Naguvina Hoogala Mele: ವೆಂಕಟ್ ಭಾರದ್ವಾಜ್ ನಿರ್ದೇಶನದ ʻನಗುವಿನ ಹೂಗಳ ಮೇಲೆʼ ಚಿತ್ರ ಇದೇ ಫೆಬ್ರವರಿ 9ರಂದು ತೆರೆಗಾಣಲಿದೆ. ಅಭಿ ದಾಸ್ ಮತ್ತು ಶರಣ್ಯಾ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರ ಈಗಾಗಲೇ ಹಾಡುಗಳು, ಟ್ರೈರಲ್ ಸೇರಿದಂತೆ ನಾನಾ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಭಿನ್ನ ಪ್ರೇಮಕಥಾನಕದ ಸ್ಪಷ್ಟ ಸುಳಿವಿನೊಂದಿಗೆ ಭರವಸೆ ಮೂಡಿಸಿರುವ ನಗುವಿನ ಹೂಗಳ ಮೇಲೆ ಸಾಕಷ್ಟು ಹೊಸತನಗಳ ಪರಾಗ ಮೆತ್ತಿಕೊಂಡಂತಿದೆ.


COMMERCIAL BREAK
SCROLL TO CONTINUE READING

ಈ ಹಿಂದೆ ಆಮ್ಲೆಟ್, ಕೆಂಪಿರ್ವೆ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿರುವವರು ವೆಂಕಟ್ ಭಾರದ್ವಾಜ್. ಅವರು ನಗುವಿನ ಹೂಗಳ ಮೇಲೆ ಚಿತ್ರದ ಮೂಲಕ, ಎಲ್ಲ ವಯೋಮಾನದವರನ್ನೂ, ಎಲ್ಲ ತೆರನಾದ ಅಭಿರುಚಿಯ ಪ್ರೇಕ್ಷಕರನ್ನೂ ಅಚ್ಚರಿಗೀಡುಮಾದಲು ಸಜ್ಜಾಗಿದ್ದಾರೆ. 


ಇದನ್ನೂ ಓದಿ: ಶಾರುಖ್ ಖಾನ್ ಕನ್ನಡಕ್ಕೆ ಎಂಟ್ರಿ! ‘ಟಾಕ್ಸಿಕ್​’ ಸಿನಿಮಾದಲ್ಲಿ ಯಶ್​ ಜೊತೆ ಕಿಂಗ್‌ ಖಾನ್‌? 


ಕನ್ನಡ ಭಾಷೆ ಮೇಲೆ ಅಭಿಮಾನವಾಗಿ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ಕೆ.ಕೆ ರಾಧಾ ಮೋಹನ್ ಶ್ರೀ ಸತ್ಯಸಾಯಿ ಆಟ್ರ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.


ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನದೊಂದಿಗೆ ನಗುವಿನ ಹೂಗಳ ಮೇಲೆ ರೂಪುಗೊಂಡಿದೆ.


ಇದನ್ನೂ ಓದಿ: ಶಂಕರ್ ಮಹಾದೇವನ್, ಜಾಕಿರ್ ಹುಸೇನ್‌ಗೆ ಒಲಿದ ಗ್ರ್ಯಾಮಿ ಅವಾರ್ಡ್‌ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.