ನವದೆಹಲಿ: 67th  National Film Awards 2021 - ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ 67 ನೇ ಆವೃತ್ತಿಯ ಘೋಷಣೆಗಳನ್ನು ಮಾಡಲಾಗಿದೆ. ಸೋಮವಾರ ಘೋಷಿಸಲಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಅಡಿ ಹಿಂದಿ ಚಿತ್ರ 'ಭೋಸ್ಲೆ' (Bhonsle)  ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಮನೋಜ್ ಬಾಜಪೇಯಿ ಹಾಗೂ ತಮಿಳು ಚಿತ್ರ 'ಅಸುರನ್'ನಲ್ಲಿನ ಅಭಿನಯಕ್ಕಾಗಿ ಧನುಶ್ ಅವರಿಗೆ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.


COMMERCIAL BREAK
SCROLL TO CONTINUE READING

ತಂಡಕ್ಕೆ ಕೃತಜ್ಞತೆ ಸಲ್ಲಿಸಿದ ಮನೋಜ್ ಬಾಜಪೇಯಿ(Manoj Bajpayee Twitter)
ತಮಗೆ ಸಂದ ಗೌರವಕ್ಕೆ ಪ್ರತಿಕ್ರಿಯೆ ನೀಡಿರುವ Manoj Bajpayee, "ಈ ಚಿತ್ರದಲ್ಲಿ ನಂಬಿಕೆ ಇಟ್ಟ ಹಾಗೂ ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರ ಪರವಾಗಿ ಸಂತಸ ವ್ಯಕ್ತಪಡಿಸುತ್ತೇನೆ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಈ ಚಿತ್ರದ ನಿರ್ದೇಶಕರಾಗಿರುವ ದೇವಾಶಿಶ್ ಮಖೀಜಾ ಹಾಗೂ ನನ್ನ ಸಹ ಕಲಾವಿದರಾದ ಸಂತೋಷ್ ಜುವೆಕರ್, ಇಪ್ಶಿತಾ ಚಕ್ರವರ್ತಿ ಹಾಗೂ ನನ್ನ ನಿರ್ಮಾಪಕರಾಗಿರುವ ಸಂದೀಪ್ ಕಪೂರ್, ಪಿಯುಶ್ ಸಿಂಗ್, ಸೌರಭ ಗುಪ್ತಾ ಎಲ್ಲರ ಆಭಾರಿಯಾಗಿದ್ದೇನೆ" ಎಂದಿದ್ದಾರೆ. 


Manoj Bajpayee) "ಈ ಚಿತ್ರವನ್ನು ಹಾಗೂ ನನಗೆ ಬೆಂಬಲ ನೀಡಿದ ಎಲ್ಲರಿಗೂ ಕೂಡ ನಾನು ನನ್ನ ಮನದಾಳದಿಂದ ಆಭಾರಿಯಾಗಿದ್ದೇನೆ. ವಾಸ್ತವದಲ್ಲಿ ಈ ಪ್ರಶಸ್ತಿ ಕೇವಲ ನನ್ನ ಪ್ರಶಸ್ತಿ ಮಾತ್ರವಲ್ಲದೆ ನಿಮ್ಮೆಲ್ಲರ ಪ್ರಶಸ್ತಿಯಾಗಿದೆ. ಈ ರಾಷ್ಟ್ರೀಯ ಪ್ರಶಸ್ತಿಯಿಂದ ತನ್ನ ಯಾತ್ರೆ ಮುಕ್ತಾಯಗೊಳಿಸಿದ 'ಭೋಸ್ಲೆ' ಚಿತ್ರಕ್ಕಾಗಿ ಕೇವಲ ಕೃತಜ್ಞತೆಯನ್ನು ಮಾತ್ರ ವ್ಯಕ್ತಪಡಿಸುತ್ತಿದ್ದೇನೆ .. ಮತ್ತೇನಿಲ್ಲ" ಎಂದು ಹೇಳಿ ಭಾವುಕರಾಗಿದ್ದಾರೆ.


ಇದನ್ನೂ ಓದಿ-67th National Film Awards: ನಾಲ್ಕನೇ ಬಾರಿಗೆ 'ರಾಷ್ಟ್ರ ಪ್ರಶಸ್ತಿ' ಮುಡಿಗೇರಿಸಿಕೊಂಡ ಕಂಗನಾ​ ರನೌತ್..!


ಮುಂಬೈಗೆ ಕೆಲಸ ಆರಿಸಿ ಬರುವ ಪ್ರವಾಸಿಗರಿಗೆ ಎದುರಾಗುವ ಸಮಸ್ಯೆಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದ್ದು, ವರ್ತಮಾನದ ಪರಿಸ್ಥಿತಿಯಲ್ಲಿ ತುಂಬಾ ಪ್ರಾಸಂಗಿಕವಾಗಿದೆ.


ಇದನ್ನೂ ಓದಿ-ತಲೈವಿ ಜಯಲಲೀತಾ ಪಾತ್ರದಲ್ಲಿ ಮಿಂಚಿದ ಬಾಲಿವುಡ್ ಬೆಡಗಿ ಕಂಗನಾ


ಈ ಚಿತ್ರದಲ್ಲಿ ಬಾಜಪೇಯಿ ಗಣಪತ್ ಭೋಸ್ಲೆ ಹೆಸರಿನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಚಿತ್ರ ವಿಮರ್ಶಕರ ಭಾರಿ ಮೆಚ್ಚುಗೆಯನ್ನು ಅವರು ಗಳಿಸಿದ್ದಾರೆ. 


ಇದನ್ನೂ ಓದಿ-Vanity Vanನಲ್ಲಿ ಏಕಾಂಗಿಯಾಗಿರುವಾಗ Parineeti Chopra ಈ ಕೆಲ್ಸಾ ಮಾಡ್ತಾಳಂತೆ !


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.