Nawab Malik On Kangana Ranaut: ‘2014ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ’ ಎಂಬ ಬಾಲಿವುಡ್ (Bollywood) ನಟಿ  ಕಂಗನಾ ರಣಾವತ್ (Kangana Ranaut)) ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಕಂಗನಾ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸುವುದು ಮಾತ್ರವಲ್ಲದೆ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳೂ ಕೇಳಿಬರುತ್ತಿವೆ. ಇದೀಗ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ (Nawab Malik) ಕೂಡ ಕಂಗನಾ ಅವರ ನಿಜವಾದ ಸ್ವಾತಂತ್ರ್ಯದ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಂಗನಾ ರಣಾವತ್ ಹೇಳಿಕೆಯನ್ನು ಶುಕ್ರವಾರ ಖಂಡಿಸಿರುವ ನವಾಬ್ ಮಲಿಕ್, ಹೇಳಿಕೆ ನೀಡುವ ಮುನ್ನ ಬಾಲಿವುಡ್ ನಟಿ ಭಾರೀ ಡ್ರಗ್ಸ್ ಸೇವಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಆರ್ಯನ್ ಖಾನ್ (Aryan Khan) ಪ್ರಕರಣದಲ್ಲಿ (Drugs Case) ಎನ್‌ಸಿಬಿ (NCB) ಅಧಿಕಾರಿ ಸಮೀರ್ ವಾಂಖೆಡೆ (Sameer Wanh) ಮೇಲೆ ಭಾರಿ ವಾಗ್ದಾಳಿ ನಡೆಸಿದ್ದ ನವಾಬ್ ಮಲಿಕ್, ಕಂಗನಾ ರಣಾವತ್ ಹೇಳಿಕೆಯನ್ನು ಖಂಡಿಸಿದ್ದು, '2014ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ' ಎಂಬ ಕಂಗನಾ ರಣಾವತ್ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಟಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಕೇಂದ್ರ ಕಂಗನಾ ಅವರಿಂದ ಪದ್ಮಶ್ರೀಯನ್ನು ವಾಪಸ್ ಪಡೆದು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.


'2014 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು' ಎಂದು ಹೇಳಿಕೆ ನೀಡುವ ಮೊದಲು ಕಂಗನಾ ರನೌತ್ ಅವರು ಮಲಾನಾ ಕ್ರೀಮ್ (ಹಿಮಾಚಲ ಪ್ರದೇಶದಲ್ಲಿ ಪ್ರತ್ಯೇಕವಾಗಿ ಬೆಳೆಯುವ ವಿಶೇಷ ಬಗೆಯ ಹಶ್) ಬಳಸಿದ್ದರು ಎಂಬಂತೆ ತೋರುತ್ತಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ. ಇದಕ್ಕೂ ಮುನ್ನ ವರುಣ್ ಗಾಂಧಿಯಿಂದ ಹಿಡಿದು ಅನೇಕ ನಾಯಕರು ಕಂಗನಾ ರಣಾವತ್ ಅವರನ್ನು ಟೀಕಿಸಿದ್ದಾರೆ  ಎಂಬುದು ಇಲ್ಲಿ ಗಮನಾರ್ಹ.


Katrina Kaif: ಕತ್ರಿನಾ ಕೈಫ್ ಡ್ಯಾನ್ಸ್ ಪ್ರಾಕ್ಟೀಸ್ ವಿಡಿಯೋ ವೈರಲ್, ವಿಕ್ಕಿ ಜೊತೆ ಮದುವೆಗೆ ನಡೆದಿದೆಯೇ ತಯಾರಿ?


ಕಂಗನಾ ಹೇಳಿಕೆ - 1947ರಲ್ಲಿ ಭಾರತಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಭಿಕ್ಷೆ, ಸ್ವಾತಂತ್ರ್ಯ 2014 ರಲ್ಲಿ ಲಭಿಸಿದೆ
'ಭಾರತಕ್ಕೆ 1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಭಿಕ್ಷೆ, ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ 2014ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ'  ಎಂಬ ಹೇಳಿಕೆ ನೀಡುವ ಮೂಲಕ ನಟಿ ಕಂಗನಾ ರಣಾವತ್ ವಿವಾದ ಹುಟ್ಟುಹಾಕಿದ್ದಾರೆ. ಈ ಹಿಂದೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಕಂಗನಾ ಈ ಹೇಳಿಕೆಯಿಂದ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಆಮ್ ಆದ್ಮಿ ಪಕ್ಷವು ಮುಂಬೈ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದು, ಕಂಗನಾ ವಿರುದ್ಧ "ದೇಶದ್ರೋಹ ಪೂರ್ಣ ಮತ್ತು ಪ್ರಚೋದನಕಾರಿ" ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದೆ. ಇದೇ ವೇಳೆ ಭಾರತೀಯ ಜನತಾ ಪಕ್ಷದ ಸಂಸದ ವರುಣ್ ಗಾಂಧಿ ಸೇರಿದಂತೆ ಹಲವಾರು ರಾಜಕಾರಣಿಗಳು, ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಇತರರು ಬುಧವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ನಟಿಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ-TRP ರೇಸ್ ನಲ್ಲಿ ಭಾರೀ ಹಿನ್ನೆಡೆ, BIGG BOSS 15 ನಿಲ್ಲಿಸಲು ಮೇಕರ್ಸ್ ನಿರ್ಧಾರ..!


ವಿವಾದಗಳ ಜೊತೆಗೆ ಕಂಗನಾ ಹಳೆ ಸಂಬಂಧ
ಈ ಹಿಂದೆಯೂ ಕೂಡ ಕಂಗನಾ ರಣಾವತ್ ಆಗಾಗ್ಗೆ ತನ್ನ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿ ಮಾಡುತ್ತಲೇ ಇದ್ದಾರೆ.  ಇದು ಸ್ವಜನಪಕ್ಷಪಾತದ ಬಗ್ಗೆ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರೊಂದಿಗಿನ ಅವರ ದ್ವೇಷ, ರೈತರ ಪ್ರತಿಭಟನೆಯ ಕುರಿತು ನಟ-ಗಾಯಕ ದಿಲ್ಜಿತ್ ದೋಸಾಂಜ್ ಅವರೊಂದಿಗಿನ ಜಗಳ, ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಸರ್ಕಾರವನ್ನು ಟೀಕಿಸುವ  ಅವರ ಟ್ವೀಟ್‌ಗಳು ಅಥವಾ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವ ಅವರ ಹೇಳಿಕೆಗಳ ಕುರಿತು ಭಾರಿ ಚರ್ಚೆಗಾಲೆ ಇದರಲ್ಲಿ ಶಾಮೀಲಾಗಿವೆ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ಮುಂಬೈನಲ್ಲಿ ಅಸುರಕ್ಷಿತ ಭಾವನೆಯ ಬಗ್ಗೆ ಅವರು ಮಾತನಾಡಿದ್ದರು. ನಂತರ ಕೇಂದ್ರ ಸರ್ಕಾರವು ಅವರಿಗೆ ವೈ-ಪ್ಲಸ್ ವರ್ಗದ ಭದ್ರತೆಯನ್ನು ಒದಗಿಸಿತ್ತು. ಟ್ವಿಟರ್ ನಟಿಯ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದೆ, "ಟ್ವಿಟರ್ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಾಗಿ" ಇದನ್ನು ಮಾಡಲಾಗಿದೆ ಎಂದು ಹಲಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಕುರಿತು ಅವರ ಹೇಳಿಕೆಗಳ ನಂತರ ಟ್ವಿಟರ್ ಈ ಕ್ರಮವನ್ನು ತೆಗೆದುಕೊಂಡಿದೆ. ಪ್ರಸ್ತುತ ಅವಳು ತನ್ನ ವೀಡಿಯೊಗಳು ಮತ್ತು ಸಂದೇಶಗಳನ್ನು Instagram ನಲ್ಲಿ ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ-Video: ರಿವಿಲಿಂಗ್ ಡ್ರೆಸ್ ತೊಟ್ಟು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ Nora Fatehi, ಕಂಡು 'ಹಾಯ್ ಗರ್ಮೀ' ಎಂದ ಅಭಿಮಾನಿಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ