Mumbai Drug Case Updates: ಆರ್ಯನ್ ಖಾನ್ ಸೇರಿದಂತೆ 3 ಆರೋಪಿಗಳು ಅಕ್ಟೋಬರ್ 7 ರವರೆಗೆ ಎನ್‌ಸಿಬಿ ವಶಕ್ಕೆ
ಅಕ್ಟೋಬರ್ 11 ರವರೆಗೆ ಆರೋಪಿಗಳನ್ನು ವಶಕ್ಕೆ ನೀಡುವಂತೆ, ಎನ್ ಸಿಬಿ ಕೋರಿತ್ತು. ವಿಚಾರಣೆಯ ಸಮಯದಲ್ಲಿ, ಆರ್ಯನ್ ಖಾನ್ ಫೋನಿನಲ್ಲಿ ಆಕ್ಷೇಪಾರ್ಹ ಚಿತ್ರಗಳು ಕಂಡುಬಂದಿವೆ ಎಂದು ತಿಳಿದು ಬಂದಿದೆ.
ನವದೆಹಲಿ : ಮುಂಬೈ ನಲ್ಲಿ Drug Caseಗೆ ಸಬಂಧಿಸಿದಂತೆ, ಶನಿವಾರ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ ಎನ್ ಸಿಬಿ (NCB) ತಂಡ 8 ಜನರನ್ನು ಬಂಧಿಸಿದೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದಿದ್ದು, ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಸೇರಿದಂತೆ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಅಕ್ಟೋಬರ್ 11 ರವರೆಗೆ ಆರೋಪಿಗಳನ್ನು ವಶಕ್ಕೆ ನೀಡುವಂತೆ, ಎನ್ ಸಿಬಿ (NCB) ಕೋರಿತ್ತು. ವಿಚಾರಣೆಯ ಸಮಯದಲ್ಲಿ, ಆರ್ಯನ್ ಖಾನ್ (Aryan Khan) ಫೋನಿನಲ್ಲಿ ಆಕ್ಷೇಪಾರ್ಹ ಚಿತ್ರಗಳು ಕಂಡುಬಂದಿವೆ ಎಂದು ತಿಳಿದು ಬಂದಿದೆ. ಇದರ ಹೊರತಾಗಿ, ಏಜೆನ್ಸಿಯಿಂದ ಅನೇಕ ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಲಾಗಿದೆ.
ಇದನ್ನೂ ಓದಿ : ನೀಲಿ ಬಣ್ಣದ Aadhaar card ನಿಮ್ಮದಾಗಬೇಕೆ? ಹಾಗಾದರೆ ಹೀಗೆ ಮಾಡಿ..!
ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ NCB :
ರೇವ್ ಪಾರ್ಟಿ ಪ್ರಕರಣದಲ್ಲಿ ಬಂಧನಕ್ಕೊಳಗಾದ ಒಂದು ದಿನದ ನಂತರ, ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಅವರನ್ನು ಎನ್ ಸಿಬಿ ವಶಕ್ಕೆ ಕೋರಿದೆ. ಆರೋಪಿಗಳನ್ನು ವಶಕ್ಕೆ ಪಡೆಯದಿದ್ದರೆ, ಅವರಿಗೆ ಡ್ರಗ್ಸ್ (Drugs case) ಹೇಗೆ ಸಿಗುತ್ತಿದೆ ಎನ್ನುವುದನ್ನು ಕಂಡು ಹಿಡಿಯುವುದು ಸಾಧ್ಯವಿಲ್ಲ ಎಂದು ಹೇಳಿದೆ. ಇನ್ನು ಆರೋಪಿಯನ್ನು ರಿಮಾಂಡ್‌ಗೆ ಕೋರಿರುವ NCB, ಆರ್ಯನ್ ಫೋನ್‌ನಲ್ಲಿ ಆಕ್ಷೇಪಾರ್ಹ ವಸ್ತುಗಳ ಚಿತ್ರಗಳು ಪತ್ತೆಯಾಗಿವೆ ಎಂದು ಹೇಳಿದೆ. ಅಂತರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸೂಚಿಸುವ ಚಿತ್ರ ಚಾಟ್‌ಗೆ ಲಿಂಕ್ನಲ್ಲಿರುವುದನ್ನು ಕೂಡ ಉಲ್ಲೇಖಿಸಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮಾತ್ರವಲ್ಲದೆ, ಅರ್ಬಾಜ್ ಮತ್ತು ಮುನ್ಮುನ್ ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಲಾಗಿದೆ. ಅವರ ಫೋನ್‌ಗಳಲ್ಲಿಯೂ ಅನುಮಾನಾಸ್ಪದ ವಹಿವಾಟು ನಡೆದಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಅಲ್ಲದೆ, ಡ್ರಗ್ಸ್ ಖರೀದಿಗೆ ಹಲವು ಕೋಡ್ ಹೆಸರುಗಳನ್ನು ಬಳಸಲಾಗಿದೆ ಏನು ಹೇಳಲಾಗಿದೆ.
ಇದನ್ನೂ ಓದಿ : Xiaomi ತರುತ್ತಿದೆ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್,108MP ಕ್ಯಾಮೆರಾದೊಂದಿಗೆ ಇರಲಿದೆ ಈ ವೈಶಿಷ್ಟ್ಯ
ಆರ್ಯನ್ ಖಾನ್ ವಕೀಲರ ವಾದ ;
ನಾನು ಅಲ್ಲಿ ವಿಶೇಷ ಅತಿಥಿಯಾಗಿದ್ದೆ, ನನ್ನ ಎಲ್ಲಾ ವಸ್ತುಗಳನ್ನು ಸ್ಕ್ಯಾನ್ ಮಾಡಲಾಗಿದೆ, ನನ್ನಿಂದ ಪಡೆದಿರುವ ಹೇಳಿಕೆಗಳನ್ನು ಪಂಚನಾಮೇಯಲ್ಲಿ ದಾಖಲಿಸಿಲ್ಲ. ತನಿಖೆ ಆರಂಭವಾದ ತಕ್ಷಣ ಮೊಬೈಲ್ ಫೋನ್ ತೆಗೆದುಕೊಳ್ಳಲಾಗಿದೆ ಎಂದು ಆರ್ಯನ್ ಖಾನ್ ಪರವಾಗಿ ವಕೀಲರು ಹೇಳಿಕೆ ಸಲ್ಲಿಸಿದ್ದಾರೆ.
ಮೊಬೈಲ್ ಚಾಟ್‌ನಲ್ಲಿ ಸಾಕ್ಷಿ :
NCB ಅವರಿಬ್ಬರ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಪರೀಕ್ಷಿಸಿದಾಗ, ಅದರಲ್ಲಿ ಅನೇಕ ಚಾಟ್‌ಗಳು (Mobile chat) ಕಂಡುಬಂಡೈವ್. ಈ ಚಾಟ್ ನಲ್ಲಿ ಇಬ್ಬರೂ ಕೂಡಾ, ಚರಸ್ ಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ದರು. ವಿಚಾರಣೆಯಲ್ಲಿ, ಆರ್ಯನ್ ಖಾನ್ ಅವರ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್, ಡ್ರಗ್ ಪ್ಯಾಡ್ಲರ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನುವ ವಿಚಾರ ಎನ್‌ಸಿಬಿಗೆ ಮೊದಲೇ ತಿಳಿದಿತ್ತು.
ಇದನ್ನೂ ಓದಿ : Earn Money : ನಿಮ್ಮ ಬಳಿ ಈ 50 ಪೈಸೆ ನಾಣ್ಯ ಇದ್ದಾರೆ ನೀವು ಗಳಿಸಬಹುದು 1 ಲಕ್ಷ ರೂ. : ಹೇಗೆ ಇಲ್ಲಿದೆ ನೋಡಿ
ಎನ್‌ಸಿಬಿ ತಂಡದಿಂದ ಬಂಧನ :
ಪಾರ್ಟಿ ಸ್ಥಳದಲ್ಲಿ ಆರ್ಯನ್ ಖಾನ್ ಹೆಸರಿನಲ್ಲಿ ಯಾವುದೇ ವಿಶೇಷ ಕೊಠಡಿ ಬುಕ್ ಆಗಿರಲಿಲ್ಲ. ಆದರೆ, ಸಂಘಟಕರು ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್‌ಗಾಗಿ ಪ್ರತ್ಯೇಕ ಕಾಂಪ್ಲಿಮೆಂಟರಿ ಕೊಠಡಿಯನ್ನು ಇರಿಸಿದ್ದರು. ಅವರಿಬ್ಬರೂ ಆ ಕಾಂಪ್ಲಿಮೆಂಟರಿ ರೂಂ ಗೆ ಹೋಗುತ್ತಿದ್ದ ವೇಳೆ, NCB ಅಧಿಕಾರಿಗಳು ಅವರನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ಆರ್ಯನ್ ಖಾನ್ ಬಳಿ ಜೊತೆ ಏನೂ ಸಿಗಲಿಲ್ಲ ಎನ್ನಲಾಗಿದೆ. ಆದರೆ ಅರ್ಬಾಜ್ ಮರ್ಚೆಂಟ್ ನ ಶೂಗಳಲ್ಲಿ ಚರಸ್ ಪತ್ತೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.