ವೈದ್ಯಕೀಯದ ಸಹಾಯದಿಂದ ನಾವು ಮಕ್ಕಳನ್ನು ಹೊಂದಬಹುದು ಅಂದಿದ್ಯಾಕೆ ನರೇಶ್ ಮತ್ತು ಪವಿತ್ರ ಲೋಕೇಶ್ ?
ನರೇಶ್ ಗೆ ಇದು ಮೂರನೇ ಮದುವೆ. ಈ ಜೋಡಿ ಇದೀಗ ಮಕ್ಕಳು ಮಾಡಿಕೊಳ್ಳೋ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ನರೇಶ್ ಜೋರಾಗೇ ಲೆಕ್ಕಾಚಾರ ಹಾಕಿದ್ದಾರೆ.
ಬೆಂಗಳೂರು : ಇತ್ತೀಚಿಗೆ ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ನರೇಶ್ ಮತ್ತು ಪವಿತ್ರ ಲೋಕೇಶ್ ಅವರ ಸುದ್ದಿಗಳೇ ಹೆಚ್ಚಾಗಿ ಕಾಣಸಿಗುತ್ತಿವೆ. ನಿಮಗೆಲ್ಲ ಗೊತ್ತಿರೋ ಹಾಗೇ ಇವರಿಬ್ಬರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಹಾಯಾಗಿ ಓಡಾಡಿಕೊಂಡು ಇದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆಯ ‘ಮಳ್ಳಿ ಪೆಳ್ಳಿ’ ಸಿನಿಮಾ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾ ಕನ್ನಡದಲ್ಲಿ ‘ಮತ್ತೆ ಮದುವೆ’ ಹೆಸರಿನಲ್ಲಿ ಡಬ್ ಆಗಿದ್ದು, ಈ ವಾರ ರಿಲೀಸ್ ಆಗಲಿದೆ. ತೆಲುಗು ರಾಜ್ಯದಲ್ಲಿ ಮಿಶ್ರಪ್ರತಿಕ್ರಿಯೆ ಪಡೆದಿರುವುದರಿಂದ ಈ ಸಿನಿಮಾ ಇಲ್ಲಿ ಸದ್ದು ಮಾಡುವುದು ಅನುಮಾನ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ.
ನರೇಶ್ ಗೆ ಇದು ಮೂರನೇ ಮದುವೆ. ಈ ಜೋಡಿ ಇದೀಗ ಮಕ್ಕಳು ಮಾಡಿಕೊಳ್ಳೋ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ನರೇಶ್ ಜೋರಾಗೇ ಲೆಕ್ಕಾಚಾರ ಹಾಕಿದ್ದಾರೆ. ನರೇಶ್ ಅವರಿಗೆ ಈಗ 63 ವಯಸ್ಸು. ಪವಿತ್ರಾ ಲೋಕೇಶ್ ಅವರಿಗೆ 44 ವರ್ಷ. ಇವರ ಮಧ್ಯೆ ಸುಮಾರು 19 ವರ್ಷಗಳ ಅಂತರ ಇದೆ. ಮಗು ಹೊಂದುವ ವಿಚಾರದ ಬಗ್ಗೆ ನರೇಶ್ ಮಾತನಾಡಿದ್ದಾರೆ. ಇಬ್ಬರೂ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರದ್ದು ಹೃದಯಗಳ ಮದುವೆ ಎಂದು ಇತ್ತೀಚೆಗೆ ನರೇಶ್ ಹೇಳಿದ್ದರು. ಮದುವೆ ಆದ ಮೇಲೆ ‘ಮಕ್ಕಳು’ ಎನ್ನುವ ಪ್ರಶ್ನೆ ಬಂದೇ ಬರುತ್ತದೆ.
ಇದನ್ನೂ ಓದಿ : ಸಾಲು ಸಾಲು ಸೋಲು, ಅವಮಾನ, ಸವಾಲು ಇವೆಲ್ಲಾ ಮೆಟ್ಟಿ ನಿಂತ ನಟ ರಾಕ್ಷಸ ಡಾಲಿ..!
ನರೇಶ್ ಹಾಗೂ ಪವಿತ್ರಾ ಲೋಕೇಶ್ ದಂಪತಿಗೂ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಆದರೆ, ಇದರ ಬಗ್ಗೆ ಮಾತನಾಡಲು ಅವರು ಮುಜುಗುರ ಪಟ್ಟುಕೊಂಡಿಲ್ಲ. ಈಗ ಮಕ್ಕಳು ಮಾಡಿಕೊಂಡರೆ ಮುಂದಾಗುವ ಸಮಸ್ಯೆಗಳು ಏನೇನು ಎನ್ನುವ ವಿಚಾರಗಳನ್ನು ಅವರು ವಿವರಿಸಿದ್ದಾರೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಮಧ್ಯೆ ಸುಮಾರು 19 ವರ್ಷಗಳ ಅಂತರ ಇದೆ. ಆದರೆ, ಇವರ ಪ್ರೀತಿಗೆ ವಯಸ್ಸಿನ ಅಂತರ ಸಮಸ್ಯೆ ಆಗಲೇ ಇಲ್ಲ. ನರೇಶ್ ನಾಲ್ಕನೇ ಮದುವೆ ಪ್ರಶ್ನಿಸಿ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಕಾನೂನಾತ್ಮಕ ಹೋರಾಟ ಮಾಡುತ್ತಿದ್ದಾರೆ.
ವೈದ್ಯಕೀಯದ ಸಹಾಯದಿಂದ ನಾವು ಮಕ್ಕಳನ್ನು ಹೊಂದಬಹುದು. ಆದರೆ ನನಗೆ 80 ವರ್ಷವಾದಾಗ ಮಗುವಿಗೆ 20 ವರ್ಷ ಆಗುತ್ತದೆ. ಅದು ಅಗತ್ಯವೇ? ನಾವು ಗಂಡ- ಹೆಂಡತಿಯಾಗಿ ಆರಾಮಾಗಿ ಇದ್ದೇವೆ. ಈಗಾಗಲೇ ನಾನು 3 ಮಕ್ಕಳನ್ನು ಹೊಂದಿದ್ದೇನೆ ಮತ್ತು ಒಟ್ಟಿಗೆ ವಾಸಿಸುತ್ತಿದ್ದೇವೆ’ ಎಂದು ನರೇಶ್ ಉತ್ತರಿಸಿದ್ದಾರೆ.
ಇದನ್ನೂ ಓದಿ : ಕಪಿಲ್ ಶರ್ಮಾ ಶೋ ದಲ್ಲಿ ಇಲ್ಲಿಯವರೆಗೆ ಅಮೀರ್ ಖಾನ್ ಭಾಗಿಯಾಗದಿರುವುದಕ್ಕೆ ಇದೇ ಕಾರಣ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ