ಬಿಡುಗಡೆಯಾಯಿತು `ನಾಟ್ ಔಟ್` ಇದು ಹುಲಿ - ಕುರಿ ಆಟ ಚಿತ್ರದ ಮೋಷನ್ ಪೋಸ್ಟರ್
ರಾಷ್ಟ್ರಕೂಟ ಪಿಕ್ಚರ್ಸ್ ಸಂಸ್ಥೆಯ ಮೊದಲ ಚಿತ್ರವಾಗಿ `ಕಿಸ್` ಚಿತ್ರವನ್ನು ನಿರ್ಮಿಸಿಲಾಗಿತ್ತು. ಇದೀಗ `ನಾಟ್ ಔಟ್` ನಿರ್ಮಾಣವಾಗಿದೆ. ಇನ್ನೂ ಎರಡು ಚಿತ್ರಗಳು ಸಿದ್ದವಾಗಿದ್ದು, ಈ ಕುರಿತು ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ಮಾಪಕ ಸಂಶುದ್ದೀನ್ ತಿಳಿಸಿದ್ದಾರೆ.
ಬೆಂಗಳೂರು : ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಸಂಶುದ್ದೀನ್ ಎ ನಿರ್ಮಿಸಿರುವ "ನಾಟ್ ಔಟ್" ಚಿತ್ರದ ಮೋಷನ್ ಪೋಸ್ಟರ್ ಇತ್ತೀಚಿಗೆ ಬಿಡುಗಡೆಯಾಯಿತು. ಎಂ.ಎಲ್.ಸಿ ಪುಟ್ಟಣ್ಣ, ನಿರ್ದೇಶಕ ಎ.ಪಿ.ಅರ್ಜುನ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ರಾಷ್ಟ್ರಕೂಟ ಪಿಕ್ಚರ್ಸ್ ಸಂಸ್ಥೆಯ ಮೊದಲ ಚಿತ್ರವಾಗಿ "ಕಿಸ್" ಚಿತ್ರವನ್ನು ನಿರ್ಮಿಸಿಲಾಗಿತ್ತು. ಇದೀಗ "ನಾಟ್ ಔಟ್" ನಿರ್ಮಾಣವಾಗಿದೆ. ಇನ್ನೂ ಎರಡು ಚಿತ್ರಗಳು ಸಿದ್ದವಾಗಿದ್ದು, ಈ ಕುರಿತು ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ಮಾಪಕ ಸಂಶುದ್ದೀನ್ ತಿಳಿಸಿದ್ದಾರೆ.
ಇದನ್ನೂ ಓದಿ : ಆರಾಮಾಗಿದ್ದೇನೆ.. ಜಸ್ಟ್ ಕೆಮ್ಮಿದೆ ಅಷ್ಟೇ, : ಆಸ್ಪತ್ರೆಗೆ ದಾಖಲಾದ ಬಗ್ಗೆ ಉಪೇಂದ್ರ ಸ್ಪಷ್ಟನೆ
"ಕಿಸ್" ಚಿತ್ರ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಅದರ ಪ್ರಚಾರ ನೋಡಿ, ಸಿನಿಮಾವನ್ನು ಇಷ್ಟು ಪ್ರೀತಿಸುವವರ ಬಳಿ ನಾನು ಕೆಲಸ ಮಾಡಬೇಕು ಅನಿಸಿತ್ತು. ಈಗ ಆ ಆಸೆ ಈಡೇರಿದೆ. "ನಾಟ್ ಔಟ್" ಎಂದರೆ ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡುವ ತೀರ್ಪು ಎಂದು ಚಿತ್ರದ ಬಗ್ಗೆ ವಿವರಿಸಿದ್ದಾರೆ ಸಂಶುದ್ದೀನ್.
ಪ್ರತಿ ಆಟದಲ್ಲೂ ಅಂಪೈರ್ ಇರುವ ಹಾಗೆ ಜೀವನದ ಆಟಕ್ಕೂ ಒಬ್ಬ ಅಂಪೈರ್ ಇರ್ತಾನೆ. ಹುಲಿ - ಕುರಿ ಎಂಬ ಹಳ್ಳಿ ಸೊಗಡಿನ ಆಟವನ್ನ ಹೇಗೆ ಆಡುತ್ತಾರೆಯೋ ಅದೇ ರೀತಿ ಚಿತ್ರದ ಕಥೆ ಸಾಗುತ್ತೆ. ಆಟದಲ್ಲಿ ಬೆಟ್ಟದ ತುದಿಯಲ್ಲಿರುವ ಹುಲಿಗಳು ಮತ್ತು ಬೆಟ್ಟದ ತಳದಲ್ಲಿರುವ ಕುರಿಗಳು ಬೆಟ್ಟವನ್ನು ಹತ್ತುವಾಗ ಹುಲಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನಗಳನ್ನು ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಅದನ್ನ ನೋಡಬಹುದು. ಸಿನಿಮಾದಲ್ಲಿ ಎಲ್ಲಾ ಪಾತ್ರಗಳು ಕಥೆಗೆ ಪೂರಕವಾಗಿವೇ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಅಜನೀಶ್ ಲೋಕನಾಥ್ ಕಿಡ್ನಾಪ್…!! ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಆ ರೀತಿಯ ಕಥಾಹಂದರ ಹೊಂದಿರುವ "ನಾಟ್ ಔಟ್" ನ ನಾಯಕನಾಗಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಜಯ್ ಪೃಥ್ವಿ ಅಭಿನಯಿಸಿದ್ದಾರೆ. ರಚನಾ ಇಂದರ್ ನಾಯಕಿ. ರವಿಶಂಕರ್, ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಸಲ್ಮಾನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಬೆಂಗಳೂರು - ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಹಾಲೇಶ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. "ನಾಟ್ ಔಟ್" ತೆರೆಗೆ ಬರಲು ಸಿದ್ದವಾಗಿದೆ. ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಅಂಬರೀಶ್ ತಿಳಿಸಿದ್ದಾರೆ.
ನಾನು ಏಕಾಏಕಿ ಚಿತ್ರರಂಗಕ್ಕೆ ಬಂದಿಲ್ಲ. ಐದನೇ ತರಗತಿಯಿಂದಲೇ "ಬಿಂಬ" ಮೂಲಕ ಸಾಕಷ್ಟು ಕಲಿತೆ. ನಂತರ ಪ್ರಸಿದ್ಧ ತರಬೇತಿ ಶಾಲೆಯಲ್ಲಿ ನಟನೆ ಕೂಡ ಕಲಿತೆ. "ಮೆಹಬೂಬ" ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನೂ ಮೂರು, ನಾಲ್ಕು ಚಿತ್ರಗಳಲ್ಲೂ ಅಭಿನಯಿಸಿದ್ದೇನೆ. ಈಗ "ನಾಕ್ ಔಟ್" ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರ ಹಾಗೂ ನನ್ನ ಪಾತ್ರ ಚೆನ್ನಾಗಿದೆ ಎಂದಿದ್ದಾರೆ ನಾಯಕ ಅಜಯ್ ಪೃಥ್ವಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ