ಮೊಘಲರನ್ನು `ನಿರಾಶ್ರಿತರು` ಎಂದು ಕರೆದ ನಾಸಿರುದ್ದೀನ್ ಶಾ.. `ನಿಮಗೆ ಭಾರತೀಯ ಇತಿಹಾಸ ತಿಳಿದಿದೆಯೇ?` ಎಂದ ನೆಟ್ಟಿಗರು
Naseeruddin Shah: ಖ್ಯಾತ ನಟ ನಾಸಿರುದ್ದೀನ್ ಶಾ ಅವರು ಸಂದರ್ಶನದ ವೈರಲ್ ಕ್ಲಿಪ್‌ನಲ್ಲಿ ಮೊಘಲರನ್ನು `ನಿರಾಶ್ರಿತರು` ಎಂದು ಕರೆದ ನಂತರ ಟ್ವಿಟರ್ನಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು.
ನವದೆಹಲಿ: ಹಿರಿಯ ನಟ ನಾಸಿರುದ್ದೀನ್ ಶಾ (Naseeruddin Shah) ಅವರ ಸಂದರ್ಶನದ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ.
ನಾಸಿರುದ್ದೀನ್ ಶಾ ಮೊಘಲರನ್ನು ನಿರಾಶ್ರಿತರು (Mughals refugees) ಎಂದು ಕರೆಯುವ ಹೇಳಿಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ದೇಶಕ್ಕೆ ಮೊಘಲರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ನಟ ವಿವರಿಸುತ್ತಿದ್ದರು. ನಂತರ ಅವರನ್ನು 'ನಿರಾಶ್ರಿತರು' ಎಂದು ಕರೆದರು.
ಈ ವೈರಲ್ ಕ್ಲಿಪ್‌ನಲ್ಲಿ, "ಮೊಘಲರ ದೌರ್ಜನ್ಯ ಎಂದು ಎಲ್ಲಾ ಸಮಯದಲ್ಲೂ ಹೈಲೈಟ್ ಆಗುತ್ತಿದೆ. ಮೊಘಲರು ದೇಶಕ್ಕೆ ಕೊಡುಗೆ ನೀಡಿದವರು ಎಂಬುದನ್ನು ನಾವು ಮರೆಯುತ್ತೇವೆ. ಅವರು ದೇಶದಲ್ಲಿ ಶಾಶ್ವತ ಸ್ಮಾರಕಗಳನ್ನು, ನೃತ್ಯ, ಸಂಗೀತ, ಚಿತ್ರಕಲೆ, ಸಾಹಿತ್ಯದ ಸಂಪ್ರದಾಯವನ್ನು ತಂದವರು. ಮೊಘಲರು ಇದನ್ನು ತಮ್ಮ ತಾಯ್ನಾಡಾಗಿಸಲು ಇಲ್ಲಿಗೆ ಬಂದರು. ನೀವು ಬಯಸಿದರೆ ಅವರನ್ನು ನಿರಾಶ್ರಿತರು ಎಂದು ಕರೆಯಬಹುದು." ಎಂದು ಹೇಳಿದ್ದಾರೆ.
ಅನೇಕ ಟ್ವಿಟ್ಟರ್ ಬಳಕೆದಾರರು ನಾಸಿರುದ್ದೀನ್ ಅವರ ಹೇಳಿಕೆಗೆ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಕೆಲವರು ನಾಸಿರುದ್ದೀನ್ ಶಾ ಅವರನ್ನು ಟ್ರೋಲ್ ಮಾಡಿದರು. ವ್ಯಂಗ್ಯದ ಟೀಕೆಗಳನ್ನುಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.