Niharika konidela: ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಲವ್ ಮಾಡೋದು, ಮದುವೆಯಾಗೋದು ಹಾಗು ಡೈವೋರ್ಸ್ ಪಡೆದುಕೊಳ್ಳೋದು ಕಾಮನ್ ಆಗಿ ಹೋಗಿದೆ, ಈ ಡೈವೋರ್ಸ್ ಅನ್ನುವುದು ಒಂದೆರಡು ವರ್ಷಗಳ ದಂಪತಿಯನ್ನು ಅಲ್ಲ, 20, 30 ವರ್ಷಗಳ ದಾಂಪತ್ಯವನ್ನು ಸಹ ಕೊನೆಗೊಳಿಸುತ್ತಿದೆ. ಇದೀಗ ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಛೇಧನ ಪಡೆದುಕೊಂಡಿದ್ದ ನಟಿಯೊಬ್ಬರು, ವಿಚ್ಛೇಧನ ಪಡೆದ ಒಂದೇ ವರ್ಷದಲ್ಲಿ ಮತ್ತೊಂದು ಮದುವೆಯಾಗಲು ಸಜ್ಜಾಗಿದ್ದಾರೆ. 


COMMERCIAL BREAK
SCROLL TO CONTINUE READING

ಮೆಗಾಸ್ಟಾರ್ ಕುಟುಂಬ ಅಂದರೆ ಟೋಲಿವುಡ್ನಲ್ಲಿ ಒಳ್ಳೆ ನೇಮ್ ಫೇಮ್ ಗಿಟ್ಟಿಸಿಕೊಂಡಿದೆ ಅಂತಲೆ ಹೇಳಬಹುದು, ಟಾಲಿವುಡ್ ಇಂಡಸ್ಟ್ರಿಯ ಅತಿ ಶ್ರೀಮಂತ ಕುಟುಂಬ ಅಂದರೆ ಅದು ಮೆಗಾ ಫ್ಯಾಮಿಲಿ ಅಂತಲೆ ಹೇಳಬಹುದು. ಮೆಗಾ ಫೆಮಿಲ್ಯ್ಯ ಗಂಡು ಕುಡಿಗಳು, ಸಿನಿಮಾಗಳಲ್ಲಿ ಅಷ್ಟೇ ಅಲ್ಲದೇ ತಮ್ಮ ವೈಯಕ್ತಿಕ ಜೀವನದಲ್ಲಿಯೂ ಸಹ ಸಕ್ಸಸ್ ಕಂಡು ಒಳ್ಳೆ ಹೆಸರು ಸಂಪಡಿಸಿಕೊಂಡಿದ್ದಾರೆ. ಆದರೆ ಮೆಗಾ ಫ್ಯಾಮಿಲಿಯ ಹೆಣ್ಣು ಮಕ್ಕಳು ಹಾಗಲ್ಲ, ಮದುವೆ ಡೈವೋರ್ಸ್ ಅಂಥ ಸಿಕ್ಕಾಪಟ್ಟೆ ಚರ್ಚೆಯಲ್ಲಿ ಇರ್ತಾರೆ. ಇದೀಗ ಅದೇ ರೀತಿ ಮೆಗಾ ಫ್ಯಾಮಿಲಿಯ ನಿಹಾರಿಕ ಕೊನಿಡೆಲಾ ಕೂಡ ತಮ್ಮ ಮದುವೆ ಆಗು ವಿಚ್ಛೇದನದ ಕಾರಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. 


ಚಿರಂಜೀವಿ ಅವರ ಸಹೋದರನ ಮಗಳಾಗಿರುವ ನಿಹಾರಿಕ ಇತ್ತೀಚೆಗೆ ಸಿನಿಮಾಗಳಲ್ಲಿ ಸಾಕಷ್ಟು ಯಶಸನ್ನು ಕಂಡವರು, ಈಕೆ ಒಂದು ವರ್ಷದ ಹಿಂದೆಯಷ್ಟೇ ವೆಂಕಟ ಚೈತನ್ಯ ಎಂಬುವವರನ್ನು ಮದುವೆಯಾಗಿದ್ದರು, ಕುಟುಂಬದವ್ರೆಲ್ಲ ಸೇರಿ ಜೋಡಿಗೆ ಅದ್ದೂರಿಯಾಗಿ ಮದುವೆ ಮಾಡಿದ್ದರು, ಆದರೆ ಈ ಜೋಡಿ ಮದುವೆ ಅಷ್ಟು ದಿನ ಏನು ಉಳಿಯಲಿಲ್ಲ, ಮದುವೆಯಾದ ಎರಡೇ ವರ್ಷಕ್ಕೆ ನಿಹಾರಿಕ ಗಂಡನಿಗೆ ವಿಚ್ಛೇಧನ ನೀಡಿ ದೊರವಾಗಿದ್ದರು. ಸದ್ಯ ಸಿನಿಮಾಗಳಲ್ಲಿ ನಿರ್ಮಾಪಕಿಯಾಗಿ ತಮ್ಮನ್ನು ಗುರಿತಿಸಿಕೊಂಡಿರುವ ನಿಹರಿಕ ಕುರಿತಾದ ಸುದ್ದಿಯೊಂದು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈಕೆ ಇಂಡಸ್ಟ್ರಿಯಲ್ಲಿ ಸ್ಟಾರ್ ನಟನೊಬ್ಬನ ಜೊತೆಯಲ್ಲಿ ಪ್ರೀತಿಯಲ್ಲಿ ಬಿದ್ದಿದ್ದು, ಶೀಘ್ರವೇ ಗುಡ್ ನ್ಯೂಸ್ ಕೊಡಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ಮದುವೆಯಾಗೋದು, ಡೈವೋರ್ಸ್ ತೆಗೆದುಕೊಳ್ಳೋದು ಸದ್ಯ ಕಾಮನ್ ಆಗಿ ಹೋಗಿದ್ದು, ಈ ಬಾರಿಯಾದರೂ ಗಂಡನ ಜೊತೆ ಚೆನ್ನಾಗಿ ಈರಮ್ಮ ಎನ್ನುತ್ತಿದ್ದಾರೆ ನೆಟ್ಟಿಗರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.