Nayanthara divorce rumours: ನಯನತಾರಾ ಮತ್ತು ವಿಘ್ನೇಶ್ ಶಿವನ್ 2015 ರಿಂದ ಡಟಿಂಗ್‌ ಮಾಡುತ್ತಿದ್ದರು. 2022 ರಲ್ಲಿ ಮದುವೆಯಾದರು. ಅದೇ ವರ್ಷ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಪೋಷಕರಾದರು. ದಕ್ಷಿಣ ಭಾರತದ ‘ಲೇಡಿ ಸೂಪರ್‌ಸ್ಟಾರ್’ ನಯನತಾರಾ ಮತ್ತು ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಪವರ್‌ ಫುಲ್‌ ಕಪಲ್‌ ಗಳಲ್ಲಿ ಒಬ್ಬರು.  


COMMERCIAL BREAK
SCROLL TO CONTINUE READING

ಇತ್ತೀಚಿಗೆ ನಯನತಾರಾ ಮತ್ತು ವಿಘ್ನೇಶ್ ಶಿವನ್‌ ಡಿವೋರ್ಸ್‌ ಪಡೆಯಲಿದ್ದಾರೆ ಎಂಬ ವದಂತಿ ಶುರುವಾಗಿತ್ತು. ಈ ವದಂತಿ ಮಧ್ಯೆ ನಯನತಾರಾ ಮತ್ತು ಅವರ ಮಕ್ಕಳ ಫೋಟೋ ಎಲ್ಲೆಡೆ ವೈರಲ್‌ ಆಗಿದೆ. ನಯನತಾರಾ ಅವರ ಇತ್ತೀಚಿಗೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಫೋಟೋ ಹಾಕಿದ್ದಾರೆ. 


ಇದನ್ನೂ ಓದಿ: Radhika Pandith: ಯಶ್‌ ಮುದ್ದಿನ ಮಡದಿ, ಎರಡು ಮಕ್ಕಳ ತಾಯಿ.. ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ನಿಜವಾದ ವಯಸ್ಸೆಷ್ಟು ಗೊತ್ತಾ? 


ವಿಘ್ನೇಶ್ ಶಿವನ್‌ ಜೊತೆಗಿನ ವಿಚ್ಛೇದನ ವದಂತಿ ಬಳಿಕ ಈ ಫೋಟೋ ಎಲ್ಲರ ಗಮನ ಸೆಳೆದಿದೆ. ವಿಮಾನದಲ್ಲಿ ಮಕ್ಕಳೊಂದಿಗೆ ನಯನತಾರಾ ಪ್ರಯಾಣಿಸುತ್ತಿರುವ ಫೋಟೋ ಇದಾಗಿದೆ. ಇದನ್ನು ನೋಡಿದ ನೆಟ್ಟಿಗರು ಮಕ್ಕಳೊಂದಿಗೆ ನಯನತಾರಾ ಎಲ್ಲಿ ಹೊರಟಿದ್ದಾರೆ ಎಂದು ಯೋಚಿಸುತ್ತಿದ್ದಾರೆ. 


[[{"fid":"386901","view_mode":"default","fields":{"format":"default","field_file_image_alt_text[und][0][value]":"Nayanthara Vignesh Shivan ","field_file_image_title_text[und][0][value]":"ನಯನತಾರಾ ಮತ್ತು ವಿಘ್ನೇಶ್ ಶಿವನ್ "},"type":"media","field_deltas":{"1":{"format":"default","field_file_image_alt_text[und][0][value]":"Nayanthara Vignesh Shivan ","field_file_image_title_text[und][0][value]":"ನಯನತಾರಾ ಮತ್ತು ವಿಘ್ನೇಶ್ ಶಿವನ್ "}},"link_text":false,"attributes":{"alt":"Nayanthara Vignesh Shivan ","title":"ನಯನತಾರಾ ಮತ್ತು ವಿಘ್ನೇಶ್ ಶಿವನ್ ","class":"media-element file-default","data-delta":"1"}}]]


ನಯನತಾರಾ ಮತ್ತು ವಿಘ್ನೇಶ್ ಶಿವನ್‌ ಮಕ್ಕಳೊಂದಿಗೆ ಸೌದಿ ಅರೇಬಿಯಾಕ್ಕೆ ವಿಹಾರಕ್ಕೆ ತೆರಳಿದ್ದಾರೆ. ಈ ವೇಳೆ ವಿಮಾನದಲ್ಲಿ ತೆಗೆದ ಫೋಟೋವನ್ನು ನಯನತಾರಾ ಶೇರ್‌ ಮಾಡಿದ್ದಾರೆ. "ತುಂಬಾ ಸಮಯದ ನಂತರ ನನ್ನ ಹುಡುಗರೊಂದಿಗೆ ಪ್ರಯಾಣಿಸುತ್ತಿದ್ದೇನೆ" ಎಂದು ಕ್ಯಾಪ್ಷನ್‌ ನೀಡಿದ್ದಾರೆ. ವಿಘ್ನೇಶ್ ಸಹ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಈ ಒಂದೇ ಒಂದು ಫೋಟೋ ಮೂಲಕ ನಯನತಾರಾ ಮತ್ತು ವಿಘ್ನೇಶ್ ಶಿವನ್ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.   


ಇದನ್ನೂ ಓದಿ: Actress Cosmetic Surgery: ಕಾಸ್ಮೆಟಿಕ್‌ ಸರ್ಜರಿ ಮೂಲಕ ಸೌಂದರ್ಯ ಹೆಚ್ಚಿಸಿಕೊಂಡ ಸೌತ್‌ ನಟಿಯರಿವರು ! ಮೊದಲು ಹೇಗಿದ್ರು ನೋಡಿ, ಇಲ್ಲಿವೆ ಫೋಟೋಸ್..‌ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.