ಬನಾರಸಿ ಸೀರೆಯಲ್ಲಿ ಮಿಂಚಿದ ನವ ವಧು..!ಸೋನಾಕ್ಷಿ ಸಿನ್ಹ ಉಟ್ಟ ಸೀರೆಯ ಬೆಲೆ ಎಷ್ಟು ಗೊತ್ತಾ..?
sonakshi sinha: ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾನು ತುಂಬಾ ಪ್ರೀತಿಸಿದ ಜಹೀರ್ ಇಟ್ಬಾಲ್ ನೊಂದಿಗೆ ಸೋನಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Sonakshi Sinha: ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾನು ತುಂಬಾ ಪ್ರೀತಿಸಿದ ಜಹೀರ್ ಇಟ್ಬಾಲ್ ನೊಂದಿಗೆ ಸೋನಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ರಿಜಿಸ್ಟರ್ ಮ್ಯಾರೇಜ್ ಭಾನುವಾರ, ಜೂನ್ 23 ರಂದು ನಡೆಯಿತು. ಎರಡೂ ಕುಟುಂಬಗಳು ಸೇರಿದಂತೆ ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ವಿವಾಹ ಸಂಭ್ರಮ ಸುಸೂತ್ರವಾಗಿ ನೆರೆವೇರಿತು. ಮದುವೆ ಸರಳವಾಗಿಯೇ ನಡೆದರೂ, ಆರತಕ್ಷತೆ ಮಾತ್ರ ಅದ್ದೂರಿಯಾಗಿ ನಡೆಯಿತು.
ಸೋನಾಕ್ಷಿ, ಮದುವೆಗೆ ಚಿಕಂಕರಿ ಸೀರೆ ಮತ್ತು ಆಭರಣಗಳನ್ನು ಧರಿಸಿ ಮದುವೆ ಮಾಡಿಕೊಂಡರು. ಮದುವೆ ಸೀರೆಯಲ್ಲಿ ಮಿಂಚಿದ ಚೆಲುವೆ ಆರತಕ್ಷತೆಗೆ ತಮ್ಮ ತಾಯಿಯ ಮದುವೆ ಸೀರೆಯನ್ನು ಆಯ್ಕೆ ಮಾಡಿದ್ದರು. ಸಿಂಧೂರ, ಬನಾರಸ್ ಕೆಂಪು ರೇಷ್ಮೆ ಸೀರೆಯನ್ನುಟ್ಟು ಸೋನಾಕ್ಷಿ ಎಲ್ಲರ ಕಣ್ಮನ ಸೆಳೆದರು.
ಇದನ್ನೂ ಓದಿ: ಹೆಚ್ಚಾಯಿತು ‘ಕಲ್ಕಿ 2898 ಎಡಿ’ ಫೀವರ್.. ರಿಲೀಸ್‌ಗೂ ಮುನ್ನವೇ ಹೊಸ ದಾಖಲೆ ಬರೆದ ಡಾರ್ಲಿಂಗ್ ಸಿನಿಮಾ
ಚಾಂದ್ ಬುಟ್ಕಾ ಮತ್ತು ಝರಿ ಬಾರ್ಡರ್ ಸೀರೆ ಸೋನಾಕ್ಷಿಗೆ ರಾಯಲ್ ಲುಕ್ ತಂದುಕೊಟ್ಟಿತ್ತು. ಅಂದಹಾಗೆ ಈ ಕೆಂಪು ಸೀರೆಯ ಬೆಲೆ ರೂ.79,800. ಈ ಸೀರೆಗೆ ಹೊಂದಿಕೆಯಾಗುವ ಸರಳವಾದ ಕೆಂಪು ಜಾಕೆಟ್ ಅನ್ನು ಸೋನಾಕ್ಟಿ ಧರಿಸಿದ್ದರು. ಜಡೆ ಹಾಕಿ ಮಲ್ಲಿಗೆ ಹೂವನ್ನು ಮುಡಿದ ಸೋನಾಕ್ಷಿ ಲುಕ್ ನೋಡುಗರ ಕಣ್ಣಿಗೆ ಮುಧ ನೀಡುವಂತಿತ್ತು. ಹಣೆಯಲ್ಲಿ ಸಿಂಧೂರವನ್ನಿಟ್ಟು ಸೋನಾಕ್ಷಿ ಮುಖದಲ್ಲಿ ವಧುವಿನ ಕಳೆ ಎದ್ದು ಕಾಣಿಸಿತು. ಆರತಕ್ಷತೆಯಲ್ಲಿ ಪತಿಯೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಕೂಡ ಇದೀಗಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.