Actor Vikrant Massey: ಟಿವಿ ಲೋಕದಿಂದ ತಾವಾಗಿಯೇ ಹೊರ ಹೊಮ್ಮಿ ಬಾಲಿವುಡ್‌ನಲ್ಲಿ ತನಗೊಂದು ಪ್ರತ್ಯೇಕವಾದ ಗುರುತನ್ನು ಸೃಷ್ಟಿಸಿಕೊಂಡಿರುವ ವಿಕ್ರಾಂತ್ ಮೆಸ್ಸೆ ತಮ್ಮ ಹಲವು ಹೇಳಿಕೆಗಳಿಂದ ಜನರ ನಡುವೆ ಸುದ್ದಿಯಲ್ಲಿರುವುದು ಗೊತ್ತೇ ಇದೆ. ಆದರೆ ನಿನ್ನೆಯಷ್ಟೇ ನಟ ದಿಢೀರ್‌ ಸಿನಿರಂಗದಿಂದಲೇ ನಿರ್ಗಮಿಸುವ ನಿರ್ಧಾರ ತೆಗೆದುಕೊಂಡು ಎಲ್ಲರಿಗೂ ಶಾಕ್‌ ನೀಡಿದ್ದಾರೆ.. ಇದೇ ವೇಳೆ ಅವರ ವೈಯಕ್ತಿಕ ವಿಚಾರಗಳು ಸಹ ಬೆಳಕಿಗೆ ಬರುತ್ತಿವೆ.. 


COMMERCIAL BREAK
SCROLL TO CONTINUE READING

ಈ ಹಿಂದೆ ನಟ ಸಂದರ್ಶನವೊಂದರಲ್ಲಿ 'ನನ್ನ ಮನೆಯಲ್ಲಿ ಮಿನಿ ಭಾರತವಿದೆ' ಎಂದು ಹೇಳುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದರು. ಹೌದು ವಾಸ್ತವವಾಗಿ, ಶುಂಭಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ, ವಿಕ್ರಾಂತ್ ಅವರು 'ನಾನು ಪ್ರತಿಯೊಂದು ಧರ್ಮವನ್ನು ಗೌರವಿಸುತ್ತೇನೆ ಏಕೆಂದರೆ ಪ್ರತಿಯೊಂದು ಧರ್ಮದ ಹಬ್ಬವನ್ನು ನನ್ನ ಮನೆಯಲ್ಲಿ ಆಚರಿಸಲಾಗುತ್ತದೆ. ಇದರ ಹಿಂದಿನ ಕಾರಣವೆಂದರೆ ನನ್ನ ತಾಯಿ ಮೀನಾ ಸಿಖ್-ಹಿಂದೂ, ನನ್ನ ತಂದೆ ಜಾಲಿ ಕ್ರಿಶ್ಚಿಯನ್, ಮತ್ತು ನನ್ನ ಕಿರಿಯ ಸಹೋದರ 17 ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡರು ಎಂದು ಹೇಳಿದ್ದರು..


ಇದನ್ನೂ ಓದಿ-'ರೇಖಾ ಎಂದರೆ ಬರೀ ಟೈಂಪಾಸ್ ಮಾತ್ರ...' ಖ್ಯಾತ ಹಿರಿಯ ನಟನ ಸೆನ್ಸೇಷನಲ್‌ ಕಾಮೆಂಟ್!!


ಅಲ್ಲದೇ "ಪ್ರತಿ ಧರ್ಮದ ಹಬ್ಬವನ್ನು ಬಹಳ ಹೆಮ್ಮೆ ಮತ್ತು ಗೌರವದಿಂದ ಆಚರಿಸುತ್ತೇವೆ ಮತ್ತು ನಮ್ಮ ಮನೆಯಲ್ಲಿ ಪ್ರತಿಯೊಂದು ಧರ್ಮವನ್ನು ಗೌರವಿಸುವ ಬಗ್ಗೆ ನಮಗೆ ಹೆಮ್ಮೆ ಇದೆ. ನನ್ನ ಸಹೋದರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರೂ, ಅವರು ಇಡೀ ಕುಟುಂಬದೊಂದಿಗೆ ಕುಳಿತು ಪ್ರತಿ ದೀಪಾವಳಿಯಲ್ಲಿ ಲಕ್ಷ್ಮಿ-ಗಣೇಶ ಪೂಜೆಯನ್ನು ಮಾಡುತ್ತಾರೆ ಮತ್ತು ನನ್ನ ತಂದೆ ಸ್ವತಃ ಮಾ ವೈಷ್ಣೋದೇವಿ ದೇವಸ್ಥಾನಕ್ಕೆ 6 ಬಾರಿ ಭೇಟಿ ನೀಡಿದ್ದಾರೆ.. 


ಜೊತೆಗೆ "ನಾನೇ 2022 ರಲ್ಲಿ ಶೀತಲ್ ಠಾಕೂರ್ ಅವರನ್ನು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದೇನೆ, ನನ್ನ ಮಗನ ಹೆಸರು ವರ್ದನ್ ಮತ್ತು ನಾನು ಪ್ರತಿದಿನ ನನ್ನ ಮನೆಯಲ್ಲಿ ಶಿವನನ್ನು ಪೂಜಿಸುತ್ತೇನೆ, ಅದು ನನಗೆ ತುಂಬಾ ಶಾಂತಿಯನ್ನು ನೀಡುತ್ತದೆ. ಅದಕ್ಕಾಗಿಯೇ ಧರ್ಮದ ಬಗ್ಗೆ ತಪ್ಪು ಮಾತನಾಡುವ ಜನರನ್ನು ನಾನು ಮೆಚ್ಚುವುದಿಲ್ಲ.." ಎಂದು ಹೇಳಿಕೊಂಡಿದ್ದಾರೆ.. 


ಇದನ್ನೂ ಓದಿ-ಒಂದು ಪೋಸ್ಟ್‌ಗೆ ಸೋನು ಶ್ರೀನಿವಾಸ್‌ ಗೌಡ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..! ಇವರ ತಿಂಗಳ ಆದಾಯ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.