Nita Ambani fashion brands: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರ ಫ್ಯಾಶನ್ ಶೈಲಿಯು ಉನ್ನತ ಮಟ್ಟದಲ್ಲಿದೆ. ಅವರ ಬಟ್ಟೆಗಳಿಗೆ ಆಕ್ಸೆಸರಿಗಳಿಗೆ ಹೋಲಿಕೆ ಅದ್ಭುತವಾಗಿರುತ್ತದೆ. ಇವರು ಸ್ಟೈಲಿಶ್‌ ಆಗಿ ಕಾನುವ ಹಿಂದೆ ಟಾಪ್ ಡಿಸೈನರ್‌ಗಳ ಶ್ರಮವಿದೆ. ನೀತಾ ಅಂಬಾನಿ ಅವರ ನೆಚ್ಚಿನ ಡಿಸೈನರ್ ಮತ್ತು ಫ್ಯಾಷನ್ ಬ್ರ್ಯಾಂಡ್ ಬಗ್ಗೆ ಇಂದು ಹೇಳುತ್ತಿದ್ದೇವೆ.ನೀತಾ ಅಂಬಾನಿ ಮೆಚ್ಚಿನ ಡಿಸೈನರ್ ಮತ್ತು ಫ್ಯಾಶನ್ ಬ್ರ್ಯಾಂಡ್‌ಗಳು ಅವರಿಗೆ ರಾಯಲ್ ಲುಕ್ ನೀಡುತ್ತವೆ. ನೀತಾ ಅಂಬಾನಿ ಇವರಿಂದಲೇ ಬಟ್ಟೆ ಮತ್ತು ಪರ್ಸ್ ಖರೀದಿಸುತ್ತಾರೆ ಎನ್ನಲಾಗಿದೆ.  


COMMERCIAL BREAK
SCROLL TO CONTINUE READING

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಮದುವೆಗೂ ಮುನ್ನವೇ ಫಂಕ್ಷನ್, ಪೂಜೆಗಳು ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಮಧ್ಯೆ ಅಂಬಾನಿ ಮಹಿಳೆಯರ ಫ್ಯಾಶನ್ ಕೂಡ ಹೈಲೈಟ್‌ ಆಗುತ್ತಿದೆ. ಅದರಲ್ಲಿ ನೀತಾ ಅಂಬಾನಿ ಅವರಂತೂ ಅಗ್ರಸ್ಥಾನದಲ್ಲಿದ್ದಾರೆ. ಅವರ ಬಟ್ಟೆ ಮತ್ತು ಪರ್ಸ್‌ ಗಳಲ್ಲಿ ರಾಯಲ್ ಶೈಲಿಯನ್ನು ಕಾಣಬಹುದು.


ಇದನ್ನೂ ಓದಿ : 27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!


ದೇಶದ ಅತ್ಯಂತ ಶ್ರೀಮಂತ ಕುಟುಂಬದ ಸೊಸೆ ನೀತಾ ಅಂಬಾನಿಯವರ ಆಯ್ಕೆಗಳಲ್ಲಿ ಶ್ರೀಮಂತಿಕೆಯು ಪ್ರತಿಫಲಿಸುತ್ತದೆ. ನೀತಾ ಅಂಬಾನಿ ಅವರ ನೆಚ್ಚಿನ ಡಿಸೈನರ್ ಅನ್ಬು ಜಾನಿ ಮತ್ತು ಸಂದೀಪ್ ಖೋಸ್ಲಾ. 


ಫ್ಯಾಷನ್ ಉದ್ಯಮದ ಪ್ರಸಿದ್ಧ ದಂಪತಿಗಳಾದ ಅನ್ಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ಅಂಬಾನಿ ಕುಟುಂಬದೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದಾರೆ. ಈ ದಂಪತಿಗಳು ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಅಂಬಾನಿ ಕುಟುಂಬಸ್ಥರು ಹೆಚ್ಚಾಗಿ ಧರಿಸುತ್ತಾರೆ. 


ನೀತಾ ಅಂಬಾನಿ ಅವರು ಅನ್ಬು ಜಾನಿ-ಸಂದೀಪ್ ಖೋಸ್ಲಾ ಅವರಿಂದ ವಿನ್ಯಾಸಗೊಂಡ ಉಡುಪು ಮತ್ತು ಪರ್ಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸೀರೆಯಾಗಿರಲಿ ಅಥವಾ ಲೆಹೆಂಗಾ ಆಗಿರಲಿ ಈ ಡಿಸೈನರ್ ಜೋಡಿ ಸಿದ್ಧಪಡಿಸಿದ ಉಡುಗೆಯಲ್ಲಿ ನೀತಾ ಅಂಬಾನಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. 


ಫ್ಯಾಷನ್ ಉದ್ಯಮದ ಅತ್ಯಂತ ಪ್ರಸಿದ್ಧ ವಿನ್ಯಾಸಕ ಮನೀಶ್ ಮಲ್ಹೋತ್ರಾ ಕೂಡ ನೀತಾ ಅಂಬಾಣಿ ಅವರ ಉಡುಗೆಯನ್ನು ವಿನ್ಯಾಸಗೊಳಿಸುತ್ತಾರೆ. NMACC ಯ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವಾಗಲಿ ಅಥವಾ ಅಂಬಾನಿ ಕುಟುಂಬದ ಯಾವುದೇ ದೊಡ್ಡ ಆಚರಣೆಯಾಗಲಿ, ನೀತಾ ಈ ಪ್ರಸಿದ್ಧ ವಿನ್ಯಾಸಕನ ಬಟ್ಟೆಗಳಲ್ಲಿ ಕಾಣಿಸಿಕೊಂಡಿದ್ದಾರೆ. 


ಇದನ್ನೂ ಓದಿ : ರೋಹಿತ್‌ ಶರ್ಮಾರನ್ನು ತಬ್ಬಿ ಕಣ್ಣೀರಿಟ್ಟ ನೀತಾ ಅಂಬಾನಿ..!


ನೀತಾ ಅಂಬಾನಿ ಅವರ ಟಾಪ್ ಫ್ಯಾಷನ್ ಡಿಸೈನರ್‌ಗಳಲ್ಲಿ ಸಬ್ಯಸಾಚಿ ಮುಖರ್ಜಿ ಅವರ ಹೆಸರೂ ಸೇರಿದೆ. ಇಶಾ ಅಂಬಾನಿ ಅವರ ಮದುವೆಯ ಅನೇಕ ಸಮಾರಂಭಗಳಲ್ಲಿ ಸಬ್ಯಸಾಚಿ ಸೀರೆ ಮತ್ತು ಲೆಹೆಂಗಾಗಳನ್ನು ನೀತಾ ಧರಿಸಿದ್ದರು. ಅಷ್ಟೇ ಅಲ್ಲ ಈ ಬ್ರ್ಯಾಂಡ್‌ನ ಬಟ್ಟೆಗಳನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ.  


ಇಟಾಲಿಯನ್ ಐಷಾರಾಮಿ ಬ್ರಾಂಡ್ ವ್ಯಾಲೆಂಟಿನೋ ಕಡೆಯಿಂದ ನೀತಾ ಅಂಬಾನಿ ಅವರ ಪರ್ಸ್‌, ಬ್ಯಾಗ್‌ಗಳನ್ನು ಖರೀದಿಸುತ್ತಾರೆ. ಹೆಚ್ಚಾಗಿ ವ್ಯಾಲೆಂಟಿನೋ ಪಾದರಕ್ಷೆಗಳನ್ನೇ ನೀತಾ ತೊಡುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.