Nayanthara remuneration : ಇಂಡಿಯನ್‌ ಸಿನಿ ನಟರು ಮತ್ತು ಆಟಗಾರರು ತಮ್ಮ ಕೆಲಸದ ಜೊತೆ ಜೊತೆಗೆ ಆಗಾಗ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ. ಅವರು ಚಿಕ್ಕ ಜಾಹೀರಾತಿನಲ್ಲಿ ನಟಿಸಲು ಲಕ್ಷಗಟ್ಟಲೇ ಸಂಭಾವನೆ ಪಡೆದುಕೊಳ್ಳುತ್ತಾರೆ ಅಂತ ನೀವು ಕೇಳಿರಬಹುದು ಆದ್ರೆ ಕೆಲವೊಂದಿಷ್ಟು ಸ್ಟಾರ್‌ಗಳು ಒಂದು ಜಾಹೀರಾತಿಗಾಗಿ ಕೋಟಿಗಟ್ಟಲೇ ಹಣ ಪಡೆಯುತ್ತಾರೆ. ಇದೀಗ ಲೇಡಿ ಸೂಪರ್‌ಸ್ಟಾರ್‌ ನಟಿ ನಯನತಾರಾ 50 ಸೆಕೆಂಟ್‌ ಜಾಹೀರಾತಿಗೆ ಪಡೆಯುವ ಸಂಭಾವನೆ ಕೇಳಿದ್ರೆ ನೀವು ಖಂಡಿತವಾಗಿಯೂ ಶಾಕ್‌ ಆಗ್ತೀರಾ...


COMMERCIAL BREAK
SCROLL TO CONTINUE READING

ಹೌದು.. ಸಾಮಾನ್ಯವಾಗಿ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ನಟಿಯರು ಅತಿ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿಗೆ ದಕ್ಷಿಣದಲ್ಲಿಯೂ ಆ ಟ್ರೆಂಡ್ ಶುರುವಾಗಿದೆ. ಹೀರೋಗಲೂ ಸಹ ಪಡೆಯದಷ್ಟು ಸಂಭಾವನೆಯನ್ನ ನಾಯಕಿಯರು ಪಡೆದುಕೊಳ್ಳುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು.


ಇದನ್ನೂ ಓದಿ: ʼಕೆಂಡʼದಂತಾ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ ʼಗಂಟುಮೂಟೆʼ ತಂಡ !


ಪ್ರಸ್ತುತ ನಯನತಾರಾ ದಕ್ಷಿಣದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ಹೆಸರುವಾಸಿಯಾಗಿದ್ದಾರೆ. 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಎದುರು ನಟಿಸಲು ನಯನತಾರ ಪಡೆದ ಸಂಭಾವನೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಆದ್ರೆ ಇದೀಗ ಒಂದು ಚಿಕ್ಕ ಜಾಹೀರಾತಿಗೆ ನಯನತಾರಾ ಎಷ್ಟು ಚಾರ್ಜ್ ಮಾಡುತ್ತಾರೆ ಎಂಬವುದನ್ನು ನೀವು ಕೇಳಿದ್ರೆ ಬೆಚ್ಚಿ ಬೀಳ್ತೀರಾ..


ನಯನತಾರಾ ಹಲವು ವರ್ಷಗಳಿಂದ ದಕ್ಷಿಣ ಭಾಷೆಯ ಬಹುತೇಕ ಎಲ್ಲಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಲೇಡಿ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ನಯನ ತಮ್ಮ ಬೇಡಿಕೆಯಂತೆ ಸಂಭಾವನೆ ಕೇಳುತ್ತಿದ್ದಾರೆ. ದಕ್ಷಿಣ ಇಂಡಸ್ಟ್ರಿಯ ನಟಿಯರಲ್ಲಿ ನಯನತಾರಾ ಮಾತ್ರ ಖಾಸಗಿ ಜೆಟ್ ಹೊಂದಿದ್ದಾರೆ. ಚಿತ್ರಗಳಷ್ಟೇ ಅಲ್ಲ ಜಾಹೀರಾತುಗಳ ವಿಚಾರದಲ್ಲೂ ನಯನತಾರಾ ಸಂಭಾವನೆ ಉತ್ತುಂಗದಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ.


ಇದನ್ನೂ ಓದಿ: ಮೊದಲ ಹಾಡನ್ನು ಲೋಕಾರ್ಪಣೆ ಮಾಡಿದ "ಭೈರವ"


50 ಸೆಕೆಂಡುಗಳ ಜಾಹೀರಾತಿಗೆ ನಯನತಾರಾ ಸುಮಾರು 5 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಜಾಹೀರಾತು ಸಮಯ ಹೆಚ್ಚಾದಂತೆ ಸಂಭಾವನೆಯೂ ಹೆಚ್ಚುತ್ತದೆ. ಒಂದು ಜಾಹೀರಾತಿಗಾಗಿ ನಯನ ಸುಮಾರು 4 ರಿಂದ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ.


ಸದ್ಯ ನಯನತಾರಾ 'ಪಟ್ಟು', 'ಲೇಡಿ ಸೂಪರ್ ಸ್ಟಾರ್ 75', 'ದಿ ಟೆಸ್ಟ್', 'ಇರೈವನ್', 'ಡಿಯರ್ ಸ್ಟೂಡೆಂಟ್ಸ್' ಮತ್ತು 'ಥಾನಿ ಒರುವನ್ 2' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದೆಡೆ ವೃತ್ತಿಪರ ಜೀವನದಲ್ಲಿ ಬ್ಯುಸಿಯಾಗಿರುವ ನಟಿ ವೈಯಕ್ತಿಕ ಜೀವನದ ಬಗ್ಗೆಯೂ ಅಭಿಮಾನಿಗಳಿಗೆ ಅಪ್‌ಡೇಟ್‌ಗಳನ್ನು ನೀಡುತ್ತಲೇ ಇದ್ದಾರೆ. ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್ ಜೊತೆಗೆ ಟೈಪ್‌ ಸ್ಪೆಂಡ್‌ ಮಾಡುತ್ತಿದ್ದಾರೆ. ಅಲ್ಲದೆ ಈ ಕುರಿತ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.