ಮೈಸೂರು: ಡಾ. ಪುನೀತ್ ರಾಜ್‍ಕುಮಾರ್(Puneeth Rajkumar)..‌. ಈ ಹೆಸರು ಪ್ರತಿಯೊಬ್ಬರ ಉಸಿರು. ‘ಅಪ್ಪು’ ಮಾಡಿದ ಸಾಧನೆಗೆ ಇದೀಗ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ. ಈ ಮೂಲಕ ‘ಕರುನಾಡ ರತ್ನ’ವನ್ನು ಮತ್ತೊಮ್ಮೆ ನೆನೆಯಲಾಗಿದೆ.


COMMERCIAL BREAK
SCROLL TO CONTINUE READING

ಮೈಸೂರು ವಿವಿ 102ನೇ ಘಟಿಕೋತ್ಸವ(102nd Convocation of University of Mysore)ದಲ್ಲಿ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ‘ಅಪ್ಪು’ ಪತ್ನಿ ಅಶ್ವಿನಿಯವರು ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದರು. ಮೈಸೂರು ವಿವಿಯಿಂದ ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್(Doctorate) ಪದವಿ ಪ್ರದಾನ ವೇಳೆ ಇಡೀ ಡಾ.ರಾಜ್ ಕುಮಾರ್ ಕುಟುಂಬವೇ ಹಾಜರಿತ್ತು.  ಈ ವೇಳೆ ಪ್ರತಿಯೊಬ್ಬರೂ ಭಾವುಕರಾಗಿ ಅಗಲಿದ ‘ಕರುನಾಡ ರತ್ನ’ವನ್ನು ನೆನೆದರು. ಗಣ್ಯರ ಸಾಲಿನಲ್ಲಿ ಕುಳಿತುಕೊಂಡಿದ್ದ ಪುನೀತ್ ರಾಜ್‍ಕುಮಾರ್ ಸಹೋದರಿಯರು, ‘ಅಪ್ಪು’ ಪರವಾಗಿ ಅವರ ಪತ್ನಿ ಅಶ್ವಿನಿ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡುವಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.


ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಡಾಕ್ಟರೇಟ್


ಡಾ.ರಾಜ್ ಕುಟುಂಬದಿಂದ 2 ಚಿನ್ನದ ಪದಕ


Valimai: ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ‘ವಲಿಮೈ’ ZEE5 ಒಟಿಟಿಗೆ ಎಂಟ್ರಿ..!


ಕರುನಾಡಿನ ‘ಅಪ್ಪು’ ಇನ್ಮುಂದೆ ಡಾ.ಪುನೀತ್‌ ರಾಜ್‍ಕುಮಾರ್(Dr Puneeth Rajkumar). ನಮ್ಮ ನಿಮ್ಮೆಲ್ಲರ  ಪ್ರೀತಿಯ ‘ಅಪ್ಪು’ಗೆ ಡಾಕ್ಷರೇಟ್‌ ಗೌರವ ಸಿಕ್ಕಿರೋದು ಅಭಿಮಾನಿಗಳಿಗೆ ಸಂತಸ ಕೊಟ್ಟಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.