Neha Kakkar ಬರ್ತ್ ಡೇ ಮರೆತ ಪತಿ ರೋಹನ್ ಪ್ರೀತ್, ಮುಂದೆ..?
ಗಾಯಕ ನೇಹಾ ಕಕ್ಕರ್ ಅವರ ಹೊಸ ಹಾಡು `ಖಾದ್ ತೈನು ಮೇ ದಸ್ಸಾ` ಬಿಡುಗಡೆಯಾಗಿದೆ.
ನವದೆಹಲಿ : ಗಾಯಕ ನೇಹಾ ಕಕ್ಕರ್ (Neha Kakkar) ಅವರ ಹೊಸ ಹಾಡು 'ಖಾದ್ ತೈನು ಮೇ ದಸ್ಸಾ' (Khad Tainu Main Dassa) ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ನೇಹಾ ಅವರ ಪತಿ ರೋಹನ್‌ಪ್ರೀತ್ (Rohanpreet) ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಪ್ರತಿ ಹಾಡಿನಂತೆ ಈ ಹಾಡು ಬಿಡುಗಡೆಯಾಗುತ್ತಿದ್ದಂತೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದೆ.
ಹಾಡು ಇಲ್ಲಿಂದ ಆರಂಭವಾಗುತ್ತದೆ :
ರೋಹನ್‌ಪ್ರೀತ್‌ಗಾಗಿ (Rohanpreet) ಕಾಯುತ್ತಿರುವ ನೇಹಾ ಸೋಫಾದ ಮೇಲೆ ಕುಳಿತಿರುತ್ತಾರೆ. ಪತಿ ರೋಹನ್‌ಪ್ರೀತ್, ನೇಹಾ ಹುಟ್ಟಿದ ದಿನವನ್ನೇ ಮರೆತಿರುತ್ತಾರೆ. ಆದರೆ ಲಿಫ್ಟ್ ನಲ್ಲಿ ಹೋಗುತ್ತಿದ್ದ ರೋಹನ್ ಪ್ರೀತ್ ಗೆ, ಇದ್ದಕ್ಕಿದ್ದಂತೆ ಇವತ್ತು ನೇಹಾ (Neha Kakkar) ಬರ್ತ್ ಡೇ ಅನ್ನೋದು ನೆನಪಿಗೆ ಬರುತ್ತದೆ. ಕೂಡಲೇ ಅವರು, ಮನೆಗೆ ಹಿಂದಿರುಗುತ್ತಾರೆ. ಪತಿ ಹುಟ್ಟಿದ ದಿನ ಮರೆತಿರುವ ಕಾರಣ, ನೇಹಾ ಬಹಳ ಕೋಪಗೊಂಡಿರುತ್ತಾರೆ. ಇಲ್ಲಿಂದ ಹಾಡು ಆರಂಭವಾಗುತ್ತದೆ.
ಇದನ್ನೂ ಓದಿ : ಆನ್ ಲೈನ್ ನಲ್ಲಿ ಲೀಕ್ ಆದ Radhe, ಸಲ್ಮಾನ್ ಕೊಟ್ಟ ಎಚ್ಚರಿಕೆ ಏನು ಗೊತ್ತೇ?
ಹಾಡಿನ ಬಗ್ಗೆ ಮಾಹಿತಿ :
ಈ ಹಾಡನ್ನು ನೇಹಾ ಕಕ್ಕರ್ ಮತ್ತು ರೋಹನ್‌ಪ್ರೀತ್ ಸಿಂಗ್ ಹಾಡಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಕ್ಯಾಪ್ಟನ್ ರಚಿಸಿದ್ದಾರೆ. ರಜತ್ ನಾಗ್ಪಾಲ್ ಸಂಗೀತ ನೀಡಿದ್ದಾರೆ. ಈ ಮ್ಯೂಸಿಕ್ ವಿಡಿಯೋವನ್ನು (Music video) ಅಗಮ್-ಅಜೀಮ್ ನಿರ್ದೇಶಿಸಿದ್ದಾರೆ. ಈ ವಿಡಿಯೋ ಸಾಂಗ್ (Video song) ಅನ್ನು ಇಬ್ಬರ ಅಭಿಮಾನಿಗಳು ಬಹಳಷ್ಟು ಮೆಚ್ಚಿದ್ದಾರೆ. ಈ ಹಾಡಿಗೆ ಬಹಳಷ್ಟು ಲೈಕ್ ಗಳು ಸಿಗುತ್ತಿವೆ.
ಇದನ್ನೂ ಓದಿ : ಕರೋನಾ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡ ಅಮಿತಾಬ್ ಬಚ್ಚನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.