ನವದೆಹಲಿ : ಬಾಲಿವುಡ್‌ ನಟಿ ಮೌನಿ ರಾಯ್ (Mouni Roy), ತಮ್ಮ ದೀರ್ಘಕಾಲದ ಗೆಳೆಯ  ಸೂರಜ್ ನಂಬಿಯಾರ್ ಅವರೊಂದಿಗೆ ಸಪ್ತಪದಿ (Mouni Roy wedding) ತುಳಿದಿದ್ದಾರೆ. ಜನವರಿ 27  ಗುರುವಾರ ಮುಂಜಾನೆ ಈ ಜೋಡಿ ಮಲಯಾಳಿ ಪದ್ಧತಿಯಂತೆ, ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.  ಇವರ ವಿವಾಹ ವಿದ್ಯೋಗಳು ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತಿವೆ.  


COMMERCIAL BREAK
SCROLL TO CONTINUE READING

ಗೋವಾದಲ್ಲಿ ಸತಿಪತಿಯಾದ ಜೋಡಿ : 
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ (Mouni Roy Suraj Nambiar wedding) ತಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸತಿ ಪತಿಯರಾಗಿದ್ದಾರೆ.  ಹಿಂದೂ ಮಲಯಾಳಿ ಸಂಪ್ರದಾಯದಂತೆ ಇವರ ವಿವಾಹ ನೆರವೇರಿದೆ.   



 


ಇದನ್ನೂ ಓದಿ : ಸಮಂತಾ-ನಾಗ ಚೈತನ್ಯ ಪ್ಯಾಚ್-ಅಪ್! ಮೊದಲು ವಿಚ್ಛೇದನ ಅರ್ಜಿ ಸಲ್ಲಿಸಿದ್ಯಾರು? ತಂದೆ ನಾಗಾರ್ಜುನ ಬಿಚ್ಚಿಟ್ಟರು ಸತ್ಯ!


ಸಮಾರಂಭದಲ್ಲಿ ಭಾಗಿಯಾಗಿದ್ದ ಸೆಲೆಬ್ರಿಟಿಗಳು : 
ಈ ವಿವಾಹ ಸಮಾರಂಭದಲ್ಲಿ ಮೌನಿ ರಾಯ್ (Mouniroy)  ಮತ್ತು ಸೂರಜ್ ನಂಬಿಯಾರ್ (Suraj Nambiar) ಅವರ ಆಪ್ತರು ಭಾಗವಹಿಸಿದ್ದರು. ಗೋವಾದಲ್ಲಿ ಈ ಅದ್ದೂರಿ ವಿವಾಹ ಸಮಾರಂಭ ನೆರವೇರಿದೆ. ಅವರ ವಿಶೇಷ ಗೆಳೆಯರಾದ ಅರ್ಜುನ್ ಬಿಜ್ಲಾನಿ, ಮಂದಿರಾ ಬೇಡಿ (Madira Bedi), ಆಶ್ಕಾ ಗೊರಾಡಿಯಾ ಸೇರಿದಂತೆ ಆಪ್ತರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. 


2019 ರಲ್ಲಿ ಸೂರಜ್ ಮೌನಿ  ಭೇಟಿ :
ಮೌನಿ ಮತ್ತು ಸೂರಜ್ ಕೆಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಬಹಳ ಸಮಯದವರೆಗೆ ಈ ವಿಚಾರವನ್ನು ಮರೆಮಾಚುವಲ್ಲಿ ಕೂಡಾ ಮ್ಪೌನಿ ಯಶಸ್ವಿಯಾಗಿದ್ದಾರು.  ಒಂದು ವರದಿಯ ಪ್ರಕಾರ, ಇಬ್ಬರೂ 2019 ರಲ್ಲಿ ದುಬೈನಲ್ಲಿ ಭೇಟಿಯಾದರು. ನಂತರ ಕ್ರಮೇಣ ಇವರಿಬ್ಬರ ನಡುವೆ ಸ್ನೇಹ ಬೆಳೆದು, ಸ್ನೇಹ  ಕ್ರಮೇಣ ಪ್ರೇಮಕ್ಕೆ ತಿರುಗಿದೆ. 



 


ಇದನ್ನೂ ಓದಿ :  Janhvi Kapoor: ನಟನೆ ಬಿಟ್ಟು ಕ್ರಿಕೆಟರ್ ಆದ ಬಾಲಿವುಡ್ ನಟಿ ಜಾಹ್ನವಿ ಕಪೂರ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.