ನವದೆಹಲಿ: ಮೋಹಿತ್ ಸೂರಿ ನಿರ್ದೇಶನದ 'ಮಲಂಗ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಆದಿತ್ಯರಾಯ್ ಕಪೂರ್, ದಿಶಾ ಪಟಾನಿ, ಅನಿಲ್ ಕಪೂರ್ ಹಾಗೂ ಕುನಾಲ್ ಖೇಮು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಈ ಟ್ರೈಲರ್ ನಲ್ಲಿ 'ಪ್ರಾಣ ತೆಗೆಯುವುದು ನನ್ನ ಪಾಲಿಗೆ ನಷೆಯಾಗಿದೆ' ಎಂದು ಹೇಳುತ್ತಿದ್ದರೆ, ಅನಿಲ್ ಕಪೂರ್ ಕೂಡ ವಿಶಿಷ್ಟ ಪಾತ್ರದಲ್ಲಿ ಕಂಡುಬರುತ್ತಿದ್ದಾರೆ. ಟ್ರೈಲರ್ ನಲ್ಲಿ ಎಲ್ಲವನ್ನು ಋಣಾತ್ಮಕವಾಗಿ ಬಿಂಬಿಸಲಾಗಿದೆ. ಈ ನಾಲ್ಕೂ ಪಾತ್ರಗಳಿಗೆ ಜೀವ ತೆಗೆಯುವುದು ಇಷ್ಟ ಎಂಬಂತೆ ತೋರಿಸಲಾಗಿದೆ. ಆದರೆ, ಯಾರು, ಯಾವಾಗ ಮತ್ತು ಯಾರ ಪ್ರಾಣ ತೆಗೆಯಲಿದ್ದಾರೆ ಎಂಬುದರ ಖುಲಾಸೆಗಾಗಿ ಪ್ರೇಕ್ಷಕರು ಫೆಬ್ರವರಿ ೭ರವರೆಗೆ ಕಾಯಬೇಕಾಗಲಿದೆ. ಏಕೆಂದರೆ ಫೆ.೭ಕ್ಕೆ ಈ ಚಿತ್ರ ಬೆಳ್ಳಿ ಪರದೆಗೆ ಬರಲಿದೆ. 


COMMERCIAL BREAK
SCROLL TO CONTINUE READING


ಆದಿತ್ಯ ಅವರ ಜೊತೆಗೆ ಮೋಹಿತ್ ಸೂರಿ ಮಾಡುತ್ತಿರುವ ಇದು ಎರಡನೇ ಚಿತ್ರವಾಗಿದೆ. ಇದಕ್ಕೂ ಮೊದಲು ಈ ಇಬ್ಬರು 'ಆಶಿಕಿ-2' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ದಿಶಾ ಪಟಾನಿ ಕುರಿತು ಹೇಳುವುದಾದರೆ, ಈ ಟ್ರೈಲರ್ ನಲ್ಲಿ ಡಾರ್ಕ್ ಪಿಂಕ್ ಬಣ್ಣದ ಬಿಕಿನಿಯಲ್ಲಿ ದಿಶಾ ಪಟಾನಿ ಎಂಟ್ರಿ ನೀಡಿದ್ದಾರೆ. ಇದರಿಂದ ಈ ಚಿತ್ರದಲ್ಲಿ ಅವರ ಪಾತ್ರ ತುಂಬಾ ಬೋಲ್ಡ್ ಆಗಿದೆ ಎಂಬುದನ್ನು ಊಹಿಸಬಹುದಾಗಿದೆ.


ಬಿಡುಗಡೆಯಾಗಿರುವ ಟ್ರೈಲರ್ ತುಂಬಾ ಫಾಸ್ಟ್ ಆಗಿದ್ದು, ಟ್ರೈಲರ್ ನ ವೇಗಕ್ಕೆ  ಪ್ರೇಕ್ಷಕರಿಂದ ಭಾರಿ ಮನ್ನಣೆ ದೊರೆತಿದೆ. ಈ ಟ್ರೈಲರ್ ನಲ್ಲಿ ಒಟ್ಟು ನಾಲ್ಕು ಡೈಲಾಗ್ ಗಳನ್ನೂ ತೋರಿಸಲಾಗಿದೆ. ಒಂದರಲ್ಲಿ ಆದಿತ್ಯರಾಯ್ ಕಪೂರ್ 'ಜೀವ ತೆಗೆಯುವುದು ನನ್ನ ನಶೆ' ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ 'ಪ್ರಾಣ ತೆಗೆಯುವುದು ನನ್ನ ಅವಶ್ಯಕತೆ' ಎಂದು ಕುಣಾಲ್ ಖೇಮು ಹೇಳುತ್ತಿದ್ದಾರೆ. ಅತ್ತ 'ಪ್ರಾಣ ತೆಗೆಯುವುದು ನನಗೆ ಅಭ್ಯಾಸ' ಎಂದು ಅನಿಲ್ ಕಪೂರ್ ಹೇಳುತ್ತಿದ್ದರೆ, ಕೊನೆಯಲ್ಲಿ ದಿಶಾ ಪಟಾನಿ 'ಪ್ರಾಣ ತೆಗೆಯುವುದು ನನ್ನ ಪಾಲಿಗೆ ಮಜಾ' ಎಂದು ಹೇಳುತ್ತಿದ್ದಾರೆ.


ಭೂಷಣ್ ಕುಮಾರ್, ಕೃಷ್ಣಾ ಕುಮಾರ್, ಲವ್ ರಂಜನ್ ಹಾಗೂ ಅಂಕುರ್ ಗರ್ಗ್ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಟ್ರೈಲರ್ ಬಿಡುಗಡೆಗೂ ಮುನ್ನ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ಈ ಪೋಸ್ಟರ್ ನಲ್ಲಿ ದಿಶಾ ಪತಾಣಿ ಆದಿತ್ಯ ಅವರ ಹೆಗಲ ಮೇಲೆ ಕುಳಿತು ಅವರಿಗೆ ಕಿಸ್ ನೀಡುತ್ತಿರುವುದನ್ನು ತೋರಿಸಲಾಗಿದೆ.