ಗಯಾ: ಸಮಾಜದಲ್ಲಿನ ಶೋಷಿತ ಸಮುದಾಯಗಳಿಗಿರುವ ಮೀಸಲಾತಿಯನ್ನು ಕೊನೆಗೊಳಿಸುವ ಅಧಿಕಾರ ಯಾರಿಗೂ ಇಲ್ಲ ಒಂದು ವೇಳೆ ಈ ಕ್ರಮಕ್ಕೆ ಮುಂದಾದದಲ್ಲಿ ಸಮಾಜದಲ್ಲಿ ಉದ್ವಿಗ್ನತೆ ಕಾರಣವಾಗಲಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಜೆಡಿಯು ಪಕ್ಷದ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ಕಾರ್ಯಕರ್ತರ ಸಮಾವೇಶವೊಂದರಲ್ಲಿ ಭಾಗವಹಿಸಿ ಮಾತನಾಡಿದ "ಸಮಾಜದಲ್ಲಿ ಉದ್ವಿಗ್ನತೆ ಮತ್ತು ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸಲು ಕೆಲವರು ಬಯಸುತ್ತಾರೆ.ಅಂಬೇಡ್ಕರ್ ಅವರ (ಕರಡು) ಸಂವಿಧಾನವನ್ನು ಸಂವಿಧಾನ ಸಭೆ ಅಂಗೀಕರಿಸಿದೆ.ಮೀಸಲಾತಿಯು ಶೋಷಿತ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನೀಡಲಾಗಿದೆ ಎಂದು ಅವರು ಹೇಳಿದರು.


ಇನ್ನು ಮುಂದುವರೆದು ತಿಳಿಸಿದ ಅವರು "ಮೀಸಲಾತಿಯನ್ನು ಕೊನೆಗಾಣಿಸುವ  ಅಧಿಕಾರವನ್ನು ಯಾರು ಹೊಂದಿಲ್ಲ ಒಂದು ವೇಳೆ ಅಂತಹ ಸಂದರ್ಭ ಬಂದರೆ ಅದರ ತ್ಯಾಗಕ್ಕಾಗಿ ನಾವು ಸಿದ್ದ, ಇಂತಹ ವಿಷಯಗಳ ಬಗ್ಗೆ ಮಾತನಾಡುವವರಿಗೆ ಮೀಸಲಾತಿಯನ್ನು ಜಾರಿಗೆ ತರುವಲ್ಲಿ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ಅವರು ತಿಳಿಸಿದರು