ಖ್ಯಾತ ಕಿರುತೆರೆ ನಟಿ ಹಾಗೂ ಬಾಲಿವುಡ್ ನ ಉದಯೋನ್ಮುಖ ತಾರೆ ಮೌನಿ ರಾಯ್ ಸದ್ಯ ಮಾಲ್ಡೀವ್ಸ್ ನಲ್ಲಿ ರಜಾ-ಮಜಾ ಅನುಭವಿಸುತ್ತಿದ್ದಾರೆ. ಎಂದಿನಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯವಾಗಿರುವ ಮೌನಿ, ತಮ್ಮ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಮುದ್ರದ ಅಲೆಗಳನ್ನು ವಿಕ್ಷೀಸುತ್ತಿರುವ ಮೌನಿ, ಕ್ಯಾಮರಾ ಕಣ್ಣಿಗೆ ಬ್ಯಾಕ್ ಪೋಸ್ ನೀಡಿದ್ದಾರೆ. ಶ್ವೇತ ಬಣ್ಣದ ಹೊದಿಕೆಯನ್ನು ಸುತ್ತಿಕೊಂಡಿರುವ ಮೌನಿಯ ಸೌಂದರ್ಯ ಮೌನವಾಗಿ ಏನೇನೋ ಹೇಳುತ್ತಿದೆ ಎಂಬಂತೆ ಗೋಚರಿಸುತ್ತಿದೆ. ಕೇಶದಲ್ಲಿ ಅವರು ಧರಿಸಿರುವ ಹಳದಿ ಬಣ್ಣದ ಹೂವು, ಸೂರ್ಯನ ಕಿರಣಗಳು ಮೌನಿಯ ಜಡೆಯಲ್ಲಿ ಸಿಲುಕಿಕೊಂಡಿವೆಯೇ ಎಂಬಂತೆ ಕಂಡು ಬರುತ್ತಿದೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಮೌನಿ, 'ಯಾವುದೇ ರೀತಿಯ ವಿಚಾರ ನಡೆಸದೆ ಈ ಪುಸ್ತಕದ ಪುಟಗಳನ್ನು ತಿರುವಿ' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರೀತಿಯಿಂದ ಉತ್ತರಿಸಿರುವ ಅವರ ಅಭಿಮಾನಿಗಳು, ಇದೆ ಪುಟದ ಮೇಲೆ ನಾವು ಅಂಟಿಕೊಂಡಿರುವೆವು ಎಂದು ಪ್ರತಿಕ್ರಿಯಿಸಿದ್ದಾರೆ.





COMMERCIAL BREAK
SCROLL TO CONTINUE READING

ಕಿರು ತೆರೆಯ ಮೇಲೆ ಮೂಡಿ ಬಂದ 'ನಾಗಿನ್' ಧಾರಾವಾಹಿಯ ಶಿವನ್ಯ ಹಾಗೂ 'ದೇವೋ ಕೆ ದೇವ್ ಮಹಾದೇವ್' ಧಾರಾವಾಹಿಯ ಸತಿ ಪಾತ್ರಕ್ಕಾಗಿ ಮೌನಿ ರಾಯ್ ಚಿರಪರಿಚಿತರಾಗಿದ್ದಾರೆ.  ಸೆಪ್ಟೆಂಬರ್ 28, 1985ರಲ್ಲಿ ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ನ ಒಂದು ಬಂಗಾಳಿ ಕುಟುಂಬದಲ್ಲಿ ಮೌನಿ ಜನಿಸಿದ್ದಾರೆ. 2007ರಲ್ಲಿ ಕಿರು ತೆರೆಯಲ್ಲಿ ಮೂಡಿ ಬಂದ ಏಕತಾ ಕಪೂರ್ ಅವರ 'ಕ್ಯೋ ಕಿ ಸಾಸ್ ಭಿ ಕಭಿ ಬಹು ಥಿ' ಧಾರಾವಾಹಿಯ ಮೂಲಕ ಅವರು ತಮ್ಮ ಕರಿಯರ್ ಆರಂಭಿಸಿದ್ದಾರೆ. ಬಳಿಕ ಅವರು ಹಲವು ಫೇಮಸ್ TV ಸಿರಿಯಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಹಲವು ಚಿತ್ರಗಳಲ್ಲಿಯೂ ಕೂಡ ಮೌನಿ ಕಾರ್ಯ ನಿರ್ವಹಿಸಿದ್ದಾರೆ.