Navaratri: ಕಾಂತಾರ ಸಿನಿಮಾ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಗೆ ಬಹು ದೊಡ್ಡ ಹೆಸರು ತಂದುಕೊಟ್ಟಿದೆ. ಈ ಚಿತ್ರ ಪಂಜುರ್ಲಿ ದೈವದ ದಂತ ಕಥೆಯಾಗಿದೆ. ಅಲ್ಲದೇ ಈ ಸಿನಿಮಾ ರಿಲೀಸ್‌ ಆದ ನಂತರ ಎಷ್ಟೋ ಜನ ಕಾಂತಾರ ಗೆಟಪ್‌ನಲ್ಲೂ ಸಹ ಕಾಣಿಸಿಕಂಡಿದ್ದಾರೆ. ಸದ್ಯ ಕಾಂತಾರ ಸಿನಿಮಾ ಒಳ್ಳೆಯ ಸಕ್ಸಸ್‌ ಕೊಟ್ಟಿದ್ದು, ಇದೀಗ ಕಾಂತಾರ ಚಿತ್ರದ ಎರಡನೇಯ ಭಾಗಕ್ಕೆ ತಯಾರಿಯ ಕೆಲಸಗಳು ನಡಿತಿವೆ. 


COMMERCIAL BREAK
SCROLL TO CONTINUE READING

ಈ ವರ್ಷದ ಗಣಪತಿ ಹಬ್ಬದ ಸಮಯದಲ್ಲೂ ಸಹ ಗಣೇಶನ ಮೂರ್ತಿ ಪಂಜುರ್ಲಿ ದೈವದಂತೆ ಮಾಡಲಾಗಿತ್ತು. ಅದೇ ರೀತಿ ಈ ಸಿನಿಮಾದಿಂದ ಪ್ರೇರಿತರಾಗಿ ಪಶ್ಚಿಮ ಬಂಗಾಳ ಕೊಲ್ಕತ್ತಾದಲ್ಲಿ ದುರ್ಗಾ ಪೂಜೆ ಮಾಡಲಾಗಿದೆ. ಬೀದಿ ಬೀದಿಗಳಲ್ಲಿ ದೀಪ ಹಚ್ಚಿ ದುರ್ಗಾ ಪೂಜೆ ಮಾಡಲಾಗಿತ್ತು. ನವರಾತ್ರಿಯ ವೇಳೆ ಉತ್ತರ ಭಾರತದಲ್ಲಿ ದುರ್ಗಾ ದೇವಿ ಪೂಜೆ ಮಾಡುವುದು ಅಲ್ಲಿಯ ಸಂಪ್ರದಾಯವಾಗಿದೆ. ಆದರೆ ಈ ಬಾರಿ ಅಲ್ಲಿಯ ಜನರ ನವರಾತ್ರಿ ಪೂಜೆ ವಿಶೇಷವಾಗಿದೆ.


ಇದನ್ನೂ ಓದಿ-ಸಿನಿಪ್ರಿಯರಿಗೆ ಭರ್ಜರಿ ಆಫರ್‌ ಕೊಟ್ಟ ಪಿವಿಆರ್


ಹೌದು.. ಈ ವರ್ಷವು ಕೊಲ್ಕತ್ತಾದಲ್ಲಿ ವಿಶೇಷವಾಗಿದೆ. ಈ ಬಾರಿ ಕಾಂತಾರ ಥೀಮ್‌ನಲ್ಲಿ ದುರ್ಗಾ ಪೂಜೆ ಮಾಡಿದ್ದಾರೆ. ಗಣಪತಿ ಹಬ್ಬದ ಸಮಯದಲ್ಲಿ ಹೇಗೆ ಪಂಜುರ್ಲಿ ದೈವದ ರೀತಿ ಮೂರ್ತಿ ಹೇಗೆ ತಯಾರಿಸಲಾಯಿತಯ, ಅದೇ ರೀತಿ ದುರ್ಗಾ ಮೂರ್ತಿಯನ್ನು ಸಹ ಮಾಡಲಾಯಿತು. ಈ ಪಂಜುರ್ಲಿ ದೈವದ ಥೀಮ್‌ ರೀತಿಯಲ್ಲಿರು ದುರ್ಗಾ ಪೂಜೆ ಮಾಡಿದ್ದು, ಈ ವಿಡಿಯೋ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. 


ಅನೇಕರು ಕಾಂತಾರ ಚಿತ್ರದ ಪ್ರಭಾವವನ್ನು ಹೊಗಳಿದ್ದಾರೆ. ಕಾಂತಾರ ಸಿನಿಮಾ ಕರ್ನಾಟಕ ಮಾತ್ರವಲ್ಲದೆ, ಭಾರತ ಹಾಗು ವಿಶ್ವಾದ್ಯಂತ ಪ್ರಭಾವ ಬೀರಿದೆ. ಪಂಜುರಿ ದೈವದ ಮಹತ್ವ ವಿಶ್ವದೆಡೆಗೆ ಸಾರಿದೆ. ಈ ಸಿನಿಮಾದ ಪ್ರಭಾವ ವಿಶ್ವದ್ಯಾದಂತ ತಲುಪಿದ್ದು, ಕನ್ನಡಿಗರಿಗೆ ಖುಷಿಯ ವಿಷಯವಾಗಿದೆ.


ಇದನ್ನೂ ಓದಿ-Pooja Hegde: ಪಿಂಕ್ ಬಿಕಿನಿಯಲ್ಲಿ ಪೂಜಾ ಹೆಗ್ಡೆ ಫೋಟೋಸ್‌ ವೈರಲ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.