ನವದೆಹಲಿ: ಇದೊಂದು ರೋಮ್ಯಾಂಟಿಕ್ ಸಾಂಗ್ ಆಗಿದ್ದು, ಈ ಹಾಡನ್ನು ಗ್ಯಾರೇಜ್ ವೊಂದರಲ್ಲಿ ಶೂಟ್ ಮಾಡಲಾಗಿದೆ. ಈ ಹಾಡಿನಲ್ಲಿ ಅನನ್ಯ ಪಾಂಡೆ (Ananya Pandey) ಹಾಗೂ ಇಶಾನ್ ಖಟ್ಟರ್ (Ishaan Khatta) ಜೋಡಿ ಪ್ರೇಕ್ಷಕರ ಮೇಲೆ ಭಾರಿ ಮೋಡಿ ಮಾಡುತ್ತಿದ್ದು, ಹಾಡು ಬಿಡುಗಡೆಯಾಗುತ್ತಲೇ ವೈರಲ್ ಆಗಿದೆ. ವಿಶಾಲ್-ಶೇಖರ್ ಈ ಹಾಡನ್ನು ಕಂಪೋಸ್ ಮಾಡಿದ್ದಾರೆ. ಶೇಖರ್ ರಾಜವಾಣಿ ಹಾಗೂ ಪ್ರಕೃತಿ ಕಕ್ಕಡ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಮುಂಬರುವ ಚಿತ್ರ 'ಖಾಲಿ-ಪೀಲಿ' ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದುವರೆಗೆ ಯುಟ್ಯೂಬ್ ನಲ್ಲಿ 18 ಲಕ್ಷಕ್ಕೂ ಅಧಿಕ ಪ್ರೇಕ್ಷಕರು ವಿಕ್ಷೀಸಿದ್ದಾರೆ.


COMMERCIAL BREAK
SCROLL TO CONTINUE READING

ವೈರಲ್ ಆಗುತ್ತಿದೆ ಈ ಹಾಡಿನ ವಿಡಿಯೋ
ಪ್ರಸ್ತುತ ಈ ಹಾಡಿನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇಶಾನ್ ಖಟ್ಟರ್ ಹಾಗೂ ಅನನ್ಯ ಪಾಂಡೆ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಖಾಲಿ-ಪೀಲಿ' ಚಿತ್ರ ಚಿಕ್ಕಂದಿನಿಂದಲೂ ಪ್ರೀತಿಸುತ್ತಿರುವ ಪೂಜಾ ಹಾಗೂ ಬ್ಲ್ಯಾಕಿ ಅವರ ಕಥೆಯಾಗಿದೆ. ಬಾಲ್ಯದಲ್ಲಿ ಪರಸ್ಪರ ಬೇರ್ಪಟ್ಟ ಇಬ್ಬರು ಬಳಿಕ ಯೌವನಾವಸ್ಥೆಯಲ್ಲಿ ಮತ್ತೆ ಒಂದಾಗುತ್ತಾರೆ. 'ಚೆಸ್ ಅಂಡ್ ಎಸ್ಕೇಪ್' ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ.


ಮಕಬೂಲ್ ಖಾನ್ ಈ ಚಿತ್ರದ ನಿರ್ದೇಶಕರಾಗಿದ್ದು, ಅಲಿ ಅಬ್ಬಾಸ್ ಜಾಫರ್ ಹಾಗೂ ಹಿಮಾಂಶು ಮೆಹ್ರಾ ಈ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಯಶ್ ಕೆಸರ್ವಾಣಿ ಹಾಗೂ ಸೀಮಾ ಅಗರವಾಲ್ ಈ ಚಿತ್ರದ ಕಥೆ ಬರೆದಿದ್ದಾರೆ. ಜಯದೀಪ್ ಅಹಲಾವತ್ ಹಾಗೂ ಸತೀಶ್ ಕೌಶಿಕ್ ಅವರೂ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಅಕ್ಟೋಬರ್ 2, 2020 ರಂದು ಜಿ ಪ್ಲೆಕ್ಸ್ ಮೇಲೆ ಬಿಡುಗಡೆಯಾಗಲಿದೆ.