Naga Chaitanya Samantha Divorce: ಟಾಲಿವುಡ್‌ ಸ್ಟಾರ್​ ಕಪಲ್​ ಆಗಿದ್ದ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಆದರೆ ಈ ಡಿವೋರ್ಸ್‌ಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ನಾಗ ಚೈತನ್ಯ ಮತ್ತು ಸಮಂತಾ ಡಿವೋರ್ಸ್‌ ಸುದ್ದಿ ಅಂದು ಅವರ ಅಭಿಮಾನಿಗಳಿಗೆ ಶಾಕ್​ ನೀಡಿತ್ತು. ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಮೇಲೂ ತುಂಬಾ ಅನ್ಯೋನ್ಯವಾಗಿದ್ದ ಈ ಜೋಡಿ ಏಕಾಏಕಿ ದೂರವಾಗುವ ಸುದ್ದಿ ಸಿನಿವಲಯದಲ್ಲಿ ತೀರಾ ಚರ್ಚೆಗೆ ಗ್ರಾಸವಾಗಿತ್ತು. ಸಮಂತಾಗೆ ನಾಗ ಚೈತನ್ಯ ಮೋಸ ಮಾಡಿರಬಹುದೆಂಬ ಅನುಮಾನ ಶುರುವಾಗಿತ್ತು. ಹಲವು ಅಂತೆ ಕಂತೆಗಳ ಸಂತೆಯೇ ನಡೆಯತು.  


COMMERCIAL BREAK
SCROLL TO CONTINUE READING

ನಾಗ ಚೈತನ್ಯ 2018ರಲ್ಲಿ ಕೊಟ್ಟ ಸಂದರ್ಶನದಲ್ಲಿ ಆಡಿದ ಕೆಲವು ಮಾತುಗಳ ಇದೀಗ ವೈರಲ್‌ ಆಗುತ್ತಿವೆ. ಈ ಹಳೆಯ ವಿಡಿಯೋಗೂ ಸಮಂತಾ ಜೊತೆಗಿನ ವಿಚ್ಛೇದನಕ್ಕೂ ಕನೆಕ್ಷನ್‌ ಇದೆ ಎಂಬುದು ನೆಟ್ಟಿಜನ್‌ ಅಭಿಪ್ರಾಯವಾಗಿದೆ. ಅನು ಇಮ್ಯಾನ್ಯುಯಲ್​ ಜೊತೆ ನಾಗ ಚೈತನ್ಯ ಈ ಸಂದರ್ಶನಕ್ಕೆ ಹೋಗಿದ್ದರು. ಅಲ್ಲಿ ಇವರಿಬ್ಬರಿಗೂ ‘ಸಂಬಂಧದಲ್ಲಿ ಎಂದಾದರೂ ಮೋಸ ಮಾಡಿದ್ದೀರಾ’ ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಅನು ಇಮ್ಯಾನ್ಯುಯಲ್​ ‘ನೋ’ ಎಂದರು. ನಾಗ ಚೈತನ್ಯ ‘ಯೆಸ್‌ʼ ಎಂದರು. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 


ಇದನ್ನೂ ಓದಿ:ಮೂವರು ನಟಿಯರನ್ನು ಪ್ರೀತಿಸಿದ್ದ ಪ್ರಭಾಸ್...‌ 44 ವರ್ಷವಾದರೂ ಮದುವೆ ಆಗದೇ ಸಿಂಗಲ್‌ ಆಗಿರೋದು ಯಾಕೆ?


ರಿಲೇಷನ್‌ಶಿಪ್‌ನಲ್ಲಿ ಮೋಸ ಮಾಡಿರುವುದನ್ನು ಒಪ್ಪಿಕೊಂಡ ನಾಗ ಚೈತನ್ಯ, "ಜೀವನದಲ್ಲಿ ಎಲ್ಲರೂ ಎಲ್ಲ ತರಹದ ಅನುಭವ ಪಡೆಯಬೇಕು ಎಂಬುದು ನನ್ನ ಅಭಿಪ್ರಾಯ. ಆಗಲೇ ನೀವು ಬೆಳೆಯುವುದಕ್ಕೆ ಸಾಧ್ಯ. ನಾನು ಎಲ್ಲ ರೀತಿಯ ಅನುಭವವನ್ನೂ ಪಡೆದಿರುವೆ" ಎಂದು ನಾಗ ಚೈತನ್ಯ ಹೇಳಿದ್ದರು. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 


 


Naga Chaitanya admits to Cheating in the past, says “Everyone should experience everything!”
byu/Significant-Neat-142 inBollyBlindsNGossip

 


ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ನಾಗಚೈತನ್ಯ ಅವರ ಮಾತಿನ ಕುರಿತು ಚರ್ಚೆ ಮಾಡುತ್ತಿದ್ದಾರೆ. ನಾಗ ಚೈತನ್ಯ ಅವರ ಈ ಮನಸ್ಥಿತಿಯೇ ಸಮಂತಾ ದೂರವಾಗಲು ಕಾರಣ ಎನ್ನುತ್ತಿದ್ದಾರೆ. ಅನೇಕರು ನಾಗಚೈತನ್ಯ ಬೇರೊಂದು ನಟಿಯ ಜೊತೆಗಿನ ಸಂಬಂಧದಿಂದಲೇ ವಿಚ್ಛೇದನ ನೀಡಿರಬಹುದು ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಆದರೆ ಇದು ಹಳೆಯ ವಿಡಿಯೋವಾಗಿದೆ. 


2017ರಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಅವರ ಅದ್ದೂರಿಯಾಗಿ ಮದುವೆಯಾದರು. ಆದರೆ 2021ರಲ್ಲಿ ನಾಗ ಚೈತನ್ಯ ಸಮಂತಾ ವಿಚ್ಛೇದನ ಘೋಷಿಸಿದರು.


ಇದನ್ನೂ ಓದಿ:Sai Pallavi: ರಶ್ಮಿಕಾ ಮಂದಣ್ಣಗೆ ಸ್ಟಾರ್‌ ಪಟ್ಟ ಬರಲು ನಿಜವಾದ ಕಾರಣವೇ ಸಾಯಿ ಪಲ್ಲವಿ..! ಅನೇಕರಿಗೆ ತಿಳಿಯದ ರಹಸ್ಯವೇ ಇದು...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.