ಐಟಂ ಸಾಂಗ್ ನಲ್ಲಿ ನಾಗ ಚೈತನ್ಯ ಭಾವಿ ಪತ್ನಿ..ಹೀರೋ ಯಾರು ಗೊತ್ತಾ..?
Shobhita dhulipala: ಇತ್ತೀಚಿಗೆ ಶೋಬಿತಾ ಧೂಳಿಪಾಲ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಂದಾಗಿದೆ. ಕೆಲವೇ ಸಿನಿಮಾಗಳನ್ನು ಮಾಡಿದರೂ ಕಡಿಮೆ ಅವಧಿಯಲ್ಲಿ ಹೆಸರು ಮಾಡಿದ್ದಾಳೆ.
Nag Chaitanya-Shobhita dhulipala: ಶೋಭಿತಾ ಧೂಳಿಪಾಲ-ನಾಗ ಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹಲವು ದಿನಗಳಿಂದ ಬರಲಾರಂಭಿಸಿದ್ದವು.. ಆದರೆ ಅದು ಸತ್ಯವೇ ಆಗಿತ್ತು.. ಅವರಿಬ್ಬರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದರು.. ಈ ವಿಚಾರವನ್ನು ನಾಗಾರ್ಜುನ ಅಧಿಕೃತವಾಗಿ ಘೋಷಿಸಿದ್ದು, ಅವರ ನಿಶ್ಚಿತಾರ್ಥ ಕೆಲವೇ ಜನರ ಸಮ್ಮುಖದಲ್ಲಿ ನಡೆದಿದೆ ಎನ್ನಲಾಗಿದೆ.. ಈ ನಡುವೆ ಶೋಭಿತಾಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ.
ಇದನ್ನೂ ಓದಿ-ನಿರ್ದೇಶಕ ಬ್ರಹ್ಮಗೆ ಒಲಿದ ಬೆಂಗಳೂರು ಸಂಸ್ಥೆಯ ದಾದಾಸಾಹೇಬ್ ಫಾಲ್ಕೆ ಅಚೀವ್ ಮೆಂಟ್ ಪ್ರಶಸ್ತಿ
ನಟಿ ಬಾಲಿವುಡ್ ಹೀರೋ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲು ರೆಡಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ. ಹೌದು ಬಾಲಿವುಡ್‌ನಲ್ಲಿ 'ಡಾನ್' ಸಿರೀಸ್‌ಗೆ ಅಪಾರ ಕ್ರೇಜ್ ಇದೆ. ಮೊದಲ ಎರಡು ಭಾಗಗಳಲ್ಲಿ ಶಾರುಖ್ ಖಾನ್ ನಾಯಕನಾಗಿ ನಟಿಸುತ್ತಿದ್ದರೆ, ಮೂರನೇ ಭಾಗದಲ್ಲಿ ರಣವೀರ್ ಸಿಂಗ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಐಟಂ ಸಾಂಗ್‌ಗಾಗಿ ಚಿತ್ರತಂಡ ಶೋಭಿತಾ ಅವರನ್ನು ಸಂಪರ್ಕಿಸಿದೆಯಂತೆ. ಆದ್ರೆ ಈ ಐಟಂ ಸಾಂಗ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೋ ಇಲ್ಲವೋ ಅನ್ನೋದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಇದನ್ನೂ ಓದಿ-ಆನ್ ಲೈನ್ ಗೇಮ್ ಕುರಿತಾದ ಚಿತ್ರ ರಮ್ಮಿ ಆಟ
ಒಂದು ವೇಳೆ ನಟಿ ಐಟಂ ಸಾಂಗ್ ಮಾಡಿದ್ರೆ... ಅಕ್ಕಿನೇನಿ ಫ್ಯಾಮಿಲಿಗೆ ಭಾರೀ ಶಾಕ್ ಆಗುವುದರಲ್ಲಿ ಸಂಶಯವಿಲ್ಲ. ಈ ಹಿಂದೆ ನಾಗ ಚೈತನ್ಯ ಅವರು ಐಟಂ ಸಾಂಗ್‌ನಿಂದಾಗಿ ಸಮಂತಾ ಅವರಿಂದ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಇತ್ತು. ಹೀಗಿದ್ದಾಗ ಶೋಭಿತಾ ಐಟಂ ಸಾಂಗ್ ನಲ್ಲಿ ನಟಿಸುತ್ತಾರಾ ಎಂಬ ಅನುಮಾನ ಮೂಡಿದೆ. ಐಟಂ ಸಾಂಗ್ ಬಗ್ಗೆ ಶೋಭಿತಾ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡೋಣ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.