Nayanthara In Vignesh Shivan Movie : ನಟಿ ನಯನತಾರಾ ಸೌತ್ ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಜೊತೆ ನಟಿಸಿದ್ದ ಜವಾನ್ ಚಿತ್ರದ ಸೂಪರ್ ಡೂಪರ್ ಯಶಸ್ಸಿನೊಂದಿಗೆ ನಯನತಾರಾ ಬಾಲಿವುಡ್ ನಲ್ಲೂ ಒಳ್ಳೆಯ ಕ್ರೇಜ್ ಹುಟ್ಟು ಹಾಕಿದ್ದಾರೆ. ಇತ್ತೀಚೆಗಷ್ಟೇ ನಯನತಾರಾ ಅಭಿನಯದ ಅನ್ನಪೂರ್ಣಿ ಸಿನಿಮಾ ವಿವಾದಗಳಿಗೆ ಎಡೆಮಾಡಿಕೊಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಿದ್ದ ಈ ಸಿನಿಮಾವನ್ನು ತೀವ್ರ ವಿವಾದದ ಬಳಿಕ ತೆಗೆದುಹಾಕಲಾಗಿದೆ. ಇದಾದ ನಂತರ ನಯನತಾರಾ ಕೂಡ ಈ ಸಿನಿಮಾದ ಪರವಾಗಿ ಕ್ಷಮೆ ಕೇಳಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಯಶ್‌ ಮಾಡಿದ ಈ ಕೆಲಸಕ್ಕೆ ಫ್ಯಾನ್ಸ್‌ ಫಿದಾ... ʻಸರಳತೆಯ ಸಾಹುಕಾರʼ ಎಂದ ರಾಕಿಭಾಯ್‌ ಅಭಿಮಾನಿಗಳು! 


ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ನಿರ್ಮಿಸುತ್ತಿರುವ 'ಎಲ್‌ಐಸಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಈ ಚಿತ್ರದಲ್ಲಿ ಪ್ರದೀಪ್ ರಂಗನಾಥನ್, ಕೀರ್ತಿ ಶೆಟ್ಟಿ, ಎಸ್ ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ನಯನತಾರಾ ಪ್ರಮುಖ ಪಾತ್ರದಲ್ಲಿದ್ದಾರೆ. ಜೀವ ವಿಮಾ ನಿಗಮ (ಎಲ್‌ಐಸಿ) ಈ ಚಿತ್ರದ ಶೀರ್ಷಿಕೆಗೆ ಆಕ್ಷೇಪಣೆಗಳನ್ನು ಎತ್ತಿದೆ. ನೋಟಿಸ್‌ ಸಹ ನೀಡಿದೆ. ಇದರಿಂದಾಗಿ ಚಿತ್ರಕ್ಕೆ ಆರಂಭದಿಂದಲೂ ಹಿನ್ನಡೆಯಾಯಿತು.


ಈ ಹಿನ್ನೆಲೆಯಲ್ಲಿ ಚಿತ್ರದಿಂದ ಹಿಂದೆ ಸರಿಯಲು ನಯನತಾರಾ ನಿರ್ಧರಿಸಿದ್ದು, ಚಿತ್ರತಂಡಕ್ಕೆ ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ ಎನ್ನಲಾಗ್ತಿದೆ. ಸದ್ಯ ಸೌತ್ ಹೀರೋಯಿನ್ ಗಳಲ್ಲೇ ಭಾರೀ ಸಂಭಾವನೆ ಪಡೆಯುತ್ತಿರುವ ನಯನತಾರಾ ಈ ಸಿನಿಮಾದಿಂದಲೂ ದೊಡ್ಡ ಮೊತ್ತದ ಸಂಭಾವನೆಯನ್ನೇ ನಿರೀಕ್ಷಿಸಿದ್ದರು ಎನ್ನಲಾಗ್ತಿದೆ. ಆದರೆ ಪತಿ ವಿಘ್ನೇಶ್ ಈ ಸಿನಿಮಾದ ಭಾಗವಾಗಿರುವ ಕಾರಣ ನಯನತಾರಾ ಕಡಿಮೆ ಸಂಭಾವನೆಯಲ್ಲಿ ಸಿನಿಮಾ ಮಾಡಬೇಕಾಗಿತ್ತು. ಆದ್ದರಿಂದಲೇ ಸಿನಿಮಾ ತೊರೆಯಲು ನಿರ್ಧರಿಸಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.


ಇದನ್ನೂ ಓದಿ: 'ಶಾರುಖ್ ಖಾನ್....' ಪ್ರಿಯಾಮಣಿ ಕಿಂಗ್ ಖಾನ್ ಬಗ್ಗೆ ಹೀಗೆ ಹೇಳಿದ್ದೇಕೆ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.