ಮುಂಬೈ: ನವಾಜುದ್ದೀನ್ ಸಿದ್ದಿಕಿ ತಮ್ಮ ನೈಜ ನಟನೆಯಿಂದ ಭಾರತೀಯ ಮತ್ತು ಅಂತರಾಷ್ಟ್ರೀಯ ಸಿನಿಮಾದಲ್ಲಿ ಛಾಪನ್ನು ಮೂಡಿಸಿದ್ದಾರೆ. ಇತ್ತೀಚಿಗೆ ನಂದಿತಾ ದಾಸ್ ನಿರ್ದೇಶನದ ಸಾದತ್ ಹಸ್ಸನ್ ಮಂಟೋ ರವರ ಜೀವನ ಆಧಾರಿತ ಚಿತ್ರದಲ್ಲಿ ಮಂಟೋ  ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.


COMMERCIAL BREAK
SCROLL TO CONTINUE READING

ಈಗ ನವಾಜುದ್ದೀನ್ ಸಿದ್ದಿಕಿ  ಮಹಾರಾಷ್ಟ್ರದ ವರ್ಣರಂಜಿತ ರಾಜಕಾರಣಿ ಮತ್ತು ಶಿವಸೇನಾ ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್  ಠಾಕ್ರೆ ರವರ ಜೀವನ ಆಧಾರಿತ ಚಿತ್ರದಲ್ಲಿ ಠಾಕ್ರೆಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.ಹೀಗೊಂದು ಹೊಸ ಸುದ್ದಿ ಈಗ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ 


ಈ ಚಿತ್ರವನ್ನು ಶಿವಸೇನಾ ನಾಯಕ ಸಂಜಯ ರಾವತ್  ರಾವುತ್ ಎಂಟರ್ಟೈನಮೆಂಟ್ ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದ್ದು. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕನಾದ ಅಭಿಜೀತ್ ಪಾನಸೆ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಈಗಲೇ ಏನು ಹೇಳಲು ಆಗುವುದಿಲ್ಲ ಡಿಸೆಂಬರ್ 21 ಕ್ಕೆ ಎಲ್ಲವು ತಿಳಿಯುತ್ತಿದೆ ಎಂದು ಪ್ರಶ್ನೆಯಿಂದ ನುಣಚಿಕೊಂಡಿದ್ದಾರೆ.