Yuvaraj singh wife hazel keech: ಅನುಷ್ಕಾ ಸೇರಿದಂತೆ ಹಲವಾರು ಬಾಲಿವುಡ್‌ ನಟಿಯರು ಕ್ರಿಕೆಟರ್‌ಗಳನ್ನು ಮದುವೆಯಾಗಿದ್ದಾರೆ.. ಅದರಲ್ಲಿ ಬಾಲಿವುಡ್‌ ನಟಿ ಹೇಜಲ್‌ ಕೀಚ್‌ ಕೂಡ ಒಬ್ಬರು.. ಇವರು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಪತ್ನಿ ಎನ್ನುವುದು ಎಲ್ಲರಿಗೂ ಗೊತ್ತು.. ಹಾಗಾದರೆ ಈ ಬಾಲಿವುಡ್‌ ನಟಿಯ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ಇದೀಗ ತಿಳಿದುಕೊಳ್ಳೋಣ.. 


COMMERCIAL BREAK
SCROLL TO CONTINUE READING

ನಟಿ-ಮಾಡೆಲ್ ಆಗಿ ಗುರುತಿಸಿಕೊಂಡಿರುವ ಹೇಜಲ್ ಕೀಚ್ 28 ಫೆಬ್ರವರಿ 1987 ರಂದು UK ನಲ್ಲಿ ಜನಿಸಿದರು... ಇವರು ತಮ್ಮ 18 ನೇ ವಯಸ್ಸಿನಲ್ಲಿ ರಜೆಗಾಗಿ ಮುಂಬೈಗೆ ಬಂದು.. ಹಿಂತಿರುಗಿ ಹೋಗದೇ, ಅಲ್ಲಿಯೇ ಮಾಡೆಲಿಂಗ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.


ಇದನ್ನೂ ಓದಿ-ಸಿನಿಮಾಗಳಿಗೆ ಸಬ್ಸಿಡಿ ಕೊಡಿ ಎಂದ ಡಾಲಿ ಮನವಿ... ಸ್ಥಳದಲ್ಲೇ ಸಮ್ಮತಿ ಸೂಚಿಸಿದ ಸಿಎಂ ಸಿದ್ದರಾಮಯ್ಯ


ನಂತರ ಹೇಜಲ್ ಮ್ಯೂಸಿಕ್ ವೀಡಿಯೊಗಳಲ್ಲಿ ಮತ್ತು ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು... ನಂತರ ಇವರು 2011 ರಲ್ಲಿ ಬಾಡಿಗಾರ್ಡ್ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.. ಈ ಚಿತ್ರದಲ್ಲಿ, ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರೆ.. ಕರೀನಾ ಅವರ ಆತ್ಮೀಯ ಸ್ನೇಹಿತೆಯ ಪಾತ್ರದಲ್ಲಿ ಮಿಂಚಿದ್ದರು.. ಇಷ್ಟೇ ಅಲ್ಲ.. ಹೇಜಲ್‌ ಬಿಗ್‌ ಬಾಸ್‌ 7 ಸೇರಿದಂತೆ ಝಲಕ್ ದಿಖ್ಲಾ ಜಾ ನಂತಹ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.


ಹೇಜಲ್ 2016 ರಲ್ಲಿ ಮಾಜಿ ಭಾರತೀಯ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರನ್ನು ವಿವಾಹವಾದರು.. ನಂತರ ಚಿತ್ರರಂಗಕ್ಕೆ ವಿದಾಯ ಹೇಳಿದರು.. ಇವರು ಸಿನಿರಂಗದಿಂದ ದೂರವಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.. 


ಇದನ್ನೂ ಓದಿ-Watch: ಬಳ್ಳಾರಿಯ ಅಮೃತೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗಿಯಾದ ರಾಜಮೌಳಿ, ಯಶ್.. ವಿಡಿಯೋ ವೈರಲ್!‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.