ಬೆಂಗಳೂರು: "ಕರ್ಮ", ಪ್ರತೀಕಾರದ ಅವಶ್ಯಕತೆಯೇ ಇಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದು ಎಲ್ಲರಲ್ಲೂ ಸಾಕಷ್ಟು ಕುತೂಹಲ ಮೂಡಿಸಿದೆ.


COMMERCIAL BREAK
SCROLL TO CONTINUE READING

ಚಂದನವನದ ಚಾಲೆಂಜಿಂಗ್ ಸ್ಟಾರ್, ಎಲ್ಲರ ನೆಚ್ಚಿನ ದಾಸ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ, "ಕರ್ಮ", ಪ್ರತೀಕಾರದ ಅವಶ್ಯಕತೆಯೇ ಇಲ್ಲ. ಸುಮ್ಮನೆ ಕುಳಿತು ಕಾದು ನೋಡುತ್ತಿದ್ದರೆ ಸಾಕು. ನಿನ್ನನ್ನು ನೋಯಿಸಿದವರು ಕ್ರಮೇಣ ತಮ್ಮನ್ನು ತಾವೇ ನಾಶ ಮಾಡಿಕೊಳ್ಳುತ್ತಾರೆ. ನೀವು ಅದೃಷ್ಟವಂತರಾಗಿದ್ದರೆ, ಅದನ್ನೆಲ್ಲ ನೋಡುವ ಅವಕಾಶವನ್ನೂ ದೇವರು ನಿಮಗೆ ನೀಡುತ್ತಾನೆ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.



ಯಾರ ಹೆಸರನ್ನೂ ಉಲ್ಲೇಖಿಸದೆ ಚಪ್ಪಾಳೆ ಹಾಗೂ ನಗುಮುಖದ ಸ್ಮೈಲಿಗಳ ಜೊತೆಗೆ ವಿಜಯಲಕ್ಷ್ಮೀ ಈ ಟ್ವೀಟ್ ಮಾಡಿದ್ದು, ಯಾರಿಗೆ ಈ ಸಂದೇಶ ರವಾನಿಸಿದ್ದಾರೆ ಎಂಬುದು ಇದೀಗ ಚಿತ್ರರಂದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.