Vanitha Vijay Kumar Rumour: ಇತ್ತೀಚೆಗಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ವಿಚ್ಛೇದನ, ಮದುವೆ, ಕೊಲೆ ಪ್ರಕರಣ ಇಂತಹ ವಿಚಾರಗಳೇ ಹೆಚ್ಚಾಗಿ ಸುದ್ದಿಯಾಗುತ್ತಿದೆ. ಇದೀಗ ಮತ್ತೋರ್ವ ನಟಿ, ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಈಕೆ 4ನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಹಿರಿಯ ನಟ ವಿಜಯ್ ಕುಮಾರ್ ಹಾಗೂ ದಿವಂಗತ ನಟಿ ಮಂಜುಳಾ ಪುತ್ರಿ ವನಿತಾ ವಿಜಯ್ ಕುಮಾರ್ ಮತ್ತೊಮ್ಮೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ವನಿತಾ ವಿಜಯ್ ಕುಮಾರ್ ಈಗಾಗಲೇ ಮೂರು ಮದುವೆಯಾಗಿರುವುದು ಗೊತ್ತೇ ಇದೆ.


ನಿದ್ರೆಯಿಂದ ಎಬ್ಬಿಸಿ ‘ಅದೆಲ್ಲಾ’ ಮಾಡು ಅಂತಾರೆ!! ಗಂಡನ ಆ ಅಭ್ಯಾಸಕ್ಕೆ ನಟಿ ಮಹಾಲಕ್ಷ್ಮಿ ಸುಸ್ತು


ಇಂಡಸ್ಟ್ರಿಯಲ್ಲಿ ವಿವಾದಾತ್ಮಕ ನಟಿ ಎಂಬ ಹಣೆಪಟ್ಟಿ ಹೊತ್ತಿರುವ ವನಿತಾ ವಿಜಯ್ ಕುಮಾರ್ ನಾಲ್ಕನೇ ಮದುವೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ.  2000 ರಲ್ಲಿ ಮೊದಲ ಬಾರಿಗೆ ನಟ ಆಕಾಶ್ ಎಂಬವರನ್ನು ವಿವಾಹವಾದರು. ವಿಜಯ್ ಹರಿ ಮತ್ತು ಜೋವಿಕಾ ಎಂಬ ಇಬ್ಬರು ಮಕ್ಕಳ ಜನನದ ನಂತರ ಬೇರ್ಪಟ್ಟರು.


ನಾಲ್ಕನೇ ಮದುವೆಯಾಗುತ್ತಿರುವ ವನಿತಾ ವಿಜಯ್ ಕುಮಾರ್ ದೊಡ್ಡ ಸಿನಿಮಾ ನಟರ ಕುಟುಂಬದಿಂದ ಬಂದವರು. ತಮಿಳಿನಲ್ಲೂ ನಾಯಕ ವಿಜಯ್ ಜೊತೆ ಸಿನಿಮಾ ಮಾಡಿದ್ದಾರೆ. ಆದರೆ ಹೆಚ್ಚು ಸಿನಿಮಾಗಳು ಸಿಗದ ಕಾರಣ ಯೂಟ್ಯೂಬ್ ನಿರ್ವಹಣೆ ಮಾಡುತ್ತಿದ್ದಾರೆ.


ವನಿತಾ ತನ್ನ ಮೊದಲ ಮದುವೆ ನಂತರ ಆನಂದ್ ಎಂಬ ಉದ್ಯಮಿಯನ್ನು ಎರಡನೇ ಬಾರಿಗೆ ವಿವಾಹವಾದರು. ಇವರ ಜೊಯೆ ಕೂಡ ದಾಂಪತ್ಯ ಜೀವನವು ಹೆಚ್ಚು ಕಾಲ ಉಳಿಯಲಿಲ್ಲ.


ವನಿತಾ ವಿಜಯ್ ಕುಮಾರ್ 2020 ರಲ್ಲಿ ಮೂರನೇ ಬಾರಿಗೆ ವಿವಾಹವಾದರು. ನಾಲ್ಕು ವರ್ಷಗಳಿಂದ ಪೀಟರ್ ಪಾಲ್ ಎಂಬ ವ್ಯಕ್ತಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದ ಅವರು ಕೊನೆಗೆ ಮದುವೆಯಾಗಿದ್ದರು. ಆದರೆ ಈ ಮದುವೆಯೂ ಮುರಿದುಬಿತ್ತು.


ಆದರೆ ಇದೀಗ ಈ ನಟಿ ಮತ್ತೆ ಮದುವೆಯಾಗುವ ಸೂಚನೆ ನೀಡಿದ್ದಾರೆ. ಸಿನಿಮಾಗಳ ಹೊರತಾಗಿ, ತನ್ನ ಯೂಟ್ಯೂಬ್ ಚಾನೆಲ್ ಕಾರ್ಯಕ್ರಮಗಳ ಮೂಲಕ  ಕಾಣಿಸಿಕೊಳ್ಳುವ ವನಿತಾಗೆ ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದರು. ಆ ಕಾಮೆಂಟ್ ಬೆನ್ನಲ್ಲೇ ಮತ್ತೆ ಮದುವೆಯಾಗುವುದಾಗಿ ಹೇಳಿದ್ದಾರೆ ಎಂಬುದು ಸೌತ್ ಚಿತ್ರರಂಗದ ಮಾತು.


ಅನುಷ್ಕಾಗೂ ಮುನ್ನ ವಿರಾಟ್ ಕೊಹ್ಲಿಯನ್ನು ನಾನು ಹುಚ್ಚರಂತೆ ಪ್ರೀತಿಸಿದ್ದೆ!! ಸೆನ್ಸೇಷನಲ್‌ ಹೇಳಿಕೆ ನೀಡಿದ ಸೌತ್‌ʼನ ಪ್ರಖ್ಯಾತ ನಟಿ ಯಾರು?


ಅಷ್ಟಕ್ಕೂ ಆಕೆ ಮದುವೆಯಾಗುತ್ತಿರುವುದು ಯಾರನ್ನು? ನಾಲ್ಕನೇ ಮದುವೆ ಸುದ್ದಿ ನಿಜವೇ ಎಂಬುದು ನೆಟ್ಟಿಗರ ಸದ್ಯದ ಪ್ರಶ್ನೆಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ