಡಿಕೊಂಡು ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ದೇಶಕ ಸಂತೋಷ್ ಮಾಡ ತಿಳಿಸಿದರು.
ನನಗೆ ಸಿನಿಮಾ ರಂಗ ಹೊಸತು. ನಾನು ಹೆಚ್ಚು ಸಿನಿಮಾ ನೋಡುವವನು ಅಲ್ಲ. ಆದರೆ ನಿರ್ದೇಶಕ ಸಂತೋಷ್ ಮಾಡ ಅವರು ಈ ಅರೆಭಾಷೆಯ "ಮೂಗಜ್ಜನ ಕನಸು" ಚಿತ್ರದ ಬಗ್ಗೆ ಹೇಳಿದಾಗ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದರು ನಿರ್ಮಾಪಕ ಕೆ.ಸುರೇಶ್.
ಇದನ್ನೂ ಓದಿ- Hoysala movie : ʼಅರೇ ಇದು ಎಂಥಾ ಭಾವನೆʼ.. ʼಹೊಯ್ಸಳʼ ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್..!
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಟ ಸುಂದರರಾಜ್, ಲಕ್ಷ್ಮೀನಾರಾಯಣ್ ಮುಂತಾದವರು ಚಿತ್ರಕ್ಕೆ ಶುಭ ಕೋರಿದರು. ಈ ಮಕ್ಕಳ ಚಿತ್ರಕ್ಕೆ ಸುರೇಶ್ ಅರಸ್ ಸಂಕಲನ, ರಂಜಿತ್ ಅಂಬಾಡಿ ವರ್ಣಾಲಂಕಾರ, ವಿಷ್ಣುಪ್ರಸಾದ್ ಛಾಯಾಗ್ರಹಣ, ಅರುಣ್ ಗೋಪನ್ ಹಾಡು ಸಂಯೋಜನೆ ಹಾಗೂ ದೀಪಾಂಕುರನ್ ಅವರ ಹಿನ್ನೆಲೆ ಸಂಗೀತವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.