Kheyos Movie release date : ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚು ಯಶಸ್ವಿಯಾಗುತ್ತಿದೆ.  ಉತ್ತಮ ಕಂಟೆಂಟ್ ವುಳ್ಳ "ಖೆಯೊಸ್" ಚಿತ್ರ ಕೂಡ ಇದೇ ಫೆಬ್ರವರಿ 17 ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಮಾಹಿತಿ ನೀಡಿದರು. ನಾನು ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. "ಖೆಯೊಸ್" ಅಂದರೆ ಮನುಷ್ಯ ಮನಸ್ಸಿನಲ್ಲಾಗುವ ಗೊಂದಲ. ಇದು ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥೆ. ನಾಯಕ ಅನಿರೀಕ್ಷಿತವಾಗಿ ಒಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಆತ ತನ್ನ ಜಾಣ್ಮೆಯಿಂದ ಹೇಗೆ ಆ ಸಮಸ್ಯೆಯಿಂದ ಹೇಗೆ ಪಾರಾಗುತ್ತಾನೆ ಎಂಬುದು ಕಥಾಹಂದರ. ನಾಯಕನಾಗಿ ಅಕ್ಷಿತ್ ಶಶಿಕುಮಾರ್, ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.   THE BLACK PEBBLE ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದೇ 17ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಜಿ.ವಿ.ಪ್ರಸಾದ್ ಮಾಹಿತಿ ನೀಡಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Bigg Boss ಸ್ಪರ್ಧಿಗೆ ಬಟ್ಟೆ ಬಿಚ್ಚುವಂತೆ ಖ್ಯಾತ ನಿರ್ದೇಶಕನ ಟಾರ್ಚರ್‌.!


ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಅವರು ಕಥೆ ಹೇಳುವಾಗ ನಾನು ಗಡ್ಡ ಬಿಟ್ಡಿದೆ. ನಮ್ಮ ಪಾತ್ರಕ್ಕೆ ಈ ರೀತಿಯ ಗೆಟಪ್ ಬೇಕಿತ್ತು ಎಂದರು.‌ ಎಂ ಬಿ ಬಿ ಎಸ್ ಓದುತ್ತಿರುವ ಹುಡುಗನ ಪಾತ್ರ ನನ್ನದು. ಅದಿತಿ ಪ್ರಭುದೇವ ಸೇರಿದಂತೆ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಮ್ಮ ತಂದೆ ಕೂಡ ಇದರಲ್ಲಿ ನಟಿಸಿದ್ದಾರೆ ಎಂದು ಅಕ್ಷಿತ್ ಶಶಿಕುಮಾರ್ ತಿಳಿಸಿದರು.


"ಖೆಯೊಸ್" ಎಂದರೆ ಮನಸ್ಸಿನಲ್ಲಾಗುವ ಅಸ್ತವ್ಯಸ್ತ, ಗೊಂದಲ ಇತ್ಯಾದಿ. ನಾನು ಕೂಡ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದೇನೆ. ಅಕ್ಷಿತ್ ಅವರು ದೊಡ್ಡ ಹೀರೊ ಮಗ ಅಂತ ಏನು ಇಲ್ಲದೆ, ಎಲ್ಲರೊಂದಿಗೆ ಬೆರೆಯುವ ಗುಣ ಇಷ್ಟವಾಯಿತು ಎಂದು ನಾಯಕಿ ಅದಿತಿ ಪ್ರಭುದೇವ ಹೇಳಿದರು.


ಇದನ್ನೂ ಓದಿ : ಹ್ಯಾಟ್ರಿಕ್ ಹೀರೋ ಶಿವಣ್ಣ, ಕಮಲ್ ಹಾಸನ್ ಮತ್ತು ಚಿರಂಜೀವಿ ಎನರ್ಜಿ ಸೀಕ್ರೆಟ್ ಏನು?


ನಿರ್ದೇಶಕ ಜಿ.ವಿ.ಪ್ರಸಾದ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು ಎಂದರು ನಿರ್ಮಾಪಕರಾದ ಪಾರುಲ್ ಅಗರವಾಲ್ ಹಾಗೂ ಡಾ|| ಹೇಮಚಂದ್ರ ರೆಡ್ಡಿ. ಚಿತ್ರದಲ್ಲಿ ನಟಿಸಿರುವ ಆರ್.ಕೆ.ಚಂದನ್, ಶಿವಾನಂದ್ ತಮ್ಮ ಪಾತ್ರದ ಬಗ್ಗೆ ಹಾಗೂ ವಿಜಯ್ ಹರಿತ್ಸ ಸಂಗೀತದ ಬಗ್ಗೆ ಮಾತನಾಡಿದರು. ಬೆಂಗಳೂರು ಕುಮಾರ್ ಈ ಚಿತ್ರದ ವಿತರಕರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.