ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಡ್ರಗ್ ಆಂಗಲ್ ಬಗ್ಗೆ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ (Sara Ali Khan) ಮತ್ತು ಶ್ರದ್ಧಾ ಕಪೂರ್ (Shraddha Kapoor) ಅವರನ್ನು ಪ್ರಶ್ನಿಸಲು ಸಮನ್ಸ್ ಕಳುಹಿಸಲಿದೆ. ಈ ಕುರಿತು IANS ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ NCB ಉನ್ನತ ಅಧಿಕಾರಿಯೊಬ್ಬರು, "ಈ ವಾರ ನಾವು ಸಾರಾ, ಶ್ರದ್ಧಾ ಹಾಗೂ ಇತರೆ ಅನ್ಯರ ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸಲಿದ್ದೇವೆ" ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Sara Ali Khan ನಿಂದ ಹಲವು ಬಾರಿ ಡ್ರಗ್ಸ್ ಪಡೆದಿದ್ದಾಳಂತೆ ರಿಯಾ ಚಕ್ರವರ್ತಿ


ವೈರಲ್ ಆದ WhatsApp ಚಾಟ್
NCB ತನಿಖೆಯಲ್ಲಿ ಇತರೆ ಕೆಲವು ಬಾಲಿವುಡ್ ತಾರೆಯರ ವಾಟ್ಸ್ ಆಪ್ ಚಾಟ್ ಗಳು ಬೆಳಕಿಗೆ ಬಂದಿವೆ. ಇವುಗಳಲ್ಲಿ ಕೆಲ ನಟಿಯರ ಹೆಸರೂ ಕೂಡ ಶಾಮೀಲಾಗಿವೆ. ಈ ಚಾಟ್ ಗಳಲ್ಲಿ ಡ್ರಗ್ಸ್ ಸೇವನೆಯ ಕುರಿತು ಸಂವಾದ ನಡೆಸಲಾಗಿದೆ. ಈ ವಾಟ್ಸ್ ಆಪ್ ಮೆಸೇಜ್ ಗಳನ್ನು ಶೀಘ್ರದಲ್ಲಿಯೇ ತನಿಖೆಗೆ ಒಳಪಡಿಸಲಾಗುತ್ತಿದೆ. NCB ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ಚಾಟ್ ಗಳು ಶ್ರದ್ಧಾ ಕಪೂರ್, ನಮ್ರತಾ ಶಿರೋಡ್ಕರ್ ಹಾಗೂ ಸುಶಾಂತ್ ಸಿಂಗ್ ರಾಜ್ಪುತ್ ಅವರ ಟ್ಯಾಲೆಂಟ್ ಮ್ಯಾನೇಜರ್ ಜಯಾ ಶಾಹ್ ಅವರ ಹೆಸರನ್ನು ಒಳಗೊಂಡಿವೆ ಎನ್ನಲಾಗಿದೆ.


ಇದನ್ನು ಓದಿ- ಸುಶಾಂತ್ ಸಿಂಗ್ ರಾಜಪೂತ್ ಮತ್ತು ಸಾರಾ ಅಲಿಖಾನ್ ಪರಸ್ಪರ ಪ್ರೀತಿಸುತ್ತಿದ್ದರಂತೆ...! ಇಲ್ಲಿದೆ ಪೂರ್ತಿ ವಿವರ


ಸಾರಾ-ಶ್ರದ್ಧಾ ವಿಚಾರಣೆ ನಡೆಸಲಿದೆ NCB
ಸಾರಾ ಅಲಿ ಖಾನ್ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ 'ಕೇದಾರನಾಥ' ಚಿತ್ರದಲ್ಲಿ ಕೆಲಸ ಮಾಡಿದ್ದರೆ, ಶ್ರದ್ಧಾ ದಿವಂಗತ ನಟನೊಂದಿಗೆ 'ಛಿಚ್ಹೋರೆ' ಚಿತ್ರದಲ್ಲಿ ಕೆಲಸ ಕೆಲಸ ಮಾಡಿದ್ದಾರೆ. ಈ ನಟಿಯರು ಪುಣೆಯ ಸಮೀಪ ದ್ವೀಪವೊಂದಕ್ಕೆ ಹಲವಾರು ಬಾರಿ ಭೇಟಿ ನೀಡಿದ ಬಗ್ಗೆ ಡ್ರಗ್ಸ್  ಕಾನೂನು ಜಾರಿ ಸಂಸ್ಥೆ ತಿಳಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎನ್‌ಸಿಬಿ ಮೂಲವೊಂದು ತಿಳಿಸಿದೆ. ಮಾದಕ ದ್ರವ್ಯಗಳ ಖರೀದಿ ಮತ್ತು ಸಾಗಣೆಗೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ, ಅವರ ಸಹೋದರ ಶೋವಿಕ್ ಚಕ್ರವರ್ತಿ, ಸುಶಾಂತ್ ಅವರ ವೈಯಕ್ತಿಕ ಉದ್ಯೋಗಿ ದೀಪೇಶ್ ಸಾವಂತ್ ಮತ್ತು ಇತರರನ್ನು ಎನ್‌ಸಿಬಿ ಈಗಾಗಲೇ ಬಂಧಿಸಿದೆ.