Motta Rajendran Networth : ಸಿನಿಮಾಗಳಲ್ಲಿ ಸಾಹಸ, ನೃತ್ಯ, ರೋಮ್ಯಾನ್ಸ್‌ಗೆ ಎಷ್ಟು ಮಹತ್ವ ಇದೆಯೋ ಅದಕ್ಕಿಂತ ಹೆಚ್ಚಿನ ಪಾಮುಖ್ಯತೆ ಹಾಸ್ಯಕ್ಕಿದೆ. ಭಾರತೀಯ ಸಿನಿರಂಗದಲ್ಲಿ ಸಾಕಷ್ಟು ಜನ ಹಾಸ್ಯ ಕಲಾವಿದರಿದ್ದಾರೆ. ಅವರಲ್ಲಿ ತಮಿಳಿನ ಖ್ಯಾತ ನಟ ಮೊಟ್ಟ ರಾಜೇಂದ್ರನ್ ಕೂಡ ಒಬ್ಬರು.


COMMERCIAL BREAK
SCROLL TO CONTINUE READING

ಈತನ ಹೆಸರು ಎಷ್ಟೋ ಸಿನಿಮಾಪ್ರೇಮಿಗಳಿಗೆ ಗೊತ್ತಿರಲಿಕ್ಕಿಲ್ಲ, ಆದರೆ ಅವರ ಫೋಟೋ ನೋಡಿದವರೆಲ್ಲ ಗುರುತಿಸುತ್ತಾರೆ. ಏಕೆಂದರೆ ರಾಜೇಂದ್ರನ್ ಹಲವು ಸ್ಟಾರ್ ಹೀರೋ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಮೇಲಾಗಿ.. ಖಳನಟನಾಗಿ ಮಾತ್ರವಲ್ಲದೆ ತಮ್ಮ ಹಾಸ್ಯದ ಮೂಲಕವೂ ಪ್ರೇಕ್ಷಕರ ಮನಗೆದ್ದಿದ್ದಾರೆ.


ಇದನ್ನೂ ಓದಿ: ʼಪುಷ್ಪಾ ನಟಿʼ ಅನಸೂಯ ಮುಖಕ್ಕೆ ಗಂಭೀರ ಗಾಯ..! ನಿರೂಪಕಿ ಮೇಲೆ ನಡೀತಾ ಮಾರಣಾಂತಿಕ ಹಲ್ಲೆ


ಮೊದಲು ರಾಜೇಂದ್ರನ ಅವರಿಗೆ ತಲೆ ಕೂದಲು ಮತ್ತು ಧ್ವನಿ ಚನ್ನಾಗಿತ್ತು. ಅದರೆ, ಶೂಟಿಂಗ್‌ ವೇಳೆ ನಡೆದ ಘಟನೆ ಅವರ ಅಂದವನ್ನೇ ಕೆಡಿಸಿಬಿಟ್ಟಿತು. ಚೆನ್ನೈನ ಕಲಾಪೇಟ್​ನಲ್ಲಿ ಮಲಯಾಳಂ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.. ಈ ವೇಳೆ ಕೆರೆಯೊಂದಕ್ಕೆ ಹಾರುವ ಸನ್ನಿವೇಶ ಇತ್ತು.


ರಾಜೇಂದ್ರನ್​ ಅವರು ಕೆರೆಗೆ ಹಾರಿದ್ದೇ ಅವರ ರೂಪ ಬದಲಾವಣೆಗೆ ಕಾರಣವಾಯ್ತು.. ಏಕೆಂದರೆ, ಆ ಕೆರೆ ಕಾರ್ಖಾನೆಯಿಂದ ಹೊರಬರುತ್ತಿದ್ದ ಕೆಮಿಕಲ್ಸ್ ನಿಂದ ತುಂಬಿತ್ತು​. ಅದ್ಯಾವುದೂ ತಿಳಿಯದ ರಾಜೇಂದ್ರನ್ ಕೆರೆಗೆ ಹಾರಿದ್ದರು. ಈ ವೇಳೆ ಕೆರೆಯ ನೀರು ಸಹ ರಾಜೇಂದ್ರನ್​ ಹೊಟ್ಟೆಯನ್ನು ಸೇರಿತ್ತು. ಇದರ ಪರಿಣಾಮ ಕೂದಲೆಲ್ಲಾ ಉದುರಿ ಹೋಗಿ, ಧ್ವನಿಯೂ ಬದಲಾಯಿತು. 


ಇದನ್ನೂ ಓದಿ: ವಯಸ್ಸು 50.. 20 ವರ್ಷದ ಮಗ.. ಈಗಲೂ ಈಕೆ ಬಿಕಿನಿ ಹಾಕೋಂಡ್ರೆ ಹುಡುಗರ ಹಾರ್ಟ್‌ಬೀಟ್‌ ಜೋರಾಗುತ್ತೆ! ಯಾರಿರಬಹುದು ಹೇಳಿ?


ರಾಜೇಂದ್ರನ್ ಹಾಸ್ಯನಟ ಮತ್ತು ನಟನಾಗಿ 160 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಅವರ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈಗ ಅವರ ಬಳಿ ರೂ. 15 ಕೋಟಿ ರೂಪಾಯಿ ಮೌಲ್ಯದ ಮನೆ ಇದೆಯಂತೆ. ಅಲ್ಲದೆ ಇವರ ಬಳಿ ಮೂರು ಐಶಾರಾಮಿ ಕಾರುಗಳಿವೆ ಎಂದು ತಿಳಿದು ಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.