Nayanthara upset with Atlee : ಜವಾನ್ ಚಿತ್ರದ ಮೂಲಕ ಬಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವ ನಯನತಾರಾ ಆ ಚಿತ್ರದ ನಿರ್ದೇಶಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕಾಲಿವುಡ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಜವಾನ್ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. 


COMMERCIAL BREAK
SCROLL TO CONTINUE READING

ಬುಧವಾರದ ಹೊತ್ತಿಗೆ, ಜವಾನ್ ವಿಶ್ವಾದ್ಯಂತ 907 ಕೋಟಿ ಕಲೆಕ್ಷನ್ ಮಾಡಿದೆ ಮತ್ತು ಈ ವಾರಾಂತ್ಯದ ವೇಳೆಗೆ 1000 ಕೋಟಿ ಕ್ಲಬ್ ಪ್ರವೇಶಿಸುವತ್ತ ಸಾಗುತ್ತಿದೆ. ಜವಾನ್ ಚಿತ್ರದಲ್ಲಿ ನಯನತಾರಾ ಫೋರ್ಸ್ ಒನ್ ಹೆಡ್ ಪಾತ್ರವನ್ನು ನಿರ್ವಹಿಸಿದ್ದಾರೆ. ಮೇಲಾಗಿ.. ಈ ಸಿನಿಮಾದಲ್ಲಿ ನಯನತಾರಾ ಮೇಲೆ ಹಲವು ಸಾಹಸ ದೃಶ್ಯಗಳಿವೆ. ಆದರೆ, ಈ ಚಿತ್ರದ ನಿರ್ದೇಶಕ ಅಟ್ಲಿ ಮೇಲೆ ನಯನತಾರಾ ಇನ್ನೂ ಕೋಪಗೊಂಡಿದ್ದಾರೆ ಎನ್ನುತ್ತಿವೆ ಕಾಲಿವುಡ್ ಮೂಲಗಳು.


ಇದನ್ನೂ ಓದಿ : Review : ನೆನ್ನೆಯಷ್ಟೇ ತೆರೆಕಂಡ ʼಜಾನೇ ಜಾನ್‌ʼ ಸಿನಿಮಾ ಹೇಗಿದೆ, ಇಲ್ಲಿದೆ ನೋಡಿ 


ಇಷ್ಟದ ಪಾತ್ರದಲ್ಲಿ ನಟಿಸಿ, ಬೇಕಾದಷ್ಟು ಸಂಭಾವನೆ ಪಡೆದು ಚಿತ್ರ ಹಿಟ್ ಆದ ಬಳಿಕವೂ ನಯನತಾರಾ ಇನ್ನೂ ಅಸಮಾಧಾನದಲ್ಲಿ ಇರುವುದೇಕೆ ಎಂಬುದೇ ಪ್ರಶ್ನೆಯಾಗಿದೆ. ಜವಾನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರ ವಿಶೇಷ ಪಾತ್ರ ಪ್ರೇಕ್ಷಕರ ಮನಗೆದ್ದಿದೆ. ಹೀಗಾಗಿಯೇ ನಯನತಾರಾ ಅಟ್ಲಿ ಮೇಲೆ ಕೋಪಗೊಂಡಿದ್ದಾರೆ ಎನ್ನುತ್ತಿವೆ ಕಾಲಿವುಡ್ ಮೂಲಗಳು. ನಯನತಾರಾ ಅವರ ಆಪ್ತ ಮೂಲಗಳ ಪ್ರಕಾರ, ಜವಾನ್ ಚಿತ್ರದಲ್ಲಿ ತನ್ನ ಪಾತ್ರಕ್ಕೆ ಕತ್ತರಿ ಹಾಕಿರುವುದು ಆಕೆಗೆ ಇಷ್ಟವಿಲ್ಲ. 


ಜವಾನ್ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಕತ್ತರಿ ಹಾಕಿದ್ದಕ್ಕೆ ಬೇಸರಗೊಂಡಿರುವ ನಯನತಾರಾ ಇನ್ನು ಮುಂದೆ ಬಾಲಿವುಡ್‌ನಲ್ಲಿ ಸಿನಿಮಾ ಮಾಡಲು ಆಸಕ್ತಿ ಹೊಂದಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಜವಾನ್ ಸಿನಿಮಾದಲ್ಲಿ ಮುಖ್ಯ ನಾಯಕಿಯಾದರೂ ನಯನತಾರಾ ಪಾತ್ರ ಕಡಿಮೆಯಾಗಿದೆ, ವಿಶೇಷ ಪಾತ್ರದಲ್ಲಿ ದೀಪಿಕಾ ಪಾತ್ರ ಹೆಚ್ಚಿದೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. 


ಇದನ್ನೂ ಓದಿ : ರಶ್ಮಿಕಾ ಎಕ್ಸ್​ ಬಾಯ್​​ ಫ್ರೆಂಡ್ ಟ್ಯಾಗ್... ರಕ್ಷಿತ್‌ ಶೆಟ್ಟಿ ಅಚ್ಚರಿಯ ಹೇಳಿಕೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.