Kareena kapoor : ನಾರಾಯಣ ಮೂರ್ತಿ ಅವರು ದೇಶದ ಅತ್ಯಂತ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರು. ಇನ್ಫೋಸಿಸ್ ಕಂಪನಿ ಸ್ಥಾಪಿಸುವ ಮೂಲಕ ಅನೇಕ ಯುವ ಉದ್ಯಮಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಇತ್ತೀಚಿಗೆ ಅವರು ನಟಿ ಕರೀನಾ ಕಪೂರ್‌ ಕುರಿತು ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ಹೌದು.. ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಯವರ ಸಾಧನೆ ಮತ್ತು ಅವರ ಸ್ಪೂರ್ತಿದಾಯಕ ಮಾತಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಆದ್ರೆ ಇದೀಗ ನಟಿಯ ವರ್ತನೆ ಕುರಿತು ಇನ್ಫೋಸಿಸ್‌ ಮುಖ್ಯಸ್ಥ ಹೇಳಿರುವ ಮಾತಿನ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದೆ.



ಇದನ್ನೂ ಓದಿ: ನಟ ಚಿರಂಜೀವಿ ಕಾಲಿಗೆ ಶಸ್ತ್ರಚಿಕಿತ್ಸೆ..! ದಿಢೀರನೆ ಎನಾಯ್ತು ಮೆಗಾಸ್ಟಾರ್‌ಗೆ..? 
 
ಈ ವೈರಲ್‌ ವಿಡಿಯೋದಲ್ಲಿ ನಾರಾಯಣ ಮೂರ್ತಿಯವರು, ಕರೀನಾ ಕಪೂರ್ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ನನ್ನ ಪಕ್ಕ ಕರೀನಾ ಕುಳಿತ್ತಿದ್ದರು. ಆದ್ರೆ ನಟಿ ತಮ್ಮನ್ನು ಮಾತನಾಡಿಸಲು ಬಂದ ಅಭಿಮಾನಿಗಳನ್ನು ನಿರ್ಲಕ್ಷಿಸಿದಳು ಎಂದು ಅವರು ಕರೀನಾ ವರ್ತನೆಗೆ ಅಸಮಾಧಾನ ವ್ಯಕ್ತ ಪಡಿಸಿದರು. ಅದೇ ಸಮಯದಲ್ಲಿ ಅವರ ಪತ್ನಿ ಸುಧಾ ಮೂರ್ತಿ ಅವರು ಕರೀನಾ ಅವರನ್ನು ಸಮರ್ಥಿಸಿಕೊಂಡಿರು. 


ಆಗಿದ್ದು ಇಷ್ಟೇ..  “ಒಂದು ದಿನ, ನಾನು ಲಂಡನ್‌ನಿಂದ ಹಿಂತಿರುಗುತ್ತಿದ್ದೆ, ಕರೀನಾ ಕಪೂರ್ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದರು. ಎಷ್ಟೋ ಜನ ಆಕೆಯನ್ನು ಭೇಟಿಯಾಗಲು ಬಂದು ನಮಸ್ಕಾರ ಮಾಡಿದರು ಆದರೆ ಕರೀನಾ ಅವರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದನ್ನು ನೋಡಿ ನನಗೆ ಸ್ವಲ್ಪ ಆಶ್ಚರ್ಯವಾಯಿತು ಏಕೆಂದರೆ ನನ್ನ ಬಳಿಗೆ ಬಂದವ ಜೊತೆ ನಾನು ಎದ್ದು ನಿಂತು ಮಾತನಾಡಿದೆ. ಇದನ್ನಷ್ಟೇ ಜನ ಆಶಿಸುತ್ತಿದ್ದಾರೆ ಎಂದು ನಾರಾಯಣ ಮೂರ್ತಿಯವರು ಹೇಳುತ್ತಿರುವಾಗ, ಅವರ ಪತ್ನಿ ಸುಧಾ ಮೂರ್ತಿ ಅಡ್ಡಿಪಡಿಸಿ, “ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆಕೆಗೆ ಅಂದು ಸುಸ್ತಾಗಿರಬೇಕು,’’ ಎಂದು ಸುಧಾ ಅಮ್ಮ ಕರೀನಾ ಅವರನ್ನು ಸಮರ್ಥಿಸಿಕೊಂಡರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.