Nivedita gowda : ಸೋಷಿಯಲ್‌ ಮೀಡಿಯಾ ಫೇಮ್‌, ಕಿರುತೆರೆಯಲ್ಲಿ ಮಿಂಚುತ್ತಿರುವ ನಿವೇದಿತಾ ಗೌಡ್‌ ರೀಲ್ಸ್‌ ಒಂದರ ಮೂಲಕ ಇಂಟರ್‌ನೆಟ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ರ‍್ಯಾಪರ್ ಚಂದನ್‌ ಶೆಟ್ಟಿ ಡ್ಯಾಶ್‌ ಸಾಂಗ್‌ಗೆ ನಿವೇದಿತಾ ಮೈ ಬಳುಕಿಸಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿದೆ. ಸಾವಿರಾರು ಜನರು ಈಗಾಗಲೇ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದು, ಮೆಚ್ಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗಷ್ಟೆ ನಿವೇದಿತಾ ಗೌಡ್‌ ಅವರು ಫಾರೀನ್‌ ಟ್ರಿಪ್‌ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಇರುವ ನಿವೇದಿತಾ ಆಗಾಗ ಹಾಟ್‌ ಫೋಟೋಸ್‌ ಇಲ್ಲವೆ ರಿಲ್ಸ್‌ ಮೂಲಕ ತಮ್ಮ ಫ್ಯಾನ್ಸ್‌ಗಳನ್ನ ಎಂಟರ್‌ಟೈನ್‌ ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಪತಿ ಚಂದನ್‌ ಶೆಟ್ಟಿ ಪಾರ್ಟಿ ಸಾಂಗ್‌ ಮೂಲಕ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದಾರೆ.


ಇದನ್ನೂ ಓದಿ : BBK9 : ಕೈ ಕೊಟ್ಟ ಅದೃಷ್ಟ... ಬಿಗ್‌ಬಾಸ್‌ ಹೌಸ್‌ನಿಂದ ದಿವ್ಯಾ ಉರುಡುಗ ಔಟ್‌...!



ಗಾಯಕರಾಗಿ ಗುರುತಿಸಿಕೊಂಡಿರುವ ಚಂದನ್ ಶೆಟ್ಟಿ ನಟನೆಗೂ ಕಾಲಿಟ್ಟಿದ್ದಾರೆ. ಈಗಾಗಲೇ ಅವರು ʼಸೂತ್ರಧಾರಿʼ ಸಿನಿಮಾ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾದ 'ಡ್ಯಾಶ್ ಸಾಂಗ್‌..' ಎಂಬ ಹಾಡು ಬಿಡುಗಡೆಯಾಗಿದೆ. ನ್ಯೂ ಇಯರ್ ಸೆಲೆಬ್ರೇಷನ್ ಮೂಡ್‌ನಲ್ಲಿ ಇರುವವರಿಗೆ ಈ ಹಾಡು ಸಖತ್ ಕಿಕ್ ನೀಡುವುದರಲ್ಲಿ ಸಂಶಯವೇ ಇಲ್ಲ.


ಈ ಹಾಡಿಗೆ ʼಭಜರಂಗಿʼ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್ ಚಂದನ್‌ ಶೆಟ್ಟಿ ಜೊತೆ ಹೆಜ್ಜೆ ಹಾಕಿದ್ದಾರೆ. ನಿರ್ಮಾಪಕ ನವರಸನ್ ʼಸೂತ್ರಧಾರಿʼ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಡ್ಯಾಶ್‌ ಸಾಂಗ್‌ 3.5 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇದೀಗ ಜನರು ಈ ಹಾಡಿನ ರೀಲ್ಸ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಈ ಪೈಕಿ ನಿವೇದಿತಾ ಗೌಡ ಕೂಡ ಒಬ್ಬರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.