ಕೊರೊನಾ (Corona) ಬಳಿಕ ಸಾಲು, ಸಾಲು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಇದೇ ಕಾರಣಕ್ಕೆ ಒಂದಾದ ಮೇಲೊಂದರಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ರಿಲೀಸ್ ಮಾಡಲು ತಯಾರಿ ನಡೆದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕನ್ನಡ ಸಿನಿಮಾ ಮಾಡಲ್ಲ ಅಂದಿದ್ದ ನಟಿ...KGF-2 ಟ್ರೈಲರ್ ಬಗ್ಗೆ ಗುಣಗಾನ..!


ಭಾರತದಾದ್ಯಂತ ಬಹುತೇಕ ಚಿತ್ರಗಳು ರಿಲೀಸ್‌ ಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಿವೆ. ಒಂದಷ್ಟು ದೊಡ್ಡ ಚಿತ್ರಗಳು ರಿಲೀಸ್‌ಗೆ ಮುಂದಾಗಿವೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಸಾಲು, ಸಾಲು ಚಿತ್ರಗಳು ತೆರೆಗೆ ಬರಲು ರೆ ಆಗಿವೆ.


ಏಪ್ರಿಲ್‌ನಲ್ಲಿ 'ಕೆಜಿಎಫ್ 2', 'ಬೀಸ್ಟ್' ಚಿತ್ರ ಬಿಡುಗಡೆ ಆಗುತ್ತಿರುವ ಕಾರಣ, ಬೇರೆ ಸಿನಿಮಾಗಳು ಬಿಡುಗಡೆ ಮಾಡಲು ಯೋಚಿಸುವಂತಾಗಿದೆ. ಎರಡೇ ಬಿಗ್‌ ಬಜೆಟ್‌ (Big Budget Cinema) ಸಿನಿಮಾಗಳು ರಿಲೀಸ್‌ ಆಗುತ್ತಿರುವ ಕಾರಣ ಚಿತ್ರಮಂದಿರ ಸಿಗುವುದು ಕಷ್ಟ ಏನು ಆಗುವುದಿಲ್ಲ. 


ಏಪ್ರಿಲ್‌ನಲ್ಲಿ ಕನ್ನಡದ ಒಂದಷ್ಟು ಚಿತ್ರಗಳು ರಿಲೀಸ್ ಆಗುತ್ತಿವೆ.  ಅಲ್ಲದೇ ತೆಲುಗಿನ 5ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿವೆ. ನಟ ಉಪೇಂದ್ರ ಅಭಿನಯದ 'ಹೋಮ್ ಮಿನಿಸ್ಟರ್' ಏಪ್ರಿಲ್ 1ರಂದು ರಿಲೀಸ್ ಆಗುತ್ತಿದೆ. ತ್ರಿಕೋನ, ತಲೆದಂಡ  ಸಹ ತೆರೆಗೆ ಬರುತ್ತಿವೆ. 


ಏಪ್ರಿಲ್ 14ಕ್ಕೆ 'ಕೆಜಿಎಫ್ 2' (KGF2) ಚಿತ್ರ ತೆರೆಗೆ ಬರಲಿದೆ. ಏಪ್ರಿಲ್ 29ಕ್ಕೆ ಕನ್ನಡದ 'ಕ್ರಿಟಿಕಲ್ ಕೀರ್ತನೆಗಳು' ಮತ್ತು 'ಮೇಲೊಬ್ಬ ಮಾಯಾವಿ' (Melobba Mayavi) ಬಿಡುಗಡೆಯಾಗಲಿವೆ. 


ಇದನ್ನೂ ಓದಿ: Deepika Padakone: ರಣವೀರ್ ಸಿಂಗ್ ಪ್ರೀತಿಯಿಂದ ದೀಪಿಕಾಗೆ ಇಟ್ಟ ನಿಕ್‌ ನೇಮ್‌ ಏನು ಗೊತ್ತೇ..?


ಇನ್ನು ತೆಲುಗಿನಲ್ಲಿ 'ಕೆಜಿಎಫ್ 2' ಚಿತ್ರಕ್ಕೂ ಒಂದು ದಿನದ ಮೊದಲು ಏಪ್ರಿಲ್ 13ಕ್ಕೆ 'ಬೀಸ್ಟ್' (Beast) ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಡಬ್ ಆಗಿದ್ದು, ಬಿಡುಗಡೆಯಾಗಲಿದೆ. ಏಪ್ರಿಲ್ 1 ರಂದು ತಾಪ್ಸಿ ಪನ್ನು ಅಭಿನಯದ 'ಮಿಷನ್ ಇಂಪಾಸಿಬಲ್', ಏಪ್ರಿಲ್ 22ಕ್ಕೆ ವಿಶ್ವಕ್ ಸೆನ್ ಅಭಿನಯದ 'ಅಶೋಕ ವನಂಲೊ ಅರ್ಜುನ ಕಲ್ಯಾಣಂ', 'ಜಯಮ್ಮ ಪಂಚಾಯಿತಿ', 'ಕೃಷ್ಣ ವೃಂಧ ವಿಹರಿ' ಚಿತ್ರಗಳು ಬೆಳ್ಳಿ ತೆರೆಗ ಬರಲಿವೆ.


ಏಪ್ರಿಲ್ 8ರಂದು ವರುಣ್ ತೇಜ್ ಅಭಿನಯದ 'ಗನಿ', ಏಪ್ರಿಲ್ 29ಕ್ಕೆ ಚಿರಂಜೀವಿ ಹಾಗೂ ರಾಮ್‌ ಚರಣ್ ಅಭಿನಯದ 'ಆಚಾರ್ಯ' ಬಿಡುಗಡೆಯಾಗಲಿವೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.