Salman Khan: ಐಶ್ವರ್ಯಾ ರೈ, ಕತ್ರಿನಾ ಅಲ್ಲ.. ಸಲ್ಮಾನ್ ಈ ಖ್ಯಾತ ನಟಿಯನ್ನು ಮದುವೆಯಾಗುವ ಕನಸು ಕಂಡಿದ್ದರು.. ಆದರೆ!
Bollywood Star Salman Khan: ಸಲ್ಮಾನ್ ಖಾನ್ ಬಾಲಿವುಡ್ ನ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು. ಸಿನಿಮಾಗಳ ಹೊರತಾಗಿ, ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
Salman Khan Wants to Marry Juhi Chawla: ಸಲ್ಮಾನ್ ಖಾನ್ ಬಾಲಿವುಡ್ ನ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು. ಸಿನಿಮಾಗಳ ಹೊರತಾಗಿ, ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಸಲ್ಮಾನ್ ಅನೇಕ ನಾಯಕಿಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂದು ವದಂತಿಗಳಿವೆ.
ಆದರೆ, ಬಹುತೇಕ ಮದುವೆ ಮಂಟಪಕ್ಕೆ ಬಂದು ನಿಂತ ಘಟನೆಗಳೂ ನಡೆದಿವೆ. ಸಲ್ಮಾನ್ ಖಾನ್ ಐಶ್ವರ್ಯಾ ರೈ ಹಾಗೂ ಕತ್ರಿನಾ ಜೊತೆ ಮದುವೆಯಾಗಲು ಯತ್ನಿಸಿ ವಿಫಲವಾಗಿರುವುದು ಗೊತ್ತೇ ಇದೆ. ಆದರೆ, ಸಲ್ಲು ಭಾಯ್ ಅವರಿಗಿಂತ ಮೊದಲು ಬೇರೆ ನಾಯಕಿಯನ್ನು ಮದುವೆಯಾಗಲು ನಿರ್ಧರಿಸಿದ್ದು ಗೊತ್ತೇ?
ಇದನ್ನೂ ಓದಿ-ಪ್ರಜ್ವಲ್ ದೇವರಾಜ್ ʼಮಾಫಿಯಾʼ ಟೀಸರ್ ರಿಲೀಸ್..! ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್ ನಲ್ಲಿ ತೆರೆಗೆ
ಸಲ್ಮಾನ್ ಖಾನ್ ಆಗಿನ ಬಾಲಿವುಡ್ ನಾಯಕಿ ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿದ್ದರು. ಇದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಆದರೆ, ಜೂಹಿ ಚಾವ್ಲಾ ತಂದೆ ಮದುವೆಗೆ ಒಪ್ಪದ ಕಾರಣ ಕಥೆ ಅಲ್ಲಿಗೆ ಮುಗಿಯಿತು ಎಂದು ಸಲ್ಮಾನ್ ಹೇಳಿದ್ದಾರೆ.
'ಜೂಹಿಯ ಮನಸ್ಸು ತುಂಬಾ ಪರಿಶುದ್ಧವಾಗಿದೆ. ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡುತ್ತೀರಾ ಎಂದು ಜೂಹಿಯ ತಂದೆಯನ್ನು ಕೇಳಿದೆ. ಆದರೆ, ಅವರು ಇಲ್ಲ ಎಂದರು. ಯಾಕೆ ಅಂತ ನನಗೂ ಗೊತ್ತಿಲ್ಲ. ನಾನು ಕೇಳಲಿಲ್ಲ. ಬಹುಶಃ ಅವರಿಗೆ ಇದು ಇಷ್ಟವಾಗದೇ ಇರಬಹುದು' ಎಂದು ಸಲ್ಮಾನ್ ಹೇಳಿದ್ದಾರೆ.
ಜೂಹಿ ಚಾವ್ಲಾ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಯಾವುದೇ ಸಿನಿಮಾ ಮಾಡಿಲ್ಲ . ಗೋವಿಂದ, ಅನಿಲ್ ಕಪೂರ್ ಮತ್ತು ಜೂಹಿ ಚಾವ್ಲಾ ಅಭಿನಯದ 'ದೀವಾನಾ ಮಸ್ತಾನಾ' ಚಿತ್ರದಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಜೂಹಿ ಚಾವ್ಲಾ ಅವರು ಉದ್ಯಮಿ ಜಯ್ ಮೆಹ್ತಾ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ.. ಆದರೆ ಸಲ್ಮಾನ್ ಖಾನ್ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ..
ಇದನ್ನೂ ಓದಿ-ಪ್ರಜ್ವಲ್ ದೇವರಾಜ್ ʼಮಾಫಿಯಾʼ ಟೀಸರ್ ರಿಲೀಸ್..! ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್ ನಲ್ಲಿ ತೆರೆಗೆ
ಸಲ್ಮಾನ್ ಕೂಡ ಸಂಗೀತಾ ಬಿಜಲಾನಿ ಎಂಬ ಮತ್ತೊಬ್ಬ ನಾಯಕಿಯನ್ನು ಮದುವೆಯಾಗಲು ಯತ್ನಿಸಿದ್ದರು. ಮದುವೆ ಪತ್ರಿಕೆಗಳನ್ನೂ ಮುದ್ರಿಸಿ ಅತಿಥಿಗಳಿಗೂ ಹಂಚಲಾಗಿತ್ತು... ಆದರೆ, ಮದುವೆಗೂ ಮುನ್ನ ಸಲ್ಮಾನ್ ಖಾನ್ ತಮಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಸಂಗೀತಾ ಮದುವೆಯನ್ನು ರದ್ದುಗೊಳಿಸಿದ್ದರು. ಇದನ್ನು ಸಲ್ಮಾನ್ 'ಕಾಫಿ ವಿತ್ ಕರಣ್' ಶೋನಲ್ಲಿ ಬಹಿರಂಗಪಡಿಸಿದ್ದರು..
ಸಲ್ಮಾನ್ ಖಾನ್ ಅವರ ವೃತ್ತಿಜೀವನವು ಮೊದಲಿನಂತಿಲ್ಲ. ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಮತ್ತು ಟೈಗರ್ 3 ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿವೆ. ಸಲ್ಮಾನ್ ಭರವಸೆಯೆಲ್ಲಾ ಸಿಕಂದರ್ ಚಿತ್ರದ ಮೇಲಿದೆ. ಸದ್ಯ ಈ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಕಾಲಿವುಡ್ ನಿರ್ದೇಶಕ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸತ್ಯರಾಜ್, ಸುನೀಲ್ ಶೆಟ್ಟಿ, ರಶ್ಮಿಕಾ ಮಂದಣ್ಣ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಈದ್ ಹಬ್ಬದಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.