ಲೋಕೇಶ್ ಕನಕರಾಜ್ ಮುಂದಿನ ಚಿತ್ರದಿಂದ ನಯನತಾರಾ ದಿಢೀರ್ ಔಟ್... ಕಾರಣ ಏನು?
Lokesh Kanagaraj-Nayanthara: ಲೋಕೇಶ್ ಕನಕರಾಜ್ ಅವರ ಚಿತ್ರದಲ್ಲಿ ನಟಿ ನಯನತಾರಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಈಗ ಲೇಡಿ ಸೂಪರ್ ಸ್ಟಾರ್ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ.
Nayanathara: ದಕ್ಷಿಣ ಭಾರತ ಚಲನಚಿತ್ರೋದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರು ಜವಾನ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದರಿಂದ ಸದ್ಯ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅದರಲ್ಲಿ ಲೋಕೇಶ್ ಕನಕರಾಜ್ ನಿರ್ಮಾಣದ ಚಿತ್ರವೂ ಒಂದು.
ಇದನ್ನೂ ಓದಿ-ರೀಲ್ ಸ್ಟಾರ್ ಸೋನು ಗೌಡ ಆದಾಯ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ...!
ರಾಘವ ಲಾರೆನ್ಸ್ ನಾಯಕನಾಗಿ ನಟಿಸಲಿರುವ ಈ ಚಿತ್ರವನ್ನು ನಿರ್ದೇಶಕ ರತ್ನಕುಮಾರ್ ನಿರ್ದೇಶಿಸಲಿದ್ದಾರೆ. ನಟ ರಾಘವ ಅವರ ಎದುರು ನಟಿಸಲು ನಯನತಾರಾ ಮೊದಲು ಕಮಿಟ್ ಆಗಿದ್ದರು. ಆದರೆ ಇದೀಗ ಹೊರಬಿದ್ದಿರುವ ಲೇಟೆಸ್ಟ್ ಮಾಹಿತಿ ಪ್ರಕಾರ ನಟಿ ನಯನತಾರಾ ಅವರನ್ನು ಚಿತ್ರದಿಂದ ತೆಗೆದು ಹಾಕಲಾಗಿದೆ ಎನ್ನಲಾಗಿದೆ. ಕಥೆಯಲ್ಲಿ ಕೊನೆಯ ಬದಲಾವಣೆಯೇ ಇದಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ-Rashmika Mandanna: ವಿಜಯ್ ದೇವರಕೊಂಡ ಜೊತೆಗೆ ಟರ್ಕಿ ಸುತ್ತಾಟ...! ಸೀಕ್ರೆಟ್ ಬಯಲು ಮಾಡಿದ ಫೋಟೋ
ಅವರು ಮೂಲತಃ ಚಿತ್ರವನ್ನು ಥ್ರಿಲ್ಲರ್ ಪ್ರಕಾರದಲ್ಲಿ ಚಿತ್ರೀಕರಿಸಲು ಯೋಜಿಸಿದ್ದರು. ಆದರೆ ಈಗ ಕಥೆ ಬದಲಾಗಿದ್ದು, ನಯನತಾರಾ ಬದಲಿಗೆ ಮತ್ತೊಬ್ಬ ನಟಿಯನ್ನು ಆಯ್ಕೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಟಿಯ ಆಯ್ಕೆಯೂ ಬಿರುಸಿನಿಂದ ನಡೆಯುತ್ತಿದೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.