ಕೊಚ್ಚಿ: ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಸ್ಟಾರ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ಆಶೀರ್ವಾದ ಪಡೆದುಕೊಂಡಿದ್ದರು. ಮದುವೆಯಾದ ನಾಲ್ಕೇ ದಿನಕ್ಕೆ ಪತಿ ಜೊತೆಗೆ ನಟಿ ನಯನತಾರಾ ತವರುಮನೆ ಕೇರಳಕ್ಕೆ ಬಂದು ಪೋಷಕರ ಆಶೀರ್ವಾದ ಪಡೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ನಯನತಾರಾ ಪೋಷಕರು ಕೊಚ್ಚಿನ್‍ನಲ್ಲಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆ ಅವರು ವಿಘ್ನೇಶ್ ಶಿವನ್ ಜೊತೆಗೆ ಕೇರಳದ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಸೀದಾ ಮನೆಗೆ ಆಗಮಿಸಿದ ನವದಂಪತಿ ಪೋಷಕರ ಆಶೀರ್ವಾದ ಪಡೆದುಕೊಂಡರು. ಕೆಲ ದಿನಗಳ ಕಾಲ ಈ ಜೋಡಿ ಇಲ್ಲಿಯೇ ಇರಲಿದ್ದು, ಪೋಷಕರೊಂದಿಗೆ ಕಾಲ ಕಳೆಯಲಿದ್ದಾರೆಂದು ತಿಳಿದುಬಂದಿದೆ.  


ಇದನ್ನೂ ಓದಿ: Drugs Case: ಬೆಂಗಳೂರಿನಲ್ಲಿ ಬಾಲಿವುಡ್​ ಸ್ಟಾರ್ ನಟನ ಪುತ್ರ ಅರೆಸ್ಟ್‌!


ನಯನತಾರಾ ಕಿತ್ತಳೆ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರೆ, ವಿಘ್ನೇಶ್ ಅವರು ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದರು. ದಂಪತಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.


2022ರ ಟಾಪ್​ 10 ಚಿತ್ರಗಳ ಪಟ್ಟಿ ರಿಲೀಸ್‌: ನಂ.01​ ಪಟ್ಟ ಯಾರಿಗೆ? KGF 2 ಸ್ಥಾನ ಎಷ್ಟು?


ನಯನತಾರಾ ಮತ್ತು ವಿಘ್ನೇಶ್ ಶಿವನ್ ಮಹಾಬಲಿಪುರಂನ ಖಾಸಗಿ ರೆಸಾರ್ಟ್‌ನಲ್ಲಿ ಮದುವೆಯಾದರು. ಮದುವೆಯಲ್ಲಿ ಶಾರುಖ್ ಖಾನ್, ನಿರ್ದೇಶಕ ಅಟ್ಲಿ, ಸೂಪರ್ ಸ್ಟಾರ್ ರಜನಿಕಾಂತ್, ಅಜಿತ್ ಮತ್ತು ದಳಪತಿ ವಿಜಯ್ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ವರದಿಗಳ ಪ್ರಕಾರ ಗೌತಮ್ ಮೆನನ್ ಅವರು ಈ ಜೋಡಿಯ ಮದುವೆ ಚಿತ್ರೀಕರಿಸಿದ್ದು, OTT ಪ್ಲಾಟ್ಫಾರ್ಮ್‍ವೊಂದು ಭಾರೀ ಬೆಲೆಗೆ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.