ಸುಂದರಿಯರ ಅʼಗೌರವʼ ವಾರ್ : ಜಾಕ್ವೆಲಿನ್ ಮೇಲೆ ನೋರಾ ಮಾನನಷ್ಟ ಮೊಕದ್ದಮೆ ಕೇಸ್..!
ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಸೆಲೆಬ್ರಿಟಿಗಳಿಗೆ ವಂಚಿಸಿ ಬೆದರಿಸಿ ಸುಮಾರು ಇನ್ನೂರು ಕೋಟಿ ದೋಚಿರುವ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಬಾಲಿವುಡ್ ಬೆಡಗಿರಾದ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನೋರಾ ಫತೇಹಿ ಹೆಸರು ಕೇಳಿ ಬಂದಿರುವುದು ಜಗಜ್ಜಾಹಿರು ಆಗಿದೆ. ಜಾಕ್ವೆಲಿನ್ ಮತ್ತು ಸುಕೇಶ್ ಅವರ ಫೋಟೋಗಳು ಕೂಡ ವೈರಲ್ ಆಗಿದ್ದವು. ಜಾಕ್ವೆಲಿನ್‌ಗಾಗಿ ಸುಕೇಶ್ ಸಾಕಷ್ಟು ಹಣ ಖರ್ಚು ಮಾಡಿದ್ದಾರಂತೆ.
ಬೆಂಗಳೂರು : ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಸೆಲೆಬ್ರಿಟಿಗಳಿಗೆ ವಂಚಿಸಿ ಬೆದರಿಸಿ ಸುಮಾರು ಇನ್ನೂರು ಕೋಟಿ ದೋಚಿರುವ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಬಾಲಿವುಡ್ ಬೆಡಗಿರಾದ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನೋರಾ ಫತೇಹಿ ಹೆಸರು ಕೇಳಿ ಬಂದಿರುವುದು ಜಗಜ್ಜಾಹಿರು ಆಗಿದೆ. ಜಾಕ್ವೆಲಿನ್ ಮತ್ತು ಸುಕೇಶ್ ಅವರ ಫೋಟೋಗಳು ಕೂಡ ವೈರಲ್ ಆಗಿದ್ದವು. ಜಾಕ್ವೆಲಿನ್‌ಗಾಗಿ ಸುಕೇಶ್ ಸಾಕಷ್ಟು ಹಣ ಖರ್ಚು ಮಾಡಿದ್ದಾರಂತೆ.
ನೋರಾ ಫತೇಹಿ ಕೂಡ ಸುಕೇಶ್ ಕೈಯಿಂದ ಕೋಟ್ಯಂತರ ಮೌಲ್ಯದ ಉಡುಗೊರೆ ತೆಗೆದುಕೊಂಡಿದ್ದಾಳೆ. ಆದರೆ ಈ ಮನಿ ಲಾಂಡರಿಂಗ್ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತಂದಿದ್ದಕ್ಕಾಗಿ ನೋರಾ ಫತೇಹಿ ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತಂದು ಮಾನಹಾನಿ ಮಾಡಲಾಗುತ್ತಿದೆ ಎಂದು ನೋರಾ ದೂರಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಮಂದಿ ಜೊತೆ ರಿಷಬ್ : ಗುಟ್ಟು ಬಿಟ್ಟು ಕೊಡದ ಶೆಟ್ಟಿ...!
ತಾನು ಮತ್ತು ಸುಕೇಶ್ ಯಾವುದೇ ನೇರ ಸಂಪರ್ಕವನ್ನು ಹೊಂದಿಲ್ಲ ಎಂದು ನೋರಾ ಬಹಿರಂಗಪಡಿಸಿದ್ದಾರೆ. ಒಮ್ಮೆ ಸುಕೇಶ್ ಪತ್ನಿ ಲೀನಾ ಅವರ ಆಹ್ವಾನದ ಮೇರೆಗೆ ಹೋಗಿದ್ದೆ ಎಂದಿದ್ದಾಗ ಅವರು ಉಡುಗೊರೆ ನೋರಾ ನೀಡಿದರು ಎಂದು ಹೇಳುತ್ತಿದ್ದಾರೆ. ಆದರೆ ಈ ವಿಚಾರವಾಗಿ ಇಡಿ ಅಧಿಕಾರಿಗಳು ನೋರಾ ಅವರನ್ನು ಪ್ರಶ್ನಿಸಿದ್ದಾರೆ. ಹೊಸ ಐಫೋನ್, ದುಬಾರಿ ಬ್ಯಾಗ್‌ಗಳು ಮತ್ತು ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಲಾಯಿತು. ಈ ಬಗ್ಗೆ ಇಡಿ ನೋರಾಗೆ ಪ್ರಶ್ನೆಗಳನ್ನು ಕೇಳಿ ವಿವರ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.