ಅಂಬಾನಿಯನ್ನು ಮದುವೆಯಾಗುವ ಮೊದಲು ʼನೀತಾʼ ಅವರ ಸಂಬಳ ಎಷ್ಟಿತ್ತು ಗೊತ್ತೆ..?
Nita ambani salary : ಕಲೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದ ನೀತಾ ಅಂಬಾನಿಯವತು ತಮ್ಮ 6ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದರು. 20ನೇ ವಯಸ್ಸಿನವರೆಗೂ ನಿರಂತರವಾಗಿ ತರಬೇತಿ ಪಡೆದು ಭರತನಾಟ್ಯದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು...
Nita Ambani : ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ವಿಶ್ವದ ಅತ್ಯಂತ ಪ್ರಸಿದ್ಧ ಮಹಿಳೆಯರಲ್ಲಿ ಒಬ್ಬರು. ಕೋಟ್ಯಾಧಿಪತಿ ಕುಟುಂಬದ ಪ್ರತೀಕವಾಗಿರುವ ಇವರು ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದ್ದಾರೆ. ಆದರೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಅಂಬಾನಿಯನ್ನು ಮದುವೆಯಾಗುವ ಮೊದಲು ನೀತಾ ಅಂಬಾನಿಯವರ ಸರಳ ಜೀವನದ ಬಗ್ಗೆ ಅನೇಕರಿಗೆ ತಿಳಿದಿಲ್ಲ.
ಹೌದು.. ರಿಲಯನ್ಸ್ ಗ್ರೂಪ್‌ನ ಮುಖೇಶ್ ಅಂಬಾನಿ 1985 ರಲ್ಲಿ ನೀತಾ ಅಂಬಾನಿ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಅವಳಿ ಮಕ್ಕಳು. ಕಿರಿಯ ಮಗನ ಹೆಸರು ಅನಂತ್ ಅಂಬಾನಿ. ಈಗ ಕೋಟ್ಯಾಧಿಪತಿ ಕುಟುಂಬಕ್ಕೆ ಸೇರಿದ್ದರೂ, ಅದಕ್ಕೂ ಮೊದಲು ನೀತಾ ಅಂಬಾನಿ ಅವರ ಜೀವನವು ಅಷ್ಟೊಂದು ಸಮೃದ್ಧವಾಗಿರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: ಶ್ರೀರಾಮ, ವಿಷ್ಣುವಿನ ಪಾತ್ರವಾಯ್ತು ಇದೀಗ 'ಕಣ್ಣಪ್ಪ' ಚಿತ್ರದಲ್ಲಿ ʼಶಿವʼನಾದ ಪ್ರಭಾಸ್..!
ಮುಖೇಶ್ ಅಂಬಾನಿಯನ್ನು ಮದುವೆಯಾಗುವ ಮೊದಲು, ನೀತಾ ಅಂಬಾನಿ ದಲಾಲ್ ಮಾಧ್ಯಮ ಕುಟುಂಬಕ್ಕೆ ಸೇರಿದವರು. ನೀತಾ ದಲಾಲ್ ಅಂಬಾನಿ ಅವರ ತಂದೆ ರವೀಂದ್ರಭಾಯಿ ಅಂಬಾನಿ ಆದಿತ್ಯ ಬಿರ್ಲಾ ಗ್ರೂಪ್‌ನಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದರು. ಕಲೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದ ನೀತಾ ಅಂಬಾನಿ 6ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದರು. 20ನೇ ವಯಸ್ಸಿನವರೆಗೂ ನಿರಂತರವಾಗಿ ತರಬೇತಿ ಪಡೆದು ಭರತನಾಟ್ಯದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.
ಈ ಮಧ್ಯ, ನೀತಾ ಅವರು ಭರತನಾಟ್ಯವನ್ನು ಸಂಪೂರ್ಣವಾಗಿ ಕಲಿತರು ಮತ್ತು ನೃತ್ಯಗಾರ್ತಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರೊಂದಿಗೆ ಚಿಕ್ಕ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಹಣ ಸಂಪಾದಿಸತೊಡಗಿದಳು. ಮುಕೇಶ್ ಅಂಬಾನಿಯನ್ನು ಮದುವೆಯಾಗುವ ಮೊದಲು ಅವರು ಮುಂಬೈನ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ವರ್ಕೌಟ್ ವಿಡಿಯೋ ವೈರಲ್
ಮುಕೇಶ್ ಅಂಬಾನಿಯವರನ್ನು ಮದುವೆಯಾದ ನಂತರ ನೀತಾ ಅವರು ಒಂದು ವಿನಂತಿ ಮಾಡಿಕೊಂಡಿದ್ದರಂತೆ. ಮದುವೆಯಾದ ನಂತರವೂ ತಾವು ಕೆಲಸ ಮಾಡಲು ಅವಕಾಶ ನೀಡಬೇಕು ಅಂತ ಕೇಳಿಕೊಂಡಿದ್ದರಂತೆ. ಇದಕ್ಕೆ ಅಂಬಾನಿ ಕುಟುಂಬವೂ ಸಹ ಸಂತಸದಿಂದ ಒಪ್ಪಿಗೆ ಸೂಚಿಸಿತ್ತು.
ಅದರಂತೆ ಮದುವೆಯ ನಂತರವೂ ಸೈಂಟ್ ಫ್ಲವರ್ ನರ್ಸರಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ ಎಂದು ನೀತಾ ಅವರೇ ಹೇಳಿದ್ದರು. ಮಿಲಿಯನೇರ್ ಕುಟುಂಬಕ್ಕೆ ಸೊಸೆಯಾಗಿ ಬಂದರೂ ವೃತ್ತಿ ಮುಂದುವರಿಸುವ ಮೂಲಕ ತಿಂಗಳಿಗೆ 800 ರೂಪಾಯಿ ಸಂಬಳ ಪಡೆದಿದ್ದೆ ಎಂದು ಸಂದರ್ಶನವೊಂದರಲ್ಲಿ ನೀತಾ ಅಂಬಾನಿ ತಿಳಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.