Veerasimha reddy : ನಟಸಿಂಹ ಬಾಲಕೃಷ್ಣ ಅವರು ನಟಿಸಿರುವ ಬಹುನಿರೀಕ್ಷಿತ ʼವೀರಸಿಂಹ ರೆಡ್ಡಿʼ ಸಿನಿಮಾದ ಮೂರನೇ ಹಾಡು ಬಿಡುಗಡೆಯಾಗಿದೆ. ಚಿತ್ರತಂಡ ʼಮಾ ಬಾವ ಮನೋಭವಲುʼ ಎಂಬು ಸಾಂಗ್‌ನ್ನು ರಿಲೀಸ್‌ ಮಾಡಿದೆ. ತಮನ್ನ ಈ ಹಾಡಿಗೆ ಮ್ಯೂಸಿಕ್‌ ನೀಡಿದ್ದು, ಇಬ್ಬರು ಸುಂದರಿಯರ ಜೊತೆ ಬಾಲಯ್ಯ ಸಖತ್‌ ಸ್ಟೆಪ್‌ ಹಾಕಿದ್ದಾರೆ. ಇನ್ನು ವಿಡಿಯೋ ನೋಡಿದ ಪ್ಯಾನ್ಸ್‌ಗಳು ಜೈ ಬಾಲಯ್ಯ ಅಂತ ಘೋಷಣೆ ಕೂಗಿದ್ದಾರೆ. 


COMMERCIAL BREAK
SCROLL TO CONTINUE READING

ಸದ್ಯ ಟಾಲಿವುಡ್‌ನಲ್ಲಿ ವೀರಸಿಂಹ ರೆಡ್ಡಿ ಮತ್ತು ವಾಲ್ಟೇರು ವೀರಯ್ಯ ನಡುವೆ ಹಾಡಿನ ಸ್ಪರ್ಧೆಗಳು ನಡೆಯುತ್ತಿದೆ. ತೆಲುಗು ಚಿತ್ರರಂಗದಲ್ಲಿ ಚಿರು ವರ್ಸಸ್ ಬಾಲಯ್ಯ ಸಿನಿಮಾಗಳ ವಾರ್‌ ಶುರುವಾಗಿದೆ. ಇದರ ನಡು ನಡುವೆ ದೇವಿ ಶ್ರೀ ಪ್ರಸಾದ್ ವರ್ಸಸ್ ತಮನ್‌ ನಡುವೆಯೂ ಮ್ಯೂಸಿಕ್‌ ಯುದ್ದ ನಡೆಯುತ್ತಿದೆ. ವೀರಸಿಂಹ ರೆಡ್ಡಿ ಚಿತ್ರದ ಹಾಡುಗಳಿಗೆ ತಮನ್ ಟ್ಯೂನ್‌ ಮಾಡಿದ್ದಾರೆ. ಆದ್ರೆ ಅಷ್ಟಾಗಿ ಅವುಗಳು ಜನರನ್ನು ಆಕರ್ಷಿಸುತ್ತಿಲ್ಲ. ಆದ್ರೆ, ವಾಲ್ಟೇರ್‌ ವೀರಯ್ಯ ಸಿನಿಮಾದಲ್ಲಿರುವ ಡಿಎಸ್‌ಪಿ ಹಾಡುಗಳು ಹಿಟ್ ಆಗುತ್ತಿವೆ. ಇತ್ತೀಚಿಗೆ ಬಾಸ್ ಪಾರ್ಟಿ, ಚಿರಂಜೀವಿ ಶ್ರೀದೇವಿ ಹಾಡುಗಳು ಕ್ಲಿಕ್ ಆಗಿದ್ದವು.


ಇದನ್ನೂ ಓದಿ: ‘ಸ್ಮೈಲ್ ಗುರು ಡ್ಯಾನ್ಸ್ ಗ್ಯಾರೇಜ್’ ಮೂರನೇ ಬ್ರ್ಯಾಂಚ್ ಲೋಕಾರ್ಪಣೆ


ಇದೀಗ ಮೂರನೇ ಹಾಡಿಗೂ ಸ್ಪರ್ಧೆ ಏರ್ಪಡುವ ಸಂಭವವಿದೆ. ಇದೇ ಕ್ರಮದಲ್ಲಿ ಬಾಲಯ್ಯ ತಮ್ಮ ಮೂರನೇ ಹಾಡಿನಲ್ಲಿ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ವೀರ ಸಿಂಹ ರೆಡ್ಡಿಯ ಮೂರನೇ ಸಿಂಗಲ್ ಐಟಂ ಹಾಡು ಇದಾಗಿದೆ. ಬಾಲಯ್ಯ ಮತ್ತೊಮ್ಮೆ ತಮ್ಮ ಎನರ್ಜಿಯನ್ನು ಈ ಹಾಡಿನಲ್ಲಿ ತೋರಿಸಿದ್ದಾರೆ. ತಮನ್ ಎಂದಿನಂತೆ ತಮ್ಮ ಡ್ರಮ್ಸ್‌ನೊಂದಿಗೆ ಹಾಡಿನಲ್ಲಿ ಧೂಳೆಬಿಸಿದ್ದಾರೆ. ಪ್ರೇಕ್ಷಕರು ಸಹ ಈ ಹಾಡನ್ನು ಮೆಚ್ಚಿಕೊಂಡಿದ್ದಾರೆ. ರಾಮ ಜೋಗಯ್ಯ ಶಾಸ್ತ್ರಿಯವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. 


ಇದೀಗ ಬಾಲಯ್ಯ ಸಿನಿಮಾದ ಮೂರನೇ ಹಾಡಿಗೆ, ವಾಲ್ತೇರು ವೀರಯ್ಯ ಚಿರಂಜೀವಿ ಅವರಿಂದ ಯಾವ ರೀತಿಯ ಹಾಡು ಹೊರಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅದೇನೇ ಇರಲಿ, ಈ ಸಂಕ್ರಾಂತಿಗೆ ಬಾಕ್ಸ್ ಆಫೀಸ್ ನಲ್ಲಿ ಭಾರೀ ಪೈಪೋಟಿ ಏರ್ಪಡಲಿದೆ. ಯಾವುದೇ ಸಿನಿಮಾ ಹಿಟ್ ಆದ್ರೂ ಮೈತ್ರಿ ಮೂವಿ ಮೇರ್ಕಸ್‌ಗೆ ಲಾಭವಾಗಲಿದೆ. ಏಕೆಂದ್ರೆ ಎರಡೂ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣ ಮಾಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.