ಗಿಚ್ಚಿ ಗಿಲಿಗಿಲಿ ಹೊಸ ಸೀಸನ್ನಲ್ಲಿ ಜಡ್ಜ್ ಆಗಿ ಸ್ಯಾಂಡಲ್ವುಡ್ ಹಾಸ್ಯನಟನ ಎಂಟ್ರೀ!
Gicchi Gili Gili 3: ಕಲರ್ಸ್ ಕನ್ನಡ ವಾಹಿನಿಯಲ್ಲಿ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ಸೀಸನ್-3 ಶೀಘ್ರದಲ್ಲೇ ವೀಕ್ಷಕರನ್ನು ನಕ್ಕು-ನಗಿಸಲು ಬರುತ್ತಿದ್ದು, ಈ ಬಾರಿ ಈ ಕಾರ್ಯಕ್ರಮಕ್ಕೆ ಚಂದನವನದ ಹಾಸ್ಯನಟ ಜಡ್ಜ್ ಆಗಿ ಕಾಣಿಸಿಕೊಳ್ಳಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Komal As Judge In Gicchi Gili Gili 3: ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ಈಗಾಗಲೇ ಎರಡು ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿ ಹಲವಾರು ಕಾಮಿಡಿ ಸ್ಟಾರ್‌ಗಳನ್ನು ಚಲನಚಿತ್ರ ರಂಗಕ್ಕೆ ಕಲರ್ಸ್ ಕನ್ನಡ ಕೊಟ್ಟಿದೆ. ಮೊದಲ ಸೀಸನ್ ನಲ್ಲಿ ನಿವೇದಿತಾ ಗೌಡ, ಜಗ್ಗಪ್ಪ, ಪ್ರಶಾಂತ್, ಚಂದ್ರಪ್ರಭ ಮೊದಲಾದವರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ, ಇನ್ನು ಹಲವಾರು ಪ್ರತಿಭೆಗಳಿಗೆ ಶೋನಲ್ಲಿ ಜಾಗವನ್ನು ನೀಡಲಾಗಿತ್ತು. ಆದರೆ, ಇಲ್ಲಿ ಪ್ರಮುಖ ಸ್ಪರ್ಧಿಗಳು ಮಾತ್ರ ಉಳಿದುಕೊಂಡು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಗಿಚ್ಚಿ ಗಿಲಿ ಗಿಲಿ ಸೀಸನ್ ಒಂದರಲ್ಲಿ ವಂಶಿಕಾ ಅಂಜನಿ ಕಶ್ಯಪ ಹಾಗೂ ಶಿವು ವಿಜೇತರಾಗಿ ಹೊರ ಹೊಮ್ಮಿದ್ದರೇ, ವಿನೋದ್ ಗೊಬ್ರಗಾಲ್, ನಿವೇದಿತಾ ಗೌಡ ಮೊದಲ ಸೀಸನ್‌ನ ರನ್ನರ್ ಆಪ್ ಆಗಿದ್ದರು. ಗಿಚ್ಚ ಗಿಲಿಗಿಲಿ ಸೀಸನ್-2ರ ವಿನ್ನರ್ ಆಗಿ ಚಂದ್ರಪ್ರಭಾ ಅಲಂಕರಿಸಿದ್ದರು. ಇದೀಗ ಗಿಚ್ಚಿ ಗಿಲಿ ಗಿಲಿ ಸೀಸನ್-3 ಫೆಬ್ರವರಿ ಮೂರಕ್ಕೆ ಪ್ರಸಾರ ಕಾಣಲು ಸಿದ್ದವಾಗಿದ್ದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವನ್ನು ಕಾಣಲಿದೆ.
ಇದನ್ನೂ ಓದಿ: ಸ್ಪೆಷಲ್ ಫೈಟ್‌ನಲ್ಲಿ ಅಜ್ಜಿ ತಾತನ ಜೊತೆಗೆ ಅಯೋಧ್ಯೆಗೆ ಹೊರಟ ಯುವರಾಜ!
ಕಳೆದ ಸೀಸನ್ ನಲ್ಲಿ ಹಾಸ್ಯ ನಟ ಸಾಧು ಕೋಕಿಲ, ಹಿರಿಯಾ ನಟಿ ಶ್ರುತಿ ಹಾಗೂ ಸೃಜನ್ ಲೋಕೇಶ್ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 ಬರುತ್ತಿರುವುದರಿಂದ ಸೃಜನ್ ಲೋಕೇಶ್ ಅವರು ಆ ಒಂದು ರಿಯಾಲಿಟಿ ಶೋಗೆ ಜಡ್ಜ್ ಆಗಿ ಹೋಗಿರುವ ಕಾರಣ ಆ ಜಾಗಕ್ಕೆ ಕೋಮಲ್ ಎಂಟ್ರಿ ಕೊಟ್ಟಿರುವಂತೆ ಕಾಣಿಸುತ್ತಿದೆ. ಈ ವಾರ ಯಾವ ಯಾವ ಕಲಾವಿದರು ಬಂದು ತಮ್ಮ ಪ್ರತಿಭೆಯ ಮೂಲಕ ಕರ್ನಾಟಕದ ಜನರನ್ನು ರಂಜಿಸಲಿದ್ದಾರೆ ಎಂಬುದು ಕುತೂಹಲವಾಗಿದೆ.
ಕಲರ್ಸ್ ಕನ್ನಡ ವಾಹಿನಿ ಹೊಸ ಸೀಸನ್ ಬರುತ್ತಿರುವ ಬಗ್ಗೆ ಈಗಾಗಲೇ ಅಧಿಕೃತವಾಗಿ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನಿರಂಜನ್ ದೇಶಪಾಂಡೆ ಒಂದು ಹೋಟೆಲ್‌ಗೆ ಬಂದು ಟಿವಿಯನ್ನು ನೋಡುತ್ತಿರುವಾಗ ಯಾರು ಯಾರು ಗಿಚ್ಚಿ ಗಿಲಿಗಿಲಿ ಹೊಸ ಸೀಸನ್‌ಗೆ ಕಾಯುತ್ತಾ ಇದ್ದಾರೆ ಎಂಬ ರೀತಿ ಪ್ರೋಮೋ ಶೂಟ್ ಮಾಡಲಾಗಿದೆ. ಪ್ರೋಮೋ ಎಲ್ಲರ ಗಮನವನ್ನು ಸೆಳೆಯುತ್ತಿದ್ದು, ಇದರೊಂದಿಗೆ ಕಾಮಿಡಿ ಶೋ ಒಂದರಲ್ಲಿ ಕೋಮಲ್ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂತಸವನ್ನು ತಂದಿದೆ.
ಇದನ್ನೂ ಓದಿ: ಕೊಟ್ಟ ಮಾತನ್ನು ಉಳಿಸಿಕೊಂಡ 'ಹನುಮಾನ್'..! ಅಯೋಧ್ಯ ರಾಮಯ್ಯನಿಗೆ 2 ಕೋಟಿ ರೂ. ದೇಣಿಗೆ
ಸದ್ಯಕ್ಕೆ ಎಲ್ಲೂ ಕಾಣಿಸಿಕೊಳ್ಳದೆ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕೋಮಲ್ ಅವರನ್ನು ನೋಡಿದ ಅಭಿಮಾನಿಗಳಿಗೆ ಖುಷಿಯಾಗಿದೆ. ಸಾಧು ಕೋಕಿಲ ಹಾಗೂ ಹಿರಿಯ ನಟಿ ಶ್ರುತಿ ಅವರ ಜೊತೆಗೆ ಕೋಮಲ್ ಕೂಡ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ನಿರಂಜನ್ ದೇಶಪಾಂಡೆ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ಇನ್ನು ಗಿಚ್ಚಿ ಗಿಲಿ ಗಿಲಿ ಶೋ ತಮ್ಮದೇ ಆದ ವೀಕ್ಷಕ ವರ್ಗವನ್ನ ಹೊಂದಿದ್ದು, ಯಾರು ಕಾಮಿಡಿ ಮಾಡಲು ಬರುತ್ತಾರೆ. ಯಾರಿಗೆಲ್ಲ ಅವಕಾಶ ಸಿಗುತ್ತದೆ ಎಂಬುದನ್ನು ನೋಡಲು ವೀಕ್ಷಕರು ಕೂಡ ಕಾತರದಿಂದ ಕಾಯುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.