ಕಾನೂನು ಎಲ್ಲರಿಗೂ ಒಂದೇ ಅಲ್ವಾ : ಸಂತೋಷ್ - ಅರ್ಚಕರ ಬಂಧನ, ಸೆಲೆಬ್ರೆಟಿಗಳ ವಿಚಾರಣೆ..! ನ್ಯಾಯ ಎಲ್ಲಿದೆ..?
Tiger nail case : ಬಿಗ್‌ಬಾಸ್ ಮನೆಯೊಳಗೆ ನುಗ್ಗಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಯಿತು. ಅಲ್ಲದೆ, ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ವಶಕ್ಕೆ ಪಡೆಯಲಾಗಿದೆ. ಆದ್ರೆ ನನ್ನ ಬಳಿ ಇರುವುದು ನಿಜವಾದ ಹುಲಿ ಉಗುರು ಎಂದ ರಾಜ್ಯ ಸಭಾ ಸದಸ್ಯ ಜಗ್ಗೇಶ್ ವಿರುದ್ಧ ನೋಟಿಸ್ ನೀಡಲಾಗಿದೆ. ಉಳಿದ ನಟರ ವಿಚಾರಣೆ ಮಾಡಲಾಗಿದೆಯಷ್ಟೇ..
Tiger claw pendant case : ವರ್ತೂರು ಸಂತೋಷ್ ಬಳಿ ಹುಲಿ ಉಗುರು ಇದೇ ಅಂತ ತಿಳಿದ ತಕ್ಷಣ ಬಿಗ್‌ಬಾಸ್ ಮನೆಗೆ ಹೋಗಿ ಅರಣ್ಯಾಧಿಕಾರಿಗಳು ಅವರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ಅಲ್ಲದೆ ಜಾಮೀನು ಸಹ ಇಲ್ವಂತೆ. ಆದ್ರೆ ರಾಜಕೀಯ ಗಣ್ಯರು, ಸ್ಟಾರ್ ನಟರು, ಸ್ವಾಮೀಜಿಗಳು ಬಳಿ ಹುಲಿ ಉಗುರು ಇದ್ದರೂ ಸಹ ವಿಚಾರಣೆ ನಡೆಸಲಾಗುತ್ತಿದೆ ಎಂಬ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಅಂತ ಸಾಮಾಜಿಕ ಜಾಲತಾಣದಲ್ಲಿ ತಾರತಮ್ಯ ವಿಚಾರಕ್ಕೆ ನಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು.. ಬಿಗ್‌ಬಾಸ್ ಮನೆಯೊಳಗೆ ನುಗ್ಗಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಯಿತು. ಸಧ್ಯ ಅವರು ಜೈಲಿನಲ್ಲಿದ್ದಾರೆ. ಅಲ್ಲದೆ, ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ಬಂಧಿಸಲಾಗಿದೆ. ಆದ್ರೆ ನನ್ನ ಬಳಿ ಇರುವುದು ನಿಜವಾದ ಹುಲಿ ಉಗುರು ಎಂದ ರಾಜ್ಯ ಸಭಾ ಸದಸ್ಯ ಜಗ್ಗೇಶ್ ವಿರುದ್ಧ ನೋಟಿಸ್ ನೀಡಲಾಗಿದೆ. ಉಳಿದ ನಟರ ವಿಚಾರಣೆ ಮಾಡಿ ಹುಲಿ ಉಗುರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ನಟ ದರ್ಶನ್ ಮನೆಯಲ್ಲಿ ಸಿಕ್ಕ ಹುಲಿ ಉಗುರುಗಳು ನಕಲಿಯಾಗಿದ್ದವು.
ಡಿಸೆಂಬರ್ 6ಕ್ಕೆ ನಂದಿ ಅವಾರ್ಡ್ಸ್ ಸಮಾರಂಭ: ಕರ್ನಾಟಕ ರಾಜ್ಯ ಪ್ರಶಸ್ತಿ
ಸಧ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಹೆಸರು ಸಹ ಈ ಪ್ರಕರಣದಲ್ಲಿ ಕೇಳಿ ಬಂದಿದೆ. ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಮೃಣಾಲ್ ಹೆಬ್ಬಾಳ್ಕರ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅರಣ್ಯಾಧಿಕಾರಿಗಳು ಸಹ ಅವರ ಮನೆಯಲ್ಲಿ ಶೋಧ ನಡೆಸಿದ್ದಾರೆ. ಆದ್ರೆ ಹುಲಿ ಉಗುರು ಅಸಲಿ ಅಥವಾ ನಕಲಿ ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ತನಿಖೆ ನಡೆಯುತ್ತಿದೆ.
ವಿಪರ್ಯಾಸ ಅಂದ್ರೆ ಅರಣ್ಯಾಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ವಲಯ ಅರಣ್ಯಾಧಿಕಾರಿ (RFO) ಮುನಿರಾಜ್ ಕೂಡ ಹುಲಿ ಉಗುರು ಧರಿಸಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಕುರಿತು ದೂರು ಸಹ ದಾಖಲಾಗಿದೆ. ಸ್ವಯಂ ಸೇವಕ ಬಾಬು ಎಂಬುವರು ಮುನಿರಾಜ್ ವಿರುದ್ಧ ದೂರು ನೀಡಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಉಲ್ಲಂಘನೆಗಾಗಿ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಶಾರುಖ್ ʼಪಠಾಣ್ʼ, ʼಜವಾನ್ʼ ದಾಖಲೆ ಮುರಿಯತ್ತಾ ಸಲ್ಮಾನ್ ಭಾಯ್ ʼಟೈಗರ್ 3ʼ..! ಏನಂತೀರಾ.?
ಆದ್ರೆ ಸಾಮಾನ್ಯ ಜನರ ವಿರುದ್ಧ ದೂರು ಬಂದ್ರೆ ತಕ್ಷಣ ಅವರನ್ನು ಹಿಡಿದು ಠಾಣೆಗೆ ತರುವ ಪೊಲೀಸರು ಸೆಲೆಬ್ರೆಟಿಗಳ ವಿಚಾರದಲ್ಲಿ ಏಕೆ ವಿಚಾರಣೆಗಷ್ಟೇ ಸಿಮಿತಗೊಳಿಸುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅಲ್ಲದೆ, ಉಗುರು ಧರಿಸಿದ್ದ ಆರೋಪದ ಮೇಲೆ ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಅರ್ಚಕರನ್ನ ಬಂಧಿಸುವ ಕಾಂಗ್ರೆಸ್ ಸರ್ಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಳಿಯ ಮತ್ತು ಪುತ್ರರನ್ನ ಯಾಕೆ ಅರಣ್ಯ ಇಲಾಖೆ ಬಂಧಿಸುವುದಿಲ್ಲ? "ಕಾನೂನು ಎಲ್ಲರಿಗೂ ಒಂದೇ ಅಲ್ವಾ?" ಎಂದು ಕಿರಿಕಾಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.